ಬೆಂಗಳೂರು: ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ 32 ವಿವಿಧ ಕ್ಷೇತ್ರಗಳಲ್ಲಿ AI ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ, ತಂತ್ರಜ್ಞಾನದ ಸಾರ್ವತ್ರೀಕರಣಕ್ಕೆ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಸಂಸ್ಥೆಯ ಸಿಇಒ ಮತ್ತು ಸಂಸ್ಥಾಪಕ ಯತೀಶ ಕೆ ಎಸ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಆಧುನಿಕ ಯುಗದಲ್ಲಿ AI ತಂತ್ರಜ್ಞಾನವು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಜನರಿಗೆ ಮಾಹಿತಿ ಸಂಗ್ರಹಿಸಲು, ಕೌಶಲ್ಯಗಳನ್ನು ಮೇಲ್ಮಟ್ಟಕ್ಕೆ ತರಲು ಮತ್ತು ನವೀನತೆಯನ್ನು ಸಮರ್ಥವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಶಿಕ್ಷಣ, ಉದ್ಯೋಗ, ಉದ್ಯಮವಕಾಶಗಳ ಸೃಷ್ಟಿ, ಕಾರ್ಯಕ್ರಮತೆಯ ವೃದ್ಧಿ, ಸಾಮಾಜಿಕ ಸಮಸ್ಯೆಗಳ ಪರಿಹಾರ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ AI ಪ್ರಮುಖ ಪಾತ್ರ ವಹಿಸುತ್ತದೆ.
ನಾವು ಸಮಾಜದಲ್ಲಿ ತಂತ್ರಜ್ಞಾನದ ಮೂಲಕ ನಡೆಯುವ ಮೋಸ, ವಂಚನೆಗಳಿಂದ ದೂರವಿರಬಹುದು. AI ತಂತ್ರಜ್ಞಾನದ ಜ್ಞಾನ ಮತ್ತು ಬಳಕೆಯು ಕೆಲವೇ ಜನರ ಸ್ವತ್ತಾಗಿರದೇ, ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಮೂಲಕ, ಸಮಾಜದ ಎಲ್ಲಾ ವರ್ಗದ ಜನರೂ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆದುಕೊಂಡು, ತಮ್ಮ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ.
ಬಹುಪಯೋಗಿ ಎಐ ಕಾರ್ಡ್:
ಎಐ ಕಾರ್ಡ್ ಸಂಬಂಧಿಸಿದ ಯತಿಕಾರ್ಪ್ ಸಂಸ್ಥೆಯ ಸಂಶೋಧನಾ ವಿಭಾಗ ಕಳೆದ 2 ವರ್ಷದಿಂದ ನಿರಂತರ ಸಂಶೋಧನೆ ನಡೆಸಿತ್ತು. ಈಗ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕಾರ್ಡ್ ಪ್ರಾಯೋಗಿಕ ನೆಲೆಯಲ್ಲಿ ಯಶಸ್ವಿ ಕಂಡಿದೆ.
ಆರ್ಟಿಪಿಶಿಯಲ್ ಇಂಟೆಲಿಜೆನ್ಸಿ (ಎಐ) ಸದ್ಯ ವಿಶ್ವದೆಲ್ಲೆಡೆ ಜನಪ್ರಿಯದೊಂದಿಗೆ ಅನಿವಾರ್ಯವಾಗುತ್ತಿದೆ. ಇದು ಬದುಕಿನ ಅನಿವಾರ್ಯ ಅಂಗವಾಗಲಿದೆ. ಪರಿಣಾಮಕಾರಿಯಾಗಿ ಎಐ ಬಳಕೆ ನಮ್ಮ ಮುಂದಿರುವ ಸವಾಲು. ಭವಿಷ್ಯದಲ್ಲಿ ಎಐ ಎನ್ನುವುದಕ್ಕಿಂತ ಭವಿಷ್ಯವೇ ಎಐ ಎಂಬ ಮಟ್ಟಿಗೆ ಬೆಳೆದಿದೆ. ಎಲ್ಲರಿಗೂ ಪರಿಹಾರ ನೀಡುವ ವೇದಿಕೆಯಾಗಿ ಮಾರ್ಪಟ್ಟಿದೆ, ಎಐ ಅಳವಡಿಸಿಕೊಳ್ಳುವುದರಿಂದ ನಮ್ಮ ವೃತ್ತಿ, ಪ್ರವೃತ್ತಿಯಲ್ಲಿ ಕೌಶಲ್ಯ ಹೆಚ್ಚಿಸಿಕೊಳ್ಳುವುದರೊಂದಿಗೆ ನಮ್ಮ ಭವಿಷ್ಯವನ್ನೂ ನಿರ್ಧರಿಸಲಿದೆ ಎಂದರು. ನಾಡಿನ ಶ್ರೇಷ್ಠ ಎಐ ವಿಜ್ಞಾನಿ ಅಮೆರಿಕಾದ ಪ್ರೊ.ಎಸ್.ಎಸ್. ಐಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಈ ಎಐ ಕಾರ್ಡ್ ಅಭಿವೃದ್ಧಿ ಪಡಿಸಲಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಿದ ಈ ಕಾರ್ಡ್ ಪ್ರಸ್ತುತ ನಾನಾ ಕ್ಷೇತ್ರದ ಅನಾವಿರಕ್ಕೂ ಅದಿಕ ಮಂದಿ ಉಪಯೋಗಿಸಿ, ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಏಐ ಬಗ್ಗೆ ಕನ್ನಡ,ಇಂಗ್ಲಿಷ್ ಭಾಷೆಯಲ್ಲಿ ಪರಿಣತರಿಂದ ತರಬೇತಿ
ಎಐ ಕ್ಷೇತ್ರದಲ್ಲಿ ಬರುತ್ತಿರುವ ಹೊಸಹೊಸ ತಂತ್ರಜ್ಞಾನ, ಅವುಗಳನ್ನು ಪರಿಣಾಮಕಾರಿಯಾಗಿ ಅಳವಡಿಕೆ ಕುರಿತ ಮಾಹಿತಿಯುಳ್ಳ ವೇದಿಕೆ ಎಐ ಕಾರ್ಡ್, ಎಐ ಕ್ಷೇತ್ರ, ಎಐ ಕ್ಷೇತ್ರದ ಬೆಳವಣಿಗೆ, ಅವುಗಳ ಬಳಕೆಯ ಕುರಿತು ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಸರಳಭಾಷೆಯಲ್ಲಿ ಪರಿಣಿತರು ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ಕೃಷಿ, ಉದ್ಯಮ, ವಕೀಲ,ಡಾಕ್ಸರ್ ಹೀಗೆ ಒಟ್ಟು 49 ಕ್ಷೇತ್ರಗಳಿಗೆ ಈ ಕಾರ್ಡ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ .
ಅಭ್ಯರ್ಥಿಗಳಿಗೆ ತಮ್ಮ ತಾಲೂಕಿನಿಂದಲೇ ಕೆಲಸ ಮಾಡಲು ಅವಕಾಶ, ಮೊದಲ 6 ತಿಂಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಬಗ್ಗೆ ಜಾಗೃತಿ ಮೂಡಿಸಲು ಆಯ್ಕೆಯಾದ ಅಭ್ಯರ್ಥಿಗಳು ಫೀಲ್ಡ್ ನಲ್ಲಿದ್ದು ಕಾರ್ಯ ನಿರ್ವಹಿಸಲು ಸಿದ್ಧವಿರಬೇಕು. 6 ತಿಂಗಳು ಫೀಲ್ಡ್ ನಲ್ಲಿ ಅನುಭವ ಪಡೆದುಕೊಂಡ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ಕಚೇರಿಗೆ ನೇಮಿಸಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು 2 ಹಂತದಲ್ಲಿದ್ದು ಪ್ರಥಮವಾಗಿ ಅನ್ಸನ್ ಮೂಲಕ ಆಯ್ಕೆಮಾಡಲಾಗುತ್ತದೆ ಆಯ್ದ ಅಭ್ಯರ್ಥಿಗಳಿಗೆ personal nterview.
1020 ಉದ್ಯೋಗಾವಕಾಶ & ಅರ್ಹತೆ :
ಆರ್ಟಿಫಿಶಿಯಲ್ ಇಂಟೆಲಿಜಿನ್ಸ್ (AI) ಅನ್ನು ರಾಜ್ಯದ ಎಲ್ಲಾ ವರ್ಗದ ಜನರಿಗೆ ಪರಿಚಯಿಸುವ ಅತೀ ದೊಡ್ಡ ಯೋಜನೆಯ ಪ್ರಥಮ ಹಂತದಲ್ಲಿ ಕರ್ನಾಟಕದಾದ್ಯಂತ ತಾಲೂಕು ಮಟ್ಟದಲ್ಲಿ ಒಂದು ಡೀಲರ್ಶಿಪ್ ಕೊಡುವಮೂಲಕ AI ಉದ್ಯಮಕ್ಕೆ ಜನಸಾಮಾನ್ಯರಿಗೂ ಅವಕಾಶ ಕೊಟ್ಟಿದೆ. ಇದರಮುಂದುವರಿದ ಭಾಗವಾಗಿ ಪ್ರತೀ ತಾಲೂಕಿನಲ್ಲಿಯೂ ಆಯ್ದ ಅಭ್ಯರ್ಥಿಗಳಿಗೆ Al Regional Representative ಆಗಿ ಉದ್ಯೋಗ ಪಡೆಯಲು ಅವಕಾಶವಿದೆ. ಅಭ್ಯರ್ಥಿಯು ಪದವೀಧರರಾಗಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯ ವನ್ನು ಹೊಂದಿರಬೇಕು, ಪ್ರತಿ ತಾಲೂಕಿನಿಂದ ಕ್ರಮವಾಗಿ ನಾಲ್ವರನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೂ ಒಟ್ಟು ರಾಜ್ಯದಾದ್ಯಂತ 1020 ಮಂದಿಗೆ ಉದ್ಯೋಗಾವಕಾಶ ಈ ಯೋಜನೆಯಿಂದಾಗಲಿದೆ.
ಆಕರ್ಷಕ ವೇತನ:
ಉದ್ಯೋಗಕಾಂಕಿಗಳು ತಿಂಗಳಿಗೆ ರೂ. 25,000 ರಿಂದ ರೂ. 30,000 ಸಾವಿರ ವರೆಗಿನ ವೇತನವನ್ನು ಅಭ್ಯರ್ಥಿಗಳ ಕಾರ್ಯಕ್ರಮತೆಗೆ ಅನುಗುಣವಾಗಿ ಪಡೆಯಬಹುದಾಗಿದೆ. ನೇಮಕವಾದ ಎಲ್ಲ ಸಿಬ್ಬಂದಿಗಳಿಗೆ ಕಂಪನಿಯು ಕಾನೂನು ಬದ್ಧ ಸೌಲಭ್ಯವನ್ನು ನೀಡಲಿದೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಆದ ಕೃಪಾ ಕೆ ಮಾನವ ಸಂಪನ್ಮೂಲ ಅಧಿಕಾರಿ ಭೂಮಿಕಾ ಪೂಜಾರಿ, ಎಐ ಡೆವಲಪರ್ ಆದಂತಹ ಕಿರಣ್ ಸಿಸಿ ಉಪಸ್ಥರಿದ್ದರು.