ಕೊರ್ರೇವು ( ಆಂಧ್ರ ಪ್ರದೇಶ): ಹೇಮಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರ್ರೇವು ಗ್ರಾಮದಲ್ಲಿ ರಸ್ತೆ ಬದಿಯ ಪಿಡಬ್ಲ್ಯೂಎಸ್ ಯೋಜನೆಯ ಕೊಳವೆಬಾವಿಯಲ್ಲಿದ್ದ ಮೋಟಾರ್ ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿರುವುದನ್ನು ಎತ್ತಿರುವುದು.
ಕೊರ್ರೇವು ಗ್ರಾಮಕ್ಕೆ ಕುಡಿಯುವ ನೀರಿನ ಅಭಾವ ಇರುವ ಕಾರಣ, ಕೊಳವೆ ಬಾವಿಯ ನೀರನ್ನು ಕುಡಿದು ಜೀವನ ಸಾಗಿಸುತ್ತಿದ್ದಾರೆ. ಬೇಸಿಗೆ ಆರಂಭವಾಗಿರುವ ಕಾರಣ ಕುಡಿಯುವ ನೀರಿಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಕೊಳವೆ ಭಾವಿಯನ್ನು ದುರಸ್ತಿ ಮಾಡುವ ಕಾರ್ಯ ಭರದಿಂದ ಸಾಗಿದೆ.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸರಪಂಚ್ ತಿಪ್ಪೇಸ್ವಾಮಿ, ಉಪ ಸರಪಂಚ್ ಕುಮಾರ್, ಪಂಚಾಯಿತಿ ಕಾರ್ಯದರ್ಶಿ ನರೇಶ್ ಬಾಬು, ಸ್ಥಳೀಯ ಮುಖಂಡರಾದ ಚಂದ್ರಪ್ಪ, ವಾಟರ್ ಮನ್ ರಾಜು, ಗ್ರಾಮದ ಸ್ವಯಂ ಸೇವಕರಾದ ನಾಗರಾಜು, ಮಾಲಿಂಗಪ್ಪ, ಇ.ನಾಗರಾಜು ಇತರರು ಭಾಗವಹಿಸಿದ್ದರು.