ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ / ಸಾಧಕರಿಗೆ /ಪರಿಣಿತರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಆಗ್ರಹಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯವಾಗಿದೆ. ಸಾಮಾಜಿಕ ಅಸಮಾನತೆ ಶೈಕ್ಷಣಿಕ ಹಿಂದುಳಿದಿರುವಿಕೆ, ಆರ್ಥಿಕ ದುರ್ಬಲತೆ, ಕೇವಲ 10 ಲಕ್ಷ ಜನಸಂಖ್ಯೆ ಹಾಗೂ ರಾಜಕೀಯ ಪ್ರಾತಿನಿಧ್ಯ ಮತ್ತು ಸ್ನಾನಮಾನ ಇಲ್ಲದಿರುವುದು ಈ ಸಮುದಾಯ ಹಿಂದುಳಿಯಲು ಪ್ರಮುಖ ಕಾರಣಗಳಾಗಿವೆ.
ಕಾಂಗ್ರೆಸ್ ನಲ್ಲಿ ಮಡಿವಾಳ ಸಮುದಾಯದ ಬಹಳ ಮಂದಿ ರಾಜಕೀಯ ಪರಿಣತರು, ಸಕ್ರಿಯ ರಾಜಕಾರಣಿಗಳು ಇದ್ದು ಯಾರಿಗೆ ಬೇಕಾದರೂ ಸಹ ಈ ಭಾರಿಯ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿ, ನಾವು ಇಂತವರಿಗೆ ನೀಡುವಂತೆ ಒತ್ತಾಯ ಮಾಡುವುದಿಲ್ಲ, ಆದರೆ ಒಬ್ಬರಿಗಾದರು ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಕೆಲಸ ವಾಗಬೇಕಾದರೆ ಮಡಿವಾಳ ಸಮುದಾಯದ ನಾಯಕರಿಗೆ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ ಆರ್ ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ಸಣ್ಣ ಸಮುದಾಯವಿದ್ದು, ಎಲಾಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಮಡಿವಾಳ ಸಮುದಾಯ ಮುನ್ನಲೆಗೆ ಬರಬೇಕಾದರೆ ರಾಜಕೀಯ ಸ್ಥಾನಮಾನ ಬಹಳ ಅವಶ್ಯಕವಾಗಿದೆ. ಕಾಂಗ್ರೆಸ್ ಪಕ್ಷಕಾಗಿ ದುಡಿದಿರುವ ಅನೇಕರು ಇದ್ದಾರೆ. ಅಂತಹವರನ್ನು ಗುರುತಿಸಿ ರಾಜಕೀಯ ಸ್ಥಾನಮಾನ ನೀಡಿದರೆ ಸಮುದಾಯ ಬೆಳೆಯುವ ಜೊತೆಗೆ ಪಕ್ಷಕ್ಕೆ ಅನುಕೂಲವಾಗಲಿದೆ. ಈ ಸಂಬಂಧ ಕಾಂಗ್ರೆಸ್ ನ ಎಲ್ಲಾ ಪ್ರಮುಖ ನಾಯಕರಿಗೆ ಮನವಿ ಮಾಡಲಾಗಿದೆ, ದೆಹಲಿಗೆ ಸಿಎಂ ಹೋಗಲಿದ್ದಾರೆ. ಅಲ್ಲಿ ಕೂಲಂಕುಶವಾಗಿ ಚರ್ಚಿಸಿ ಯಾರಿಗೆ ಟಿಕೆಟ್ ನೀಡಬೇಕು ಎಂದು ತಿಳಿಸಲಿದ್ದಾರೆ ಎಂದರು.
ಸ್ವಾತಂತ್ರ್ಯಾ ನಂತರದ 77 ವರ್ಷಗಳ ಬಳಿಕವೂ ಸಹ ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯಕ್ಕೆ ಯಾವುದೇ ರೀತಿಯ ರಾಜಕೀಯ ಪ್ರಾತೀನಿಧ್ಯ ಹಾಗೂ ಸ್ಥಾನಮಾನ ಲಭೀಸದಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ವರ್ತಮಾನದಲ್ಲಿನ ಚುನಾವಣೆ ವ್ಯವಸ್ಥೆಯಲ್ಲಿ ದೊಡ್ಡ, ದೊಡ್ಡ ಹಾಗೂ ಬಲಾಡ್ಯ, ಸಮುದಾಯಗಳ ನಡುವೆ ಸಣಸಾಡಿ ರಾಜಕೀಯ ಪ್ರಾತೀನಿಧ್ಯ ಪಡೆಯುವುದು ಅತ್ಯಂತ ಸಣ್ಣ ಸಮುದಾಯವಾದ ಮಡಿವಾಳ ಸಮಾಜಕ್ಕೆ ಸಾಧ್ಯವಿಲ್ಲದ ಸಂಗತಿಯಾಗಿದೆ.
ಪ್ರಜಾಪುಭುತ್ವ ವ್ಯವಸ್ಥೆ ಸ್ಥಾಪನೆಯಾದ ನಂತರ ಮಡಿವಾಳ ಸಮುದಾಯಕ್ಕೆ, ರಾಜಕೀಯ ಪ್ರಾತೀನಿಧ್ಯ ದೊರೆತದ್ದು ಅತೀ ವಿರಳ ಹಾಗೂ ಅಲ್ಪ ಮಾತ್ರ 1980 ರಲ್ಲಿ ಜನತಾ ಪಕ್ಷದಿಂದ ಮಡಿವಾಳ ಸಮುದಾಯದ ವಿದ್ಯಾಧಾರ ಗುರುಜಿಯವರನ್ನು ಎಂ.ಎಲ್.ಸಿ. ಮಾಡಲಾಗಿತ್ತು. ತದನಂತರ 2008 ರಲ್ಲಿ ಎನ್ ಶಂಕರಪ್ಪ ರವರನ್ನು ಬಿಜೆಪಿ ಪಕ್ಷವು ಎಂ.ಎಲ್ ಸಿ. ಯಾಗಿ ಮಾಡಿತಾದರೂ ಕೇವಲ 2 ವರ್ಷಗಳಲ್ಲಿ ಅವರ ಸ್ಥಾನಪಲ್ಲಟ್ಟ ಮಾಡುವ ಮೂಲಕ ಮಡಿವಾಳ ಜನಾಂಗದ ರಾಜಕೀಯ ಪ್ರಾತೀನಿಧ್ಯವನ್ನು ಕಸಿದುಕೊಂಡಿತ್ತು. ತದನಂತರ ಮಡಿವಾಳ ಸಮುದಾಯಕ್ಕೆ, ಯಾವುದೇ ರಾಜಕೀಯ ಸ್ಥಾನಮಾನ ಲಭ್ಯವಾಗಿರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಇದುವರೆವಿಗೂ ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತೀನಿಧ್ಯ ದೊರೆತಿರುವುದಿಲ್ಲ, ಈ ಜನಾಂಗದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಾತೀನಿಧ್ಯದ ಅವಶ್ಯಕತೆ ಇರುತ್ತದೆ. ಆದ್ದರಿಂದ, ಪ್ರಸ್ತುತ ನಡೆಯುತ್ತಿರುವ ಎಂ.ಎಲ್.ಸಿ. ನಾಮ ನಿರ್ದೇಶನದಲ್ಲಿ ಮಡಿವಾಳ ಜನಾಂಗ ಅರ್ಹ ವ್ಯಕ್ತಿಯೊಬ್ಬರಿಗೆ ಪ್ರಾತೀನಿಧ್ಯ ನೀಡಬೇಕೆಂದು ಸಮಸ್ತ ಮಡಿವಾಳ ಜನಾಂಗದ ಪರವಾಗಿ ನಿವೇದಿಸಿಕೊಳ್ಳುತ್ತೇನೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷರಾದ ರವಿಕುಮಾರ್, ರಾಜಣ್ಣ, ಮಂಜುನಾಥ್, ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.