ಬೆಂಗಳೂರು: ಬೆಂಕಿಯಲ್ಲಿ ಗ್ರಿಲ್ ಆದ ಪೆರಿಪೆರಿ ಚಿಕನ್ಗೆ ಹೆಸರುವಾಸಿಯಾಗಿರುವ ದಕ್ಷಿಣ ಆಫ್ರಿಕಾದ ಪ್ರಸಿದ್ಧ ಚೈನ್ ರೆಸ್ಟೋರೆಂಟ್ ಆಗಿರುವ ನ್ಯಾಂಡೋಸ್, ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ತನ್ನ ಹೊಸ ರೆಸ್ಟೋರೆಂಟ್ ಆರಂಭ ವಾಗಿದೆ.
ಸ್ಯಾಂಡಲ್ ವುಡ್ ನಟಿಯರಾದ ಐಂದ್ರಿತಾ ರೇ ಮತ್ತು ಹರ್ಷಿಕಾ ಪೂಣಚ್ಚ ಅವರು ನಗರದಲ್ಲಿನ ನ್ಯಾಂಡೋಸ್ ನ ಮೂರನೇ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಫ್ರಿಕನ್ ಶೈಲಿಯ ಪೆರಿ ಪೆರಿ ಚಿಕನ್ ಗೆ ಹೆಸರುವಾಸಿಯಾಗಿದೆ. ರುಚಿಯಲ್ಲಿ ವಿಶೇಷವಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ರುಚಿಕಟ್ಟಾದ ಚಿಕನ್ ಸ್ವಾದ ಸವಿದು ಅನುಭವವನ್ನು ನೀಡಬೇಕು ಎಂದರು.
ನ್ಯಾಂಡೋಸ್ ಇಂಡಿಯಾದ ಸಿಇಓ ಸಮೀರ್ ಭಾಸಿನ್, ಮಾರ್ಕೆಟಿಂಗ್ ಮುಖ್ಯಸ್ಥರಾದ ಅನುಶ್ರೀ ಬೋಸ್, ಆಪರೇಷನ್ಸ್ ಡೈರೆಕ್ಟರ್ ಅಮಿತ್ ಭಯನಾ ಮತ್ತು ಮಾರ್ಕೆಟಿಂಗ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಅನ್ಶುಲ್ ಅಗರ್ವಾಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನ್ಯಾಂಡೋಸ್ ಇಂಡಿಯಾದ ಸಿಇಓ ಸಮೀರ್ ಭಾಸಿನ್, “ನಮ್ಮ ವಿಶ್ವಪ್ರಸಿದ್ಧ ಪೆರಿ-ಪೆರಿ ಚಿಕನ್ ಅನ್ನು ಉತ್ತರ ಬೆಂಗಳೂರಿನ ನಿವಾಸಿಗಳಿಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ “ನಮ್ಮ ಚಿಕನ್ ಫ್ಲೇವರ್ ಗಳು ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ್ದರೂ, ಭಾರತೀಯ ಮಸಾಲೆ ಪ್ರಿಯರ ರುಚಿಗೆ ಅನುಗುಣವಾಗಿ ಮರು ರಚನೆ ಮಾಡಿದ್ದೇವೆ. ಆಫ್ರಿಕನ್ ಬರ್ಡ್ಸ್ ಐ ಮೆಣಸಿನಿಂದ ತಯಾರಿಸಿದ ನಮ್ಮ ಪೆರಿ-ಪೆರಿ ಸಾಸ್, ನ್ಯಾಂಡೋಸ್ ನ ಹೃದಯ ಮತ್ತು ಆತ್ಮವಾಗಿದೆ. ನಮ್ಮ ಎಲ್ಲಾ ಸಾಸ್ಗಳು, ಬೇಸ್ಟಿಂಗ್ಗಳು ಮತ್ತು ಮ್ಯಾರಿನೇಡ್ಗಳನ್ನು ತಾಜಾ ಮತ್ತು ನೈಜ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ನಾವು ಯಾವುದೇ ಕೃತಕ ಫ್ಲೇವರ್ ಅಥವಾ ಬಣ್ಣಗಳನ್ನು ಬಳಸುವುದಿಲ್ಲ.
ನಾವು ನಮ್ಮ ಚಿಕನ್ ನ ರುಚಿಯನ್ನು ಕಾಪಾಡಿಕೊಳ್ಳಲು ಮತ್ತು ಅದರ ಕೊಬ್ಬಿನಂಶವನ್ನು ಕಡಿಮೆ ಮಾಡಲು ಬೆಂಕಿಯಲ್ಲಿ ಸುಡುತ್ತೇವೆ. ನಿಯಮಿತವಾದ ಬೇಸ್ಟಿಂಗ್ ಬಳಕೆ ಅದನ್ನು ರಸಭರಿತವಾಗಿರಿಸುತ್ತದೆ. ಗ್ರಾಹಕರ ಆದ್ಯತೆಯ ಮಟ್ಟದ ಶಾಖದಲ್ಲಿ ಬೆಂದ ಚಿಕನ್ ಅಪೂರ್ವ ರುಚಿ ಒದಗಿಸುತ್ತದೆ. ನ್ಯಾಂಡೋಸ್ ನ ಅಭಿಮಾನಿಗಳು ಈಗ ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿರುವ ನಮ್ಮ ಹೊಸ ರೆಸ್ಟೋರೆಂಟಿನಲ್ಲಿ ಪ್ರಸಿದ್ಧ ಸುಟ್ಟ ಪೆರಿ-ಪೆರಿ ಚಿಕನ್ ಅನ್ನು ಸವಿಯಬಹುದು” ಎಂದು ಹೇಳಿದರು.
ನ್ಯಾಂಡೋಸ್ ನ ಪ್ರಯಾಣ ಆರಂಭವಾಗಿದ್ದು 36 ವರ್ಷಗಳ ಹಿಂದೆ. ದಕ್ಷಿಣಾ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ. ನಂತರ ಭಾರತಕ್ಕೆ ವಿಸ್ತಾರಗೊಂಡಿತು. ಇವತ್ತು 20ಕ್ಕೂ ಹೆಚ್ಚು ದೇಶಗಳ ಗ್ರಾಹಕರಿಗೆ ರುಚಿಕರ ಖಾದ್ಯಗಳನ್ನು ಒದಗಿಸಿ ಮನಸ್ಸು ಗೆದ್ದಿದೆ.