ಬೆಂಗಳೂರು: ನಗರದ ಹೃದಯ ಭಾಗವೆನ್ನಿಸಿರುವ ಜಯನಗರದಲ್ಲಿ ನೂತನವಾಗಿ ಮೊದಲ ದಕ್ಷಿಣ ಭಾರತದ ರುಚಿಕರವಾದ ಅನಂತ ರೆಸ್ಟೋರೆಂಟ್ ಆರಂಭವಾಗಿದೆ.
ನೂತನ ಹೋಟೆಲ್ ಅನ್ನು ಜಯನಗರದ ಶಾಸಕ ಸಿಕೆ ರಾಮಮೂರ್ತಿ ಅವರು ಉದ್ಘಾಟನೆ ಮಾಡಿದರು. ನಂತರ ರೆಸ್ಟೋರೆಂಟ್ ನ ಮಾಲೀಕರಾದ ವಿಕಾಸ್ ಮಾತನಾಡಿ, ದಕ್ಷಿಣ ಭಾರತದ ವಿವಿಧ ರೀತಿಯ ರುಚಿಕರವಾದ ತಿಂಡಿ ತಿನಿಸು ಗ್ರಾಹಕರಿಗೆ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.
ಅನಂತ ರೆಸ್ಟೋರೆಂಟ್ ನಲ್ಲಿ ಫಾಸ್ಟ್ ಆಗಿ ತಿನ್ನುವ ಕೌಂಟರ್, ಕುರುಕಲು ತಿಂಡೆಗೆ ಬೇರೆ ಬೇರೆ ವಿಭಾಗವಿದೆ, ಅದರ ಜೊತೆಗೆ ಹವಾನಿಯಂತ್ರದಲ್ಲಿ ಕುಳಿತು ಆಹಾರ ಸೇವಿಸುವುದು ವಿಶೇಷವಾಗಿದೆ, ಹೋಟೆಲ್ ನ ಮತ್ತೊಂದು ವಿಶೇಷ ಅಂದರೆ ಒಂದೇ ಕಟ್ಟಡದಲ್ಲಿ 4 ಹಂತಸ್ತಿನಲ್ಲಿ ಹೋಟೆಲ್ ಇದ್ದು, ಕೊನೆಯ ಕಟ್ಟದಲ್ಲಿ ಪಾರ್ಟಿ ಹಾಲ್ ಇದೆ, ಅದರಲ್ಲಿ ಸಣ್ಣಪುಟ್ಟ ಹುಟ್ಟುಹಬ್ಬ,ನಾಮಕರಣ, ಗೆಟ್ ಟುಗೆದರ್, ಸೀಮಂತ ಸೇರಿದಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದಾಗಿದೆ ಎಂದರು.
ಬೇರೆ ಹೋಟೆಲ್ ಗೆ ಹೋಲಿಸಿದರೆ ಅನಂತ ರೆಸ್ಟೋರೆಂಟ್ ನಲ್ಲಿ ಸುಚಿ, ರುಚಿಕರ ವಾದ ಖಾದ್ಯಗಳು ದೊರೆಯುತ್ತವೆ, ಅಪ್ಪಟ ದೇಸಿಯಾಗಿ ಪಾಕಶಾಲೆ ತಯಾರಿಸಲಾಗುತ್ತದೆ. ಇಲ್ಲಿನ ಸಾಂಬಾರ್ ಗಮ್ಮತ್ತೇ ಬೇರೆ, ಬೇರೆಯಾವ ಹೋಟೆಲ್ ನಲ್ಲಿಯೂ ಇಲ್ಲಿನ ರುಚಿ ಸಿಗುವುದಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ, ಜೆಪಿ ನಗರ, ಬನಶಂಕರಿ, ಕೋರಮಂಗಲ ಸೇರಿದಂತೆ ವಿವಿಧೆಡೆ ರೆಸ್ಟೋರೆಂಟ್ ಆರಂಭ ಮಾಡಲು ಉತ್ಸುಕರಾಗಿದ್ದೇವೆ, ಹೀಗಾಗಿ ನಮಗೆ ಸಹಕಾರ ಕೊಡಿ ಎಂದು ಗ್ರಾಹಕರಿಗೆ ವಿಶ್ವಾಸ ವ್ಯಕ್ತಪಡಿಸಿದರು.
ಮೊದಲೇ ದಿನವೇ ಸಾಕಷ್ಟು ಗ್ರಾಹಕರು ಹೋಟೆಲ್ ಗೆ ಆಗಮಿಸಿ ಸ್ವಾದವನ್ನು ಅನುಭವಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಸಿದರು. ವಿಕಾಸ್ ಜೊತೆಗೆ ಮತ್ತಿಬ್ಬರು ಪಾರ್ಟ್ನರ್ ಆಗಿ ಜೊತೆಯಾಗಿ ನಡೆಸುತ್ತಿದ್ದಾರೆ. ಊಟದ ರುಚಿಯನ್ನು ಸವಿಯಲು ಉತ್ತಮ ವಾತಾವರಣ ಇಲ್ಲಿ ನಿರ್ಮಾಣ ಮಾಡಿದ್ದೇವೆ ಎಂದರು.