ಅಂಕೋಲಾ: ಬಿಜೆಪಿ ಓಬಿಸಿ ಮೋರ್ಚ ವತಿಯಿಂದ ಅಲಗೇರಿಯ ಶ್ರೀ ಸಣ್ಣಮ್ಮದೇವಿ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಯಶ್ವಸಿಯಾಗಿ ನಡೆಸಲಾಯಿತು.
ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ರಾಜೇಂದ್ರ ನಾಯ್ಕರವರು ಮಾತನಾಡಿ , ವೃಕ್ಷ ಮಾತೆಯೆಂದೆ ಪ್ರಖ್ಯಾತರಾದ ತುಳಸಜ್ಜಿಯವರನ್ನು ಸ್ಮರಿಸಿ ಕೊಳ್ಳುತ್ತಾ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರಿಗೆ ಅಂಕೋಲಾ ಜನತೆಯ ಪರವಾಗಿ ಧನ್ಯವಾದಗಳನ್ನು ಹೇಳಿದರು. ಯಾಕೆಂದರೆ ಎಲ್ಲೊ ಇದ್ದವರನ್ನ ಹುಡುಕಿ ಪದ್ಮಶ್ರೀ ಪ್ರಶಸ್ತಿ ಕೊಡುವದು ಬಿಜೆಪಿ ಸರ್ಕಾರ ದಿಂದ ಮಾತ್ರ ಸಾದ್ಯ ಎಂದು ಹೇಳಿದರು.
ಮೋದಿಜಿಯವರ ಏಕ್ ಪೇಡ್ ಮಾ ಕೀ ನಾಮ ಎಂಬ ಶೀರ್ಷಿಕೆ ಆಡಿಯಲ್ಲಿ ಈ ಕಾರ್ಯಕ್ರಮ ದೇಶದ ಎಲ್ಲಾ ಕಡೆಯಲ್ಲೂ ನಡೆಯಲಿದೆ. ಇದು ಆಗಸ್ಟ 15 ರ ವರೆಗೂ ಈ ಕಾರ್ಯಕ್ರಮ ನಡೆಯಲಿದ್ದು ಪ್ರತಿಯೊಬ್ಬರೂ ಅವರ ಅವರ ಮನೆಯ ಮುಂದೆ ಒಂದು ಒಂದು ಗಿಡ ನೆಡ ಬೇಕಾಗಿದೆ. ಇದರಿಂದ ನಮ್ಮ ಮನೆಯ ಸುತ್ತ ಮುತ್ತಲಿನ ವಾತಾವರಣ ಕೂಡ ಯೋಗ್ಯ ವಾಗಿರುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಮಂಡಲ ಅಧ್ಯಕ್ಷ ಸಂಜಯ ನಾಯ್ಕ.ಅಂಕೋಲಾ ಒಬಿಸಿ ಮೋರ್ಚಾದ ಅಧ್ಯಕ್ಷರಾದ ನಾಗರಾಜ ಎಸ್ ನಾಯ್ಕ ಅಲಗೇರಿ.ಜಿಲ್ಲಾ ಓಬಿಸಿ ಕಾರ್ಯಕಾರಿಣಿ ಸದಸ್ಯಗಣಪತಿ ನಾಯ್ಕ ಹನುಮಟ್ಟ.ಮಂಡಲ ಒಬಿಸಿ ಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ಗಾವಂಕರ.ರಘುವಿರ ನಾಯ್ಕ, ಅಲಗೇರಿ ಸಣ್ಣಮ್ಮ ದೇವಸ್ಥಾನದ ಅರ್ಚಕರಾದ ನಾಗರಾಜ ಗುನಗಾ. ಹಾಗೂ ಜಿಲ್ಲಾ ಯುವಮೋರ್ಚಾದ ಉಪಾಧ್ಯಕ್ಷರು ಹಾಗೂ ಅಂಕೋಲನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಸುಬ್ರಮಣ್ಯ ರೇವಣಕರ ಶೇಟಗೇರಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಪ್ರವೀಣ್ ನಾಯ್ಕ ತೆಂಕಣಕೇರಿ, ಅಲಗೇರಿ ಭೂತ ಅಧ್ಯಕ್ಷರಾದ ಶ್ರೀಕಾಂತ್ ನಾಯ್ಕ,ರವಿರಾಜ್ ಶೆಟ್ಟಿ, ರಾಜೇಶ ನಾಯ್ಕ ಮತ್ತು ಅಲಗೇರಿಯ ಬಿಜೆಪಿ ಪ್ರಮುಖರಾದ ಗಣೇಶ ಚಿನ್ನಾ ನಾಯ್ಕ,ಮಂಜುನಾಥ್ ನಾಯಕ,ಆನಂದು H ಗಾಂವಕರ್,ದಿನೇಶ್ ನಾಯ್ಕ ಎಸುಗೌಡ,ಪ್ರಜ್ವಲ್ ನಾಯ್ಕ , ಹಾಗೂ ಓಬಿಸಿ ಮೋರ್ಚ ಪದಾಧಿಕಾರಿಗಳು ಉಪಸ್ಥಿತರಿದ್ದರು.