ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ವಲಯ ಆಯುಕ್ತರ ನೇತೃತ್ವದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಆರ್. ಆರ್. ನಗರ ವಲಯ ವ್ಯಾಪ್ತಿಯಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆಸಲಾಯಿತು.
– ರಾಜರಾಜೇಶ್ವರಿನಗರ ವಿಭಾಗದ ಬಿಇಎಂಎಲ್ ಕಾಂಪ್ಲೆಕ್ಸ್ (ಮಂದಾರ ರೆಸ್ಟೋರೆಂಟ್) ನಿಂದ ಬಿಎಂಟಿಸಿ ಬಸ್ ಡಿಪೋವರೆಗಿನ ಮುಖ್ಯರಸ್ತೆ
– ಕೆಂಗೇರಿ ವಿಭಾಗದ ಮುದ್ದಿನಪಾಳ್ಯ ಮುಖ್ಯರಸ್ತೆಯ (ರಿಲಯನ್ಸ್ ಪ್ರೆಶ್ ಕಾಂಪ್ಲೆಕ್ಸ್) ನಿಂದ ಮುದ್ದಿನಪಾಳ್ಯ ವೃತ್ತದವರೆಗಿನ ಮುಖ್ಯರಸ್ತೆ.
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದಂತಹ ಅಂಗಡಿ ಮುಂಗಟ್ಟುಗಳ ತಾತ್ಕಾಲಿಕ ತಗಡಿನ ಮೇಲ್ಛಾವಣಿಗಳು, ತಾತ್ಕಾಲಿಕ ಶೆಡ್ ಗಳು, ಜಾಹೀರಾತು ಫಲಕಗಳು, ತಡೆಗೋಡೆಗಳು, ಅಂಗಡಿ ಮುಂಗಟ್ಟುಗಳು ನಿರ್ಮಿಸಿಕೊಂಡಿದ್ದ ಮೆಟ್ಟಿಲುಗಳು, ಬೀದಿ ಬದಿ ವ್ಯಾಪಾರಿಗಳ ತಳ್ಳುವ ಗಾಡಿ ಹಾಗೂ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಅಡೆತಡೆಯಿಲ್ಲದ ಪಾದಚಾರಿ ಮಾರ್ಗ ಕಲ್ಪಿಸಲು ಕ್ರಮ ತೆಗದುಕೊಳ್ಳಲಾಯಿತು.
ಮುಂದುವರೆದು ರಾಜರಾಜೇಶ್ವರಿನಗರ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯಲಿದ್ದು, 3ನೇ ಶನಿವಾರದಂದು ವಲಯ ವ್ಯಾಪ್ತಿಯ ಈ ಕೆಳಕಂಡ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆ ನಡೆಸುವುದಾಗಿ ವಲಯ ಆಯುಕ್ತರಾದ ಸತೀಶ್ ಬಿ. ಸಿ. ರವರು ತಿಳಿಸಿದರು.
*3ನೇ ಶನಿವಾರದಂದು ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲು ಉದ್ದೇಶಿಸಿರುವ ಸ್ಥಳಗಳು.*
*ಕೆಂಗೇರಿ ವಿಭಾಗ*: ಮುದ್ದಿನಪಾಳ್ಯ ವೃತ್ತದಿಂದ ದ್ವಾರಕಾವಾಸ ರಸ್ತೆ ರತ್ನನಗರದವರೆಗೆ
*ರಾಜರಾಜೇಶ್ವರಿನಗರ ವಿಭಾಗ*: ಜಯಣ್ಣ ವೃತ್ತದಿಂದ ಕೆಂಪೇಗೌಡ ಡಬಲ್ ರಸ್ತೆ ಹಲಗೆವಡೇರಹಳ್ಳಿ ಮೂಲಕ ಕೆಂಚೇನಹಳ್ಳಿ ಮುಖ್ಯರಸ್ತೆ.
ಪಾದಚಾರಿ ಮಾರ್ಗವನ್ನು ಅನಧಿಕೃತವಾಗಿ ಒತ್ತುವರಿದಾರರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಈ ಮೂಲಕ ತಿಳಿಯಪಡಿಸಿದೆ.
ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರು, ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ಇತರ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.