ಬೆಂಗಳೂರು: OPPO ಇಂಡಿಯಾ ತನ್ನ ಹೊಸ Reno14 ಸರಣಿಯನ್ನು ಬಿಡುಗಡೆ ಮಾಡಿದ್ದು, ಉತ್ತಮ ಕಾರ್ಯಕ್ಷಮತೆ, ಶಕ್ತಿಯು ಮತ್ತು ನಿಖರತೆಯೊಂದಿಗೆ ಸಂಪೂರ್ಣ ಸ್ಮಾರ್ಟ್ಫೋನ್ ಅನುಭವವನ್ನು ಒದಗಿಸುತ್ತದೆ. Reno14 ಮತ್ತು Reno14 Pro ಮಾದರಿಗಳೊಂದಿಗೆ, ಬಳಕೆದಾರರು ತಮ್ಮ ಜೀವನವನ್ನು ಸೆರೆಹಿಡಿಯುವ, ಸಂಪಾದಿಸುವ ಮತ್ತು ಹಂಚಿಕೊಳ್ಳುವ ರೀತಿ OPPO ಪೂರ್ತಿಯಾಗಿ ಪರಿವರ್ತಿಸುತ್ತಿದೆ.
OPPO ಇಂಡಿಯಾ ತನ್ನ ಹೊಸ Reno14 ಸರಣಿ ಬಿಡಿಗಡೆ ಮಾಡಿ ಉತ್ಪನ್ನದ ಸಂವಹನ ವಿಶೇಷತೆ ವ್ಯಕ್ತಿ ಉಪ್ಪಾಸನ ಬಾರುಹ್ ಮಾತನಾಡಿ, ಈ ಸ್ಮಾರ್ಟ್ಫೋನ್ಗಳು ನಷ್ಟರಹಿತವಾಗಿದ್ದು 3.5x ಆಪ್ಟಿಕಲ್ ಝೂಮ್, 120x ಡಿಜಿಟಲ್ ಝೂಮ್, ಸುಧಾರಿತ AI ಎಡಿಟಿಂಗ್ ಸಾಧನಗಳು ಮತ್ತು ವಾಟರ್ ರೆಸಿಸ್ಟೆಂಟ್ ಅನ್ನು ಒಳಗೊಂಡಿದೆ. ಯಾವುದೇ ರೀತಿಯ ಜೀವನಶೈಲಿಗೆ ಹೊಂದಿಕೊಳ್ಳುವ ಶಕ್ತಿಶಾಲಿಯಾದ ಆಲ್-ರೌಂಡರ್ ಸಾಧನಗಳಾಗಿ ರೂಪುಗೊಂಡಿವೆ. ಇದಕ್ಕೂ ಮೀರಿ, Reno 14 ಸರಣಿಯು ತನ್ನ ವರ್ಗದಲ್ಲೇ ಅತ್ಯಧಿಕ AI ಇಮೇಜಿಂಗ್ ಹಾಗೂ ಉತ್ಪಾದಕತೆಯ ವೈಶಿಷ್ಟ್ಯಗಳನ್ನು ಒಳಗೊಂಡು, ತಂತ್ರಜ್ಞಾನದ ಮಿತಿಗಳನ್ನು ವಿಸ್ತರಿಸುತ್ತದೆ. ಇದರಿಂದಾಗಿ Reno 14 ಸರಣಿಯು “ವೆಲ್ಯೂ ಫಾರ್ ಮನಿ” ಆಯ್ಕೆ ಆಗಿದೆ. ಗ್ರಾಹಕರು ಮೊದಲ ಬಾರಿಗೆ ಮಾರಾಟ ಅವಧಿಯಲ್ಲಿ Reno 14 ಸರಣಿಯನ್ನು ಪರಿಣಾಮಕಾರಿ ₹34,200 ದಿಂದ ಪಡೆಯಬಹುದು.
Reno 14 ಸರಣಿಯ ವೈಶಿಷ್ಟ್ಯಗಳು
3.5x ಟೆಲಿಫೋಟೋ ಕ್ಯಾಮೆರಾ, ವೈರ್ಲೆಸ್ ಚಾರ್ಜಿಂಗ್, ಮತ್ತು ಭಾರತದಲ್ಲಿ ಮೊತ್ತಮೊದಲ ಬಾರಿಗೆ ಬಳಕೆಯಾದ ಮೀಡಿಯಾಟೆಕ್ ಡೈಮೆನ್ಸಿಟಿ 8450 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳಲ್ಲಿ
● Reno 14 ಸರಣಿಯು ಉತ್ತಮ ಪೋಟ್ರೇಟ್ಗಳಿಗಾಗಿ ವಿಶೇಷ ಲಾಸ್ಲೆಸ್ 3.5x ಟೆಲಿಫೋಟೋ ಜೂಮ್ ಅನ್ನು ಒಳಗೊಂಡಿದೆ.
● Reno 14 ಸರಣಿಯು IP66, IP68 ಮತ್ತು IP69 ಪ್ರಮಾಣೀಕರಣ ಹೊಂದಿರುವ, ಅತ್ಯುತ್ತಮ ದರ್ಜೆಯ ಏರೋಸ್ಪೇಸ್-ಗ್ರೇಡ್ ಬಾಡಿ ಹೊಂದಿದೆ.
● Reno 14 Pro ಹ್ಯಾಂಡ್ಸೆಟ್ 4nm ಮೀಡಿಯಾಟೆಕ್ ಡೈಮೆನ್ಸಿಟಿ 8450 ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುವ ಪ್ರಪಂಚದ ಮೊದಲ ಸ್ಮಾರ್ಟ್ಫೋನ್ ಆಗಿದೆ.
● OPPO PAD SE ಕೂಡ Reno14 ಸರಣಿಯೊಂದಿಗೆ ಮೊದಲ ಬಾರಿ ಪರಿಚಯಗೊಳ್ಳುತ್ತದೆ.
ಈ ಸಾಧನಗಳಲ್ಲಿ 12 ಹಂತದ ನಿಖರ ಲೇಪನ ಪ್ರಕ್ರಿಯೆಯಿಂದ ಸಿದ್ಧಪಡಿಸಲಾದ ಪ್ರಕಾಶಮಾನ, ಬಹುಪಥದ ಇರಿಡೆಸೆಂಟ್ ಫಿನಿಶ್ ಕೂಡ ಒಳಗೊಂಡಿದೆ. ಇದು ಬೆಳಕನ್ನು ವಿಭಿನ್ನ ರೀತಿಯಲ್ಲಿ ಪ್ರತಿಫಲಿಸಿ, ಬದಲಾವಣೆಯಲ್ಲಿರುವ ನೈಸರ್ಗಿಕ ದೃಶ್ಯಗಳ ಮೃದುವಾದ ಹೊಳಪನ್ನು ಮೂಡಿಸುತ್ತದೆ. Reno 14 Pro ಮಾದರಿ ಪರ್ಲ್ವೈಟ್ ವೆಲ್ವೆಟ್ ಗ್ಲಾಸ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಪ್ರತಿಫಲಿಸುವ ಮ್ಯಾಟ್ ಫಿನಿಶ್ ನೊಂದಿಗೆ ಲಭ್ಯವಿದೆ. Reno 14 ಮಾದರಿ ಪರ್ಲ್ವೈಟ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಪ್ರಕಾಶಮಾನವಾದ ಲೋಪ್ ಡೆಕೊ ವನ್ನು ಹೊಂದಿದೆ.
Reno 14 ಸರಣಿಯು, OPPO ದ ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆಯನ್ನು ಒದಗಿಸುತ್ತಿದೆ—ನಿರ್ಮಾತೃಗಳು, ಅನ್ವೇಷಕರು ಮತ್ತು ಕಥೆಗಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ವ್ಯವಸ್ಥೆಯು, ಮೊತ್ತ ಮೊದಲ ಬಾರಿಗೆ Reno14 ಮತ್ತು Reno14 Pro ಎರಡೂ ಮಾದರಿಗಳಲ್ಲಿಯೂ 3.5x ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. 50MP ಹೈಪರ್ಟೋನ್ ಕ್ಯಾಮೆರಾ ವ್ಯವಸ್ಥೆಯು 3.5x ಟೆಲಿಫೋಟೋ ಲೆನ್ಸ್ನೊಂದಿಗೆ ಪೋರ್ಟ್ರೇಟ್ಗೆ ಸೂಕ್ತವಾದ ಫೋಕಲ್ ದೂರವನ್ನು ನೀಡುವ ಮೂಲಕ, ದಟ್ಟವಾಗಿ ಸ್ಪಷ್ಟವಾದ ಝೂಮ್ ಚಿತ್ರಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ಸ್ಮಾರಕಗಳಿಂದ ರಸ್ತೆ ದೃಶ್ಯವರೆಗೂ ಅದ್ಭುತವಾಗಿ ಸೆರೆಹಿಡಿಯುತ್ತದೆ.
ಇಮೇಜಿಂಗ್ ನಲ್ಲಿ ಇದುವರೆಗೆ ಬಳಸಲಾದ ಅತಿ ಹೆಚ್ಚು AI ವೈಶಿಷ್ಟ್ಯಗಳು
AI ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ OPPO ದ ಪ್ರತಿಜ್ಞೆಯಾಗಿದೆ. Reno 14 ಸರಣಿಯಲ್ಲಿ ತನ್ನ ವರ್ಗದಲ್ಲಿಯೇ ಅತಿ ಹೆಚ್ಚಿನ AI ಆಧಾರಿತ ಫೋಟೋಗ್ರಫಿ ಮತ್ತು ಇಮೇಜಿಂಗ್ ಸಾಧನಗಳನ್ನು ಒಳಗೊಂಡಿದೆ. ಈ ವೈಶಿಷ್ಟ್ಯಗಳು ಫೋನ್ ಅನ್ನು ಕೇವಲ ಕ್ಯಾಮೆರಾ ಆಗಿ ಮಾತ್ರವಲ್ಲ, ಬದಲಾಗಿ ನಿಮ್ಮ ಸೃಜನಾತ್ಮಕ ಸಹಯೋಗಿಯಾಗಿ ಪರಿಗಣಿಸುತ್ತವೆ.
ಬೃಹತ್ ಬ್ಯಾಟರಿ + ಸ್ಮಾರ್ಟ್ ವೇಗದ ಚಾರ್ಜಿಂಗ್
Reno14 ಮಾದರಿಯಲ್ಲಿ ಶಕ್ತಿಶಾಲಿಯಾದ 6000mAh ಸಾಮರ್ಥ್ಯದ 5 ವರ್ಷಗಳ ಬಾಳಿಕೆಯಿರುವ ಬ್ಯಾಟರಿ ಮತ್ತು 80W ಸೂಪರ್ವೂಕ್™ ವೇಗದ ಚಾರ್ಜಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಇನ್ನು Reno14 Pro ಮಾದರಿಯಲ್ಲಿ ಇನ್ನೂ ಹೆಚ್ಚಿನ 6200mAh ಸಾಮರ್ಥ್ಯದ 5 ವರ್ಷದ ಆಯುಷ್ಯವಿರುವ ಬ್ಯಾಟರಿ ಮತ್ತು 50W ಏರ್ವೂಕ್™ ವೈರ್ಲೆಸ್ ಚಾರ್ಜಿಂಗ್ ಬೆಂಬಲವಿದೆ.