> ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಸಮುದಾಯಗಳನ್ನು ಸಂಘಟಿಸುವುದು; ಆ ಸಮುದಾಯಗಳ ಒಳಗೆ ಬಡತನರೇಖೆಗಿಂತ ಕೆಳಗಿರುವವರಿಗೆ ಆರ್ಥಿಕಶಕ್ತಿ ಕಲ್ಪಿಸುವುದು; ಭವಿಷ್ಯತ್ತಿಗೆ ರಾಜಕೀಯಶಕ್ತಿ ಗಳಿಸುವುದು; ದೇಶದಲ್ಲಿ ಅಸಮಾನತೆ ನಿವಾರಣೆ ಮಾಡಿ, ಭಾರತ ಸಂವಿಧಾನದ ಸಮಪಾಲು/ಸಮಬಾಳು ತತ್ವದಡಿ, ಸಮ ಸಮಾಜ ನಿರ್ಮಾಣ ಮಾಡುವ, ಗುರಿ ಇಟ್ಟುಕೊಂಡು ಈ ಸಂಘಟನೆ ಸ್ಥಾಪಸಿಲಾಗಿದೆ. ಈ ಉದ್ದೇಶಗಳಿಗಾಗಿ ರಾಜ್ಯದ ಉದ್ದಗಲಕ್ಕೂ ಅಹಿಂದ ಸಮುದಾಯಗಳ ಚಳುವಳಿ ರೂಪಿಸುವ, ಪಕ್ಷಾತೀತ, ಕೇಡರ್ ಬೇಸ್ ಸಂಘಟನೆ ಇದಾಗಿದೆ;
> ರಾಜ್ಯದ ಹಾಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮೂಲತಃ ರಾಮಮನೋಹರ್ ಲೋಹಿಯಾ ಅವರ ಅನುಯಾಯಿ ಮತ್ತು ಅವರ ಸಿದ್ಧಾಂತದ ಸಮಾಜವಾದದ ಬಳವಳಿ: ಡಾ|ಬಿ. 1.ಅಂಬೇಡ್ಕರ್ ಅವರ, ಭಾರತ ಸಂವಿಧಾನದ ಆಶಯಗಳ ಸಕಾರಗೊಳಿಸುವ ಮನಭೂಮಿಕೆ, ಬದ್ಧತೆ ಹೊಂದಿರುವ ರಾಜಕಾರಣಿ: ಪೆರಿಯಾರ್, ಕುವೆಂಪು ರಂತಹ ಮೌಡ್ಯ ಕಂದಾಚಾರಗಳನ್ನು ವಿರೋಧಿಸುವ ಗುಣವುಳ್ಳ ನಾಯಕ; ಜಾತ್ಯತೀತ ತತ್ವಗಳನ್ನು ತನ್ನ ವೈಯಕ್ತಿಕ ಬದುಕು, ಜೀವನದಲ್ಲಿ ಅಳವಡಿಸಿಕೊಂಡಿಸಿರುವ
ರಾಜಕಾರಣಿ;
> ಶ್ರೀ ಸಿದ್ದರಾಮಯ್ಯನವರು 2013 ರಿಂದ 2018ರವರೆಗೆ ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿ ಅವದಿಯಲ್ಲಿ ಹಲವು ಬಾಗ್ಯಗಳನ್ನು ಬಡವರಿಗಾಗಿ ನೀಡಿದ್ದಾರೆ. ಇದರಿಂದ ಶೇ.80ಕ್ಕೂ ಹೆಚ್ಚಿರುವ ಆಹಿಂದ ಸಮುದಾಯಗಳ ಜನರು ಉತ್ತಮವಾಗಿ ಬದಕಲು ಸಹಾಯವಾಗಿದೆ. ಬಡತನರೇಖೆಗಿಂತ ಕೆಳಗಿದ್ದ ಸಮುದಾಯಗಳು ಮೂರೊತ್ತು ಹೊಟ್ಟೆ ತುಂಬ ಊಟ ಮಾಡಿವೆ; ಇಂತಹ ಕಾರ್ಯಕ್ರಮಗಳಿಂದ ಅವರ ಒಳಗಿನ ಗುಣ ಮತ್ತು ಬದ್ಧತೆಗಳು ಸಾಬಿತಾಗಿವೆ.
> ಶ್ರೀ ಸಿದ್ದರಾಮಯ್ಯನವರ ರಾಜಕೀಯ ಆಧ್ಯತೆ ಮತ್ತು ಬದ್ಧತೆಗಳನ್ನು ಒಪ್ಪಿ 2023ರಲ್ಲಿ ರಾಜ್ಯದಲ್ಲಿ ವಿಧಾನಸಭೆಗೆ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಕಾಂಗ್ರೇಸ್ ಸರ್ಕಾರವನ್ನು ರಾಜ್ಯದ ಬಹುತೇಕ ಅಹಿಂದ ಸಮುದಾಯಗಳು ಕೈಹಿಡಿದಿದ್ದೇವೆ. ಈ ಅವದಿಯಲ್ಲಿ ಅಹಿಂದ ಸಮುದಾಯಗಳ ಜೊತೆಗೆ ಉಳಿದ ಎಲ್ಲರಿಗೂ ಹಲವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಫಲವನ್ನು ರಾಜ್ಯದ ಎಲ್ಲರೂ ಉಣ್ಣುತ್ತಿದ್ದಾರೆ.
> ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಅಂದಾಜು ಲಿಂಗಾಯಿತರು 12% ಮತ್ತು ಒಕ್ಕಲಿಗರು 10% SC/ST 24% ಮತ್ತು (ಲಿಂಗಾಯಿತರು ಮತ್ತು ಒಕ್ಕಲಿಗರು ಹೊರತುಪಡಿಸಿದ) ಇನ್ನೂಳಿದ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರು 34% ಜನಸಂಖ್ಯೆಯಿದ್ದಾರೆ. ಬಹುಸಂಖ್ಯಾತರಿದ್ದರೂ SC/ST, OBC, Minoritiesಗಳಲ್ಲಿ ಮುಖ್ಯಮಂತ್ರಿ ಪದವಿಗೇರಿದವರ ಸಂಖ್ಯೆ ಕಡಿಮೆ. ಸ್ವಾತಂತ್ರ್ಯ ನಂತರ ಹೆಚ್ಚು ಪಾಲು ಮೊದಲಿನ 2 ಜಾತಿಗಳೆ ಪಡೆದಿವೆ. ಉಳಿದ ಬಹುಸಂಖ್ಯಾತ ಜಾತಿಗಳು ಮುಖ್ಯಮಂತ್ರಿ ಪದವಿಗೇರುವಲ್ಲಿ ಜೊತೆಗೆ ರಾಜಕೀಯ ಶಕ್ತಿಗಳಿಸುವಲ್ಲಿ ವಂಚಿತರಾಗಿದ್ದಾರೆ.
> ಈ ಕಾರಣದ ಜೊತೆಗೆ ಹತ್ತು ಹಲವು ಕಾರಣಗಳಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸ್ವಾತಂತ್ರ್ಯ ಮತ್ತು ಭಾರತ ಸಂವಿಧಾನ ಅನುಷ್ಟಾನಗೊಂಡು 75 ವರ್ಷಗಳು ಕಳೆದರೂ ಸಮ ಸಮಾಜ ನಿರ್ಮಾಣವಾಗಿಲ್ಲ. ಅಸಮಾನತೆ ಮುಂದುವರೆದಿದೆ; ಉಲ್ಲೇಖಿತ ಬಹುಸಂಖ್ಯಾತ ಜಾತಿಗಳಲ್ಲಿ ಈದಿನಗಳಲ್ಲಿಯೂ ಹಿಂದುಳಿದಿರುವಿಕೆ, ಬಡತನ ಮುಂದುವರೆದಿದೆ. ಈ ಅಪರಾಧ ಹೊಣೆಗಾರಿಕೆಯನ್ನು ಮುಂದುವರಿದ ಜಾತಿಗಳು ತೆಗೆದುಕೊಳ್ಳುತ್ತಿಲ್ಲ ಬದಲಿಗೆ ಮತ್ತಷ್ಟು ಅಧಿಕಾರ ಮತ್ತು ಫಲವನ್ನು ನಿರಂತರವಾಗಿ ಅವರೇ ಪಡೆಯಲು ಬಯಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು;
> ಸಾಮಾಜಿಕ ಕಳಕಳಿಯ ಹರಿಕಾರ ಶ್ರೀ ಸಿದ್ದರಾಮಯ್ಯನವರಿಂದ ಮುಖ್ಯಮಂತ್ರಿ ಪದವಿಯನ್ನು ವಾಪಸ್ಸು ಪಡೆಯುವ, ಆ ಸ್ಥಾನದಿಂದ ಆಸ್ಥಿರಗೊಳಿಸುವ ಹುನ್ನಾರ, ಷಡ್ಯಂತರಗಳನ್ನು ರಾಜ್ಯದ ಅಹಿಂದ ಸಮುದಾಯಗಳ ಪರವಾಗಿ ಈ ಸಂಘಟನೆಯು ಕಟುವಾಗಿ ಖಂಡಿಸುತ್ತದೆ. ಇಂತಹ ಸಾಮಾಜಿಕ ಕಳಕಳಿಯ ಹರಿಕಾರ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಪದವಿ ಬಿಟ್ಟಕೋಡಿ ಎಂದು ಕೇಳುತ್ತಿರುವ ಮಾನ್ಯರು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇವೆ.