ಬೆಂಗಳೂರು: ಹಾಸನದಲ್ಲಿ ದೇಶದ ಅತ್ಯಂತ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ನಡೆದಿದ್ದು, ಸೆಕ್ಸ್ ಧೋಖದ ರೂವಾರಿ ಹಾಸನ ಜಿಲ್ಲೆ ಹೊಳೆ ನರಸೀಪುರ ಕ್ಷೇತ್ರದ ಎಂಪಿ ಪ್ರಜ್ವಲ್ ರೇವಣ್ಣ ಎಂದು ಮೇಲ್ನೋಟಕ್ಕೆ ಬಿಂಬಿತವಾಗಿದೆ ಎಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು.
ಬೆಂಗಳೂರಿನ ಮೌರ್ಯವೃತ್ತದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಪತ್ರಿಕಾಗೋಷ್ಟಿ ನಡೆಸಲಾಯಿತು. ಈ ವೇಳೆ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ಪ್ರಜ್ವಲ್ ರೇವಣ್ಣ ಸಾವಿರಾರು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಅಪ್ಪ ಮಗ ಸೇರಿಕೊಂಡು ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ಕಾಣಬರುತ್ತದೆ ಎಂದು ಆರೋಪಿಸಿದರು.
ಪ್ರಕರಣ ಸಂಬಂಧ ಮೂರು ಆಯಾಮಯದಲ್ಲಿ SIT ತಂಡ ತನಿಖೆ ನಡೆಯುತ್ತಿದ್ದು, ಆದರೆ ಪ್ರಜ್ವಲ್ ಮಾತ್ರ ವಿದೇಶಕ್ಕೆ ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಪ್ರಜ್ವಲ್ ವಿಡಿಯೋದಲ್ಲಿ ನನ್ನ ಪಾತ್ರ ಇಲ್ಲ ಎಂದರೆ ಧೈರ್ಯವಾಗಿ ಮುಂದೆ ಬಂದು ವಿಚಾರಣೆಗೆ ಹಾಜರಾಗಲಿ, ಅದನ್ನು ಬಿಟ್ಟು ವಕೀಲರನ್ನು ಬಿಟ್ಟು 7 ದಿನ ಕಾಲಾವಕಾಶ ಕೋರಿರುವುದು ಅವರ ಬಂಡವಾಳ ತಿಳಿಯುತ್ತದೆ.
ಪ್ರಜ್ವಲ್ ಸಾವಿರಾರು ಮಹಿಳೆಯರನ್ನು ಬಳಸಿಕೊಂಡಿರುವ ಬಗ್ಗೆ ಸಂತ್ರಸ್ತ ಮಹಿಳೆಯರು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿದ್ದಾರೆ. ಪ್ರಜ್ವಲ್ ಎಸ್ಟು ಕ್ರೂರಿ ಎಂದರೆ ತಾಯಿಗೆ ಸಮಾನವಾದ ಮಹಿಳೆಯನ್ನು ಎಷ್ಟೇ ಪರಿಪರಿಯಾಗಿ ಬೇಡಿಕೊಂಡರು ಬಿಟ್ಟಿಲ್ಲದಿರುವುದು ಆತನ ಗೋಮುಖ ವ್ಯಾಘ್ರತನವನ್ನು ತೋರಿಸುತ್ತದೆ ಎಂದು ಪ್ರಜ್ವಲ ವಿರುದ್ಧ ಗರಂ ಆದರು.
ಪ್ರಜ್ವಲ್ ಕೃತ್ಯ ರೇಪಿಸ್ಟ್ ಉಮೇಶ್ ರೆಡ್ಡಿಗಿಂತಲು ವಿಭಿನ್ನ!
ನಟ ಚೇತನ್ ಮಾತನಾಡಿ, ಇದೊಂದು ಅಮಾನವೀಯ ಕೃತ್ಯ, ವಿಕೃತ ಮನಸನ್ನು ಇಲ್ಲಿ ಕಾಣಬಹುದು, ರೇಪಿಸ್ಟ್ ಉಮೇಶ್ ರೆಡ್ಡಿಗಿಂತಲೂ ಒಂದು ಕೈ ಮುಂದೆ ಎಂದರೂ ತಪ್ಪಾಗಲಾರದು. ದೊಡ್ಡ ಗೌಡರ ಕುಟುಂಬದಲ್ಲಿ ಹುಟ್ಟಿ ನೀಚಕೃತ್ಯ ಮಾಡಿ ಇಡೀ ಕುಟುಂಬವೇ ತಲೆ ತಗ್ಗಿಸುವಂತೆ ಮಾಡಿದೆ.
ಆತನ ವಿಕೃತಿಗೆ ಮತ್ತೊಂದು ಉದಾರಣೆ ತಾನು ಮಾಡುತ್ತಿರುವ ಕೆಲಸ ಘನಘೋರವಾಗಿದ್ದರು ಸಹಾ ಬಹುತೇಕ ವಿಡಿಯೋಗಳ ಚಿತ್ರೀಕರಣ ಪ್ರಜ್ವಲ್ ಅವರೇ ಗುಪ್ತವಾಗಿ ಮಾಡಿರುವುದು ಒಂದಿಷ್ಟು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಇಲ್ಲಿನ ಕೃತ್ಯಗಳನ್ನು ನೋಡಿದ್ರೆ ವಿಕೃತ ಕಾಮಿಗಳಿಗಿಂತ ಸೈಕೋಪಾತ್ ವರ್ತನೆ ಎಂಬನತೆ ಭಾಸವಾಗುತ್ತದೆ. ಇಂತಹ ವ್ಯಕ್ತಿ ರಾಜಕಾರಣದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ಇರಲು ಯೋಗ್ಯರಲ್ಲ ಎಂದರು.
ಲೈಂಗಿಕ ಕೃತ್ಯದಲ್ಲಿ ಬೇರೆಯವರ ಕೈವಾಡವಿದ್ದು ನನ್ನನು ಕೃತ್ಯದಲ್ಲಿ ಸಿಲುಕಿಸಿದ್ದಾರೆ ಎಂದು ಹೇಳುವ ಪ್ರಜ್ವಲ್ ಅವರು ರಾತ್ರೋರಾತ್ರಿ ದೇಶ ಬಿಟ್ಟು ಯಾಕೆ ಪಲಾಯನವಾಗುತ್ತಾರೆ? ಅರ್ಥವೇನು. ಇದರ ಜೊತೆಗೆ ದೇಶ ಬಿಟ್ಟು ಹೋಗಲು ಸಹಕರಿಸಿದವರಿಗೂ ಶಿಕ್ಷೆಯಾಗಬೇಕು ಎಂದು ತನಿಖಾ ತಂಡಕ್ಕೆ ಮನವಿ ಮಾಡಿದರು.
ಅತ್ಯಾಚಾರ ಮಾಡಿ ಕೋರ್ಟ್ ನಲ್ಲಿ ತಡೆಯಾಜ್ನೆ! ಇದ್ಯಾವ ನ್ಯಾಯ?
ಜನ ಸಾಮಾನ್ಯರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸುಳ್ಳು ಹೇಕೊಂಡು ಹೇಹ ಕೃತ್ಯ ನಡೆಸಿರುವುದು ಯಾರು ಕ್ಷಮಿಸಲಾರದ ಅಪರಾಧವಾಗಿದೆ. ಚಿಕ್ಕ ಅವಯಸಿನವರಿಂದ ಹಿಡಿದು ದೊಡ್ಡವರನ್ನು ಲೈಂಗಿಕ ಕೃತ್ಯದಲ್ಲಿ ಬಳಸಿಕೊಂಡಿದ್ದಾರೆ ಎಂದರೆ ಜಿಲ್ಲೆಯಲ್ಲಿ ಯಾವ ಮಟ್ಟಕ್ಕೆ ಪ್ರಭಾವ ಹೊಂದಿರಬೇಕು ಎಂದು ಕರ್ನಾಟಕ ಭೀಮ ಸೇನೆಯ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ತಿಳಿಸಿದರು.
ಯಾವುದೇ ಪಕ್ಷ ಆದರೂ ಸಹಾ ನಾಯಕರು ಕೃತ್ಯ ಎಸಗಿ ಕೋರ್ಟ್ ನಲ್ಲಿ ತಡೆಯಾಜ್ನೆ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ನೀವೆಲ್ಲ ವಿಧಾನಸೌಧ, ಸಂಸತ್ ನಲ್ಲಿ ಕೂರಲು ಯೋಗ್ಯತೆ ಇಲ್ಲ ಎಂದು ಕಡ್ಡಿ ತುಂದಾಗುವಂತೆ ತಿಳಿಸಿದರು.
ಹಾಗಾದ್ರೆ ನೀವೆಲ್ಲ ಮಾಡಬಾರದ ಕೆಟ್ಟ ಕೆಲಸಗಳನ್ನು ಮಾಡಿದವರನ್ನು ಜನರು ಚುನಾವಣೆಯಲ್ಲಿ ಹಾರಿಸಿರುವುದು ಇದಕ್ಕೇನ? ಇಂತಹ ಕೃತ್ಯಗಳನ್ನು ಮಾಡಲು. ಹೆಣ್ಣು ಮಕ್ಕಳನ್ನು ರೇಪ್ ಮಾಡಲು ನೀವು ಅಲ್ಲಿಗೆ ಹೋಗಿದ್ದೀರಿ. ಮತದಾರರು ಮಾತಾಕಿ ಕಲಿಸಿರುವುದು ಅದಕ್ಕೇನೆ ಎಂದು ತರಾಟೆಗೆ ತೆಗೆದುಕೊಂಡರು. ಅಂಬೇಡ್ಕರ್ ಅವರು ಸಮಾಜದ ಎಲ್ಲ ಜನರಿಗೂ ಸಮಾನತೆ, ನ್ಯಾಯ ಸಿಗಲು ಎಂದು ಸಂವಿಧಾನದಲ್ಲಿ ರಚನೆ ಮಾಡಿದರೆ, ನೀವು ಮಾಡುವ ಕೆಲಸವಾದರೂ ಏನು ಎಂಬುದನ್ನು ತಿಳಿಯುತ್ತಿಲ್ಲ. ಜನರ ಪ್ರತಿನಿಧಿಯಾಗಿ ನಿಮ್ಮನ್ನು ಸಂಸತ್ ಗೆ ಕಳುಹಿಸಿದರೆ ನೀವು ಮಾಡುವ ಕೆಲಸವಾದರೂ ಏನು ಎಂದು ಪ್ರಶ್ನೆ ಮಾಡಿದರು. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹೆಣ್ಣು ಮಕ್ಕಳ ಮೇಲೆ ಹತ್ಯಾಚಾರ ಮಾಡಿದ್ದರಲ್ಲ ನಿಮಗೆ ಶೋಭೆ ತರುತ್ತದ. ನಿಮಗೆ ಸ್ವಲ್ಪವಾದರೂ ನಾಚಿಕೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದರು.
ನೇಹಾ ಹತ್ಯೆಯಲ್ಲಿ NDA ಮೈತ್ರಿ ಪಕ್ಷದಿಂದ ಕೋಮು ದ್ವೇಷ?
ಇನ್ನು ಹುಬ್ಬಳ್ಳಿಯಲ್ಲಿ ನಡೆದ ನೆಹ ಅತ್ತೆ ಪ್ರಕಾರದಲ್ಲಿ ಕೋಮು ದಲ್ಲೂರಿಯನ್ನು ಉಂಟುಮಾಡು ಸಲುವಾಗಿ ಎನ್.ಡಿ.ಎ ಮಿತ್ರ ಪಕ್ಷಗಳು ಸಾಕಷ್ಟು ಸಂಚನ್ನು ರೂಪಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕೋಮು ದಲ್ಲೂರಿಯನ್ನು, ದ್ವೇಷ ಹೆಚ್ಚಿಸುವ ಸಲುವಾಗಿ ಬಿಜೆಪಿಯವರು ಹುನ್ನಾರ ಮಾಡುತ್ತಿದ್ದಾರೆ. ಒಂದೆರಡು ಕಲಬೆಗಳನ್ನು ಇಟ್ಟುಕೊಂಡು ಬಿಜೆಪಿಯವರು ಸುಖ ಸುಮ್ಮನೆ ಖ್ಯಾತಿ ತೆಗೆಯುತ್ತಿದ್ದಾರೆ. ನೇಹ ಕೊಲೆ ಪ್ರಕರಣವನ್ನು ದೇಶ ಮಟ್ಟದಲ್ಲಿ ಪ್ರತಿಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿಯವರ ಆಡಳಿತದಲ್ಲಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಸಹ ಇಲ್ಲಿಯವರೆಗೆ ಸಾಕಷ್ಟು ವ್ಯತ್ಯಾಸಗಳು ರಾಜ್ಯ ದೇಶದಲ್ಲಿ ನಡೆಯುತ್ತಿದೆ ಅದರಲ್ಲೂ ಸಹ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಕರಣಗಳು ಬಿಜೆಪಿಯಲ್ಲಿ ದಾಖಲಾಗಿವೆ ಆದರೂ ಸಹ ಮೋದಿ ಯಾಕೆ ಸುಮ್ಮನಿದ್ದಾರೆ ಎಂಬುದು ಪ್ರೇಕ್ಷಪ್ರಶ್ನೆಯಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಪತ್ರಿಯಾಗೋಷ್ಠಿಯಲ್ಲಿ ಕರ್ನಾಟಕ ಅಹಿಂದ ಸಂಘಟನಾ ಒಕ್ಕೂಟದ ಪದಾಧಿಕಾರಿಗಳಾದ ನಟ ಚೇತನ್, ರಾಜಣ್ಣ, ಕೆಸಿ ನಾಗರಾಜ, ದಲಿತ ರಮೇಶ, ಶಂಕರ್ ರಾಮಲಿಂಗಯ್ಯ ಲಿಂಗರಾಜು, ಹೆಬ್ಬಾಳ ವಕಟೇಶ್, ಕೆ ಎಮ್ ಸಂದೇಶ್, ಮುನಿ ಮಾರಪ್ಪ, ಟೈಗರ್ ಅರುಣ್ , ಟಿವಿ ಸಂಪಂಗಿ, ರಮೇಶ್ ಕುಣಿಗಲ್, ನರಸಿಂಹಮೂರ್ತಿ, ಆರ್ ಲೋಕನಾಥ್, ಸೋರಹುಣಸೆ ವೆಂಕಟೇಶ್ , ಆರ್ ಭಾಸ್ಕರ್ ಪ್ರಸಾದ್, ಸೇರಿದಂತೆ ಸಾಕಷ್ಟು ಜನ ಒಕ್ಕೂಟದ ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.