ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಸೇರಿದಂತೆ ಮಾಲಿನ್ಯವಾಗುತ್ತಿರುವ ಪರಿಸರದ ಬಗ್ಗೆ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 9ರಂದು ಕಡಲೂರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಬೈಸಿಕಲ್ ಮೇಯರಾದ ಸತ್ಯ ಶಂಕರನ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಿದ್ದು ವಾಹನಗಳ ದಟ್ಟಣೆ ದಿನದಲ್ಲಿ ಸಮಸ್ಯೆಯಾಗ ಪರಿಣಮಿಸುತ್ತದೆ. ಇದರಿಂದ ಪರಿಸರದ ಮೇಲೆ ಸಾಕಷ್ಟು ಹಾನಿಯಾಗುತ್ತಿದ್ದು ಈ ಬಗ್ಗೆ ಜನಸಾಮಾನ್ಯರು ಕೊಡಬೇಕಾಗಿದೆ ಎಂದರು.
ಪೆಡಲೂರು ಸೈಕಲ್ ಜಾತ ಕಾರ್ಯಕ್ರಮವನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಕಮಿಷನರಾದ ಎಂ ಎನ್ ಅನುಚೇತ್ ಅವರು ಚಾಲನೆ ನೀಡದಿದ್ದಾರೆ. ಬೆಂಗಳೂರು ಸೇರಿದಂತೆ ಬೆಂಗಳೂರು ಸುತ್ತಮುತ್ತ ಸುಮಾರು 500 ಕ್ಕಿಂತ ಹೆಚ್ಚು ಸೈಕ್ಲಿಸ್ಟ್ ಗಳು ಸೈಕಲ್ ಜಾತದಲ್ಲಿ ಭಾಗವಹಿಸಲಿದ್ದಾರೆ.
ಪಾಠಚಾರಿಗಳು ಮತ್ತು ಸೈಕಲ್ ತುಳಿಯುವ ಹಕ್ಕುಗಳ ಬಗ್ಗೆ ಈ ಒಂದು ಕಾರ್ಯಕ್ರಮ ಮೂಲಕ ಜನರಿಗೆ ತಿಳಿಸಲಿದ್ದಾರೆ. ವಾಹನ ದಟ್ಟಣೆಯನ್ನು ನಗರದಲ್ಲಿ ಕಡಿಮೆ ಮಾಡುವ ಸಲುವಾಗಿ ವಿಶೇಷವಾದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರೋಗ್ರಾಮ್ ಡೆವೆಲಪರ್ ಜೊತೆ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಕಳೆದ ಬಾರಿ ಸೈಕ್ನಿಷ್ಟಗಳು 13,000 ಜನ ಸೇರಿದರು.
ಬೆಂಗಳೂರಿನ ಕೆಲವು ಆಯ್ದ ಭಾಗಗಳಲ್ಲಿ ಸೈಕಲ್ ಸವಾರಣೆ ಮಾಡಬೇಕಂತಹ ಟ್ರ್ಯಾಕ್ ಗಳನ್ನು ಸಿದ್ಧಪಡಿಸಬೇಕಾಗಿದೆ ಈ ಸಂಬಂಧ ಸರ್ಕಾರ ಚಿಂತನೆ ನಡೆಸಬೇಕಾಗಿದೆ ಈ ಬಗ್ಗೆ ಸಾಕಷ್ಟು ಮನವಿಗಳನ್ನು ಸಹ ಬಿಬಿಎಂಪಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಕೊಡಲಾಗಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಒಟ್ಟು 14 ಸಾವಿರ ರಸ್ತೆಗಳಿದ್ದು ಅದರಲ್ಲಿ ಕೇವಲ ಸೈಕ್ಲಿಸ್ಟ್ ಗಳಿಗೆ ಎರಡುವರೆ ಸಾವಿರ ಕಿಲೋಮೀಟರ್ ಮಾತ್ರ ಇದೆ.
ಪೆಡಲೂರು ಕಾರ್ಯಕ್ರಮದ ಮುಖ್ಯ ಉದ್ದೇಶ ಪರಿಸರ ಮಾಲಿನ್ಯ ಹಾಗೂ ವಾಹನದಟ್ಟಣ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ, ಕಡಲೆಹಿಟ್ಟುಗಳು ಸಾಕಷ್ಟು ಜನ ಉತ್ಸಾಹ ಭರಿತರಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಮುಂದಿನ ದಿನಗಳಲ್ಲಿ ಸಾವಿರಕ್ಕಿಂತ ಹೆಚ್ಚು ಸೈಕ್ಲಿಸ್ಟ್ಗಳನ್ನು ಸೇರಿಸುವ ಗುರಿ ಗೊಂದಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅರ್ಬನ್ ಟ್ರಾನ್ಸ್ಪೋರ್ಟ್ ಎಂ ಓ ಎಚ್ ಎ ನವದೆಹಲಿಯ ನಿರ್ದೇಶಕರಾದ ಯೋಗೇಶ ಅಂಟಿಲ್, ಜರ್ಮನ್ ಕಾನ್ಸುಲೇಟ್ ಕೌನ್ಸಿಲ್ ಜನರಲ್ ಆದಂತಹ ಅಚೀಂ ಬುರ್ಖಾಟ್, ಭಾರತೀಯ ಸಾರಿಗೆ ನಿರ್ದೇಶಕರಾದಂತಹ ಡೇನಿಯಲ್ ಮೋಸೆರ್, ಭಾಗವಹಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸುಬ್ಬಯ್ಯ ಉಪಸ್ಥಿತರಿದ್ದರು.