ನವದೆಹಲಿ: ಭಾರತೀಯರ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರನ್ನು ಸಂಗ್ರಾಮದಲ್ಲಿ ಮಣಿಸಿ ವಿಜಯದ ಕಹಳೆ ಮೊಳಗಿಸಿದ ಕರ್ನಾಟಕದ ಹೆಮ್ಮೆಯ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಕಿತ್ತೂರು ವಿಜಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಪೂಜ್ಯ ಸ್ವಾಮಿಜೀಗಳು, ಲೋಕಸಭೆಯ ಸಭಾಪತಿಗಳಾದ ಓಂ ಬಿರ್ಲಾ ,ಸಚಿವರಾದ ಪ್ರಹ್ಲಾದ್ ಜೋಶಿಜೀ ಹಾಗೂ ಕೇಂದ್ರ ಸಚಿವ ವಿ ಸೋಮಣ್ಣ ಅವರೊಂದಿಗೆ ರಾಣಿ ಚೆನ್ನಮ್ಮನ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಭಾರತೀಯರ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರನ್ನು ಸಂಗ್ರಾಮದಲ್ಲಿ ಮಣಿಸಿ ವಿಜಯದ ಕಹಳೆ ಮೊಳಗಿಸಿದ ಕರ್ನಾಟಕದ ಹೆಮ್ಮೆಯ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಕಿತ್ತೂರು ವಿಜಯೋತ್ಸವದ ಮಹಾನ್ ಚೇತನವಾಗಿದ್ದಾರೆ. ಅವರು ನಾಡಿಗೆ ಇದ್ದ ಅಪಾರ ಅಭಿಮಾನ, ಕಾಳಜಿಯನ್ನು ಅವರ ವಿಜಯೋತ್ಸವದ ಮೂಲಕ ನೋಡಬಹುದಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಬೆಳೆದು ಬಂದ ಹಾಗೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ದೇಶವನ್ನು ರಕ್ಷಣೆ ಮಾಡಿದ ಹಾಗೂ ತಮ್ಮ ಕುಟುಂಬವನ್ನೇ ದೇಶಕ್ಕಾಗಿ ಹೋರಾಟಕ್ಕಾಗಿ ಪ್ರಾಣತಿತ್ತ ವೀರ ಮಹಿಳೆಯ ಬಗ್ಗೆ ಗುಣಗಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ,ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ – ಎಂಪಿ,ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ , ಅರವಿಂದ್ ಬೆಲ್ಲದ ಹಾಗೂ ದೆಹಲಿ ಚೆನ್ನಮ್ಮಾಜಿ ಅಭಿಮಾನಿ ಸಮೂಹ ಉಪಸ್ಥಿತರಿದ್ದರು.