ಬೆಂಗಳೂರು: ರಾಜ್ಯಾದ್ಯಂತ ಸದ್ದುಮಾಡುತ್ತಿರುವ ರಾಜ್ಯ ವಕ್ಸ್ ಆಸ್ತಿಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ದಿನಕ್ಕೊಂದು ಪ್ರಕಟಣೆ, ಸಚಿವರುಗಳಿಂದ ವಿರೋಧಾಭಾಸದ ವಿಭಿನ್ನ ಹೇಳಿಕೆಗಳು ಪ್ರಕಟವಾಗುತ್ತಿದ್ದು, ರಾಜ್ಯದ ರೈತರ ಆಸ್ತಿಗಳು ಸೇರಿದಂತೆ ಶಾಲಾಕಾಲೇಜುಗಳ ಕಟ್ಟಡಗಳು, ಸರ್ಕಾರಿ ಜಾಗಗಳು, ಗೋಮಾಳ ಹಾಗೂ ಸೂಕ್ಷ್ಮ ಪ್ರದೇಶಗಳ ಮಾಲೀಕತ್ವದ ಬಗ್ಗೆ ಗೊಂದಲ ಮೂಡಿಸಿ ರಾಜ್ಯಾದ್ಯಂತ ಅಪಾಯಕಾರಿ ಅರಾಜಕತೆ ಸೃಷ್ಟಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನತಾಪಕ್ಷದ ರಾಜ್ಯ ಮಹಾಪ್ರದಾನ ಕಾರ್ಯದರ್ಶಿ ಎನ್ ನಾಗೇಶ್ ಆಗ್ರಹಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ವಕ್ಸ್ ಆಸ್ತಿಯ ವಿಚಾರವಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗುತ್ತಿದೆ. ಸರ್ಕಾರದ ಇಲಾಖೆಗಳು ದಿನಕ್ಕೊಂದು ಪ್ರಕಟಣೆ ನೀಡುವುದು ಒಂದೆಡೆಯಾದರೆ ಸಂಪುಟದ ಸಚಿವರುಗಳು ಒಬ್ಬೊಬ್ಬರು ಒಂದೊಂದು ರೀತಿಯ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿರುವುದು ರಾಜ್ಯದ ಜನರಿಗೆ ಆತಂಕವನ್ನು ಹುಟ್ಟಿಸುತ್ತಿದ್ದಾರೆ.
1 ತಿಂಗಳಲ್ಲಿ ವಕ್ಸ್ ಆಸ್ತಿಗಳ ಖಾತಾ ಆಪ್ಲೇಟ್ ಕೆಲಸ ಪೂರ್ಣಗೊಳಿಸಿ
ಒಂದೆಡೆ ಅಲ್ಪಸಂಖ್ಯಾಂತ ಕಲ್ಯಾಣ ಮತ್ತು ವಕ್ಸ್ ಸಚಿವ ಜಮೀರ್ ಅಹ್ಮದ್ ರವರು “ಒಂದು ತಿಂಗಳಲ್ಲಿ ವಕ್ಸ್ ಆಸ್ತಿಗಳ ಖಾತಾ ಆಪ್ಲೇಟ್ ಕೆಲಸ ಪೂರ್ಣಗೊಳಿಸಿ” ಎಂಬುದಾಗಿ ಕಂದಾಯ ಅಧಿಕಾರಿಗಳಿಗೆ ಆದೇಶ ನೀಡಿರುತ್ತಾರೆ. ಅಧಿಕಾರಿಗಳು ರಾಜ್ಯದ ಕೆಲವು ರೈತರಿಗೆ ನೋಟೀಸುಗಳನ್ನು ನೀಡಿದ್ದು, ಬಹುತೇಕ ಸ್ವತ್ತುಗಳ ರೈತರಿಗೆ ನೋಟೀಸುಗಳನ್ನು ನೀಡದೆ, ಏಕಪಕ್ಷೀಯವಾಗಿ ಸದರಿ ಸ್ವತ್ತುಗಳ ಪಹಣಿಯಲ್ಲಿ ಮಾಲೀಕತ್ವವನ್ನು “ವಕ್ಸ್ ಹೆಸರಿಗೆ ನಮೂದಿಸಿರುತ್ತಾರೆ. ಅಚ್ಚರಿಯ ಬೆಳವಣಿಗೆಯಂದರೆ, ವಕ್ಸ್ ಹೆಸರಿಗೆ ಪಹಣಿಯಾಗುತ್ತಿರುವ ಸ್ವತ್ತುಗಳು ಸಣ್ಣ ಹಿಡುವಳಿ ರೈತರು ಮತ್ತು ದುರ್ಬಲ ಜನರಿಗೆ ಸೇರಿದ್ದು. ಯಾವುದೇ ಜನಪ್ರತಿನಿಧಿ, ಪ್ರಭಾವಿಗಳ ಅಥವಾ ಬಹುಸಂಖ್ಯಾತ ಬಲಿಷ್ಠ ಸಮುದಾಯದವರ ಸ್ವತ್ತುಗಳನ್ನು ಕೇಂದ್ರೀಕರಿಸಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕೇವಲ ರೈತರ ಸ್ವತ್ತು ಅಲ್ಲದೆ ಸರ್ಕಾರಿ, ಗೋಮಾಳ,ಶಾಲಾ ಕಟ್ಟಡಗಳು,ಸ್ವತ್ತುಗಳು ಸೇರಿವೆ
ರಾಜ್ಯದ ರೈತರ ಸ್ವತ್ತುಗಳಿಗೆ ಮಾತ್ರವಲ್ಲದೆ, ಸರ್ಕಾರಿ ಜಾಗಗಳು, ಗೋಮಾಳಗಳು, ಸರ್ಕಾರಿ ಕಟ್ಟಡಗಳು, ಶಾಲಾ- ಕಾಲೇಜುಗಳ ಸ್ವತ್ತುಗಳಿಗೂ ಮಾಲೀಕತ್ವವನ್ನು “ವಕ್ಸ್” ಹೆಸರನ್ನು ನಮೂದಿಸಿರುತ್ತಾರೆ.
ಮತ್ತೊಂದೆಡೆ, ಸಚಿವ ಸಂತೋಷ್ ಲಾಡ್ ರವರು ಪೂರ್ವಾಪರ ವಿವೇಚನೆಯಿಲ್ಲದೆ ಆತಂಕಕಾರಿ ಹೇಳಿಕೆ ನೀಡುತ್ತಾ, ಅವರ ಜಮೀನು ಅವರ ಹೆಸರಿಗೆ ಪಹಣಿಯಾದರೆ ನಷ್ಟವೇನು ಎಂಬುದಾಗಿ ಹೇಳುತ್ತಾರೆ. ಇದೊಂದು ಪೂರ್ವಾಪರ ವಿವೇಚನೆಯಿಲ್ಲದೆ ಉಡಾಫೆ ಮತ್ತು ಒಂದು ಸಮುದಾಯವನ್ನು ಓಲೈಸುವ ಮತರಾಜಕಾರಣ ಆಗಿದ್ದು. ಸಮಾಜವನ್ನು ಒಡೆಯುವ ರೀತಿಯಲ್ಲಿ ಹಾಗೂ ರೈತರ ಹಿತವನ್ನು ಬಲಿಕೊಡುವುದಾಗಿದೆ ಮುಂದಾಗಿದ್ದಾರೆ, ಅದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ವಕ್ಸ್ ಸಂಬಂಧಿತ ನೀಡಲಾಗಿರುವ ನೋಟೀಸುಗಳನ್ನು ವಾಪಸ್ಸು ನೀಡಬೇಕು
ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವಕ್ಸ್ ಸಂಬಂಧಿತ ನೀಡಲಾಗಿರುವ ನೋಟೀಸುಗಳನ್ನು ವಾಪಸ್ಸು ತೆಗೆದುಕೊಳ್ಳುವಂತೆ ಆದೇಶಿಸಿದ್ದೇನೆ ಎಂಬುದಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಹಾಗಿದ್ದ ಮೇಲೆ ಸದರಿ ನೋಟೀಸುಗಳನ್ನು ಯಾರ ಆದೇಶದ ಮೇಲೆ ನೀಡಲಾಗಿತ್ತು ಎಂಬುದನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನವಾಗಿದೆ. ಇದರಿಂದಾಗಿ ಅಧಿಕಾರಾರೂಢ ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು ಪರಸ್ಪರ ರಕ್ಷಿಸಿಕೊಳ್ಳುವ ಕುತಂತ್ರ ವ್ಯವಸ್ಥೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜನತಾ ಪಕ್ಷದ ಪದಾಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.