ಬೆಂಗಳೂರು: ಪದ್ಮಶ್ರೀ, ನಾಡೋಜ ಸುಕ್ರಿ ಬೊಮ್ಮಗೌಡ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಐದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಕಂಠಪಾಠ ಮಾಡಿಕೊಂಡಿದ್ದ ಸುಕ್ರಜ್ಜಿಯ ಅಗಲಿಕೆಯೊಂದಿಗೆ ಜಾನಪದ ಸಿರಿಸಂಪತ್ತಿನ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ಪಿಎ ನಾರಾಯಣಗೌಡ ತಿಳಿಸಿದರು.
ಪತ್ರಿಕಾ ಪ್ರಕಟಣೆ ಎಲ್ಲಿ ತಿಳಿಸಿದವರು2015ರ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ಸುಕ್ರಿ ಬೊಮ್ಮಗೌಡ ಅವರಿಗೆ ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ಪ್ರಶಸ್ತಿ ನೀಡಿ ಗೌರವಿಸಿದ್ದೆವು. ಸುಕ್ರಿ ಬೊಮ್ಮಗೌಡರು ಅವರು ಅಂದು ತೋರಿದ ತಾಯ್ತನದ ಪ್ರೀತಿ, ವಾತ್ಸಲ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ತಾವೇ ಒಂದು ನಡೆದಾಡುವ ಜಾನಪದ ಕೋಶದಂತಿದ್ದ ಸುಕ್ರಿ ಬೊಮ್ಮಗೌಡ ಅವರು ಕಾಡಿನಂಚಿನ ಹಾಲಕ್ಕಿ ಸಮುದಾಯಕ್ಕೆ ಅನನ್ಯವಾದ ಕೀರ್ತಿಯನ್ನು ತಂದುಕೊಟ್ಟಿದ್ದರು. ಮದ್ಯ ನಿಷೇಧ ಚಳವಳಿಯನ್ನು ಮುನ್ನಡೆಸಿ, ತಮ್ಮ ಹಳ್ಳಿಯನ್ನು ವ್ಯಸನಮುಕ್ತಗೊಳಿಸಿದ ಶ್ರೇಯಸ್ಸು ಅವರದು.
ಸುಕ್ರಜ್ಜಿ ಹಾಡಿದ ಹಾಡುಗಳನ್ನು ಉಳಿಸಿಕೊಂಡು ಅದನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದೇ ನಾವು ಅವರಿಗೆ ಸಲ್ಲಿಸಿರುವ ಸರಿಯಾದ ಶ್ರದ್ಧಾಂಜಲಿ. ಸುಕ್ರಜ್ಜಿ ಅವರಿಗೆ ಕನ್ನಡ ನಾಡು ಸದಾ ಚಿರ ಋಣಿಯಾಗಿರುತ್ತದೆ.