ನವದೆಹಲಿ: ಪಿಎಂ ಸ್ವ-ನಿಧಿ(PM SVANidhi) ಯೋಜನೆಯಡಿ ಬಿಬಿಎಂಪಿಯು ಮೆಗಾ ಮತ್ತು ಮಿಲಿಯನ್ ಪ್ಲಸ್ ನಗರಗಳಡಿ ಎರಡನೇ ರ್ಯಾಂಕ್ ಪ್ರಶಸ್ತಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ ಅವರು ಸ್ವೀಕರಿಸಿದರು.
ಪಿಎಂ ಸ್ವನಿಧಿ ಯೋಜನೆ “ಹಣಕಾಸು ಸೇರ್ಪಡೆ ಮತ್ತು ಬೀದಿ ವ್ಯಾಪಾರಿಗಳ ಸಬಲೀಕರಣ ಪ್ರವೇಶಕ್ಕಾಗಿ ಕಾರ್ಯಕ್ಷಮತೆ ಗುರುತಿಸುವಿಕೆ”(PRAISE 2023-24)ಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು “ಮೆಗಾ ಮತ್ತು ಮಿಲಿಯನ್ ಪ್ಲಸ್ ನಗರಗಳಡಿ” ಎರಡನೇ ರ್ಯಾಂಕ್ ಗಳಿಸುವುದರೊಂದಿಗೆ ಪ್ರಶಸ್ತಿಯನ್ನು ಪಡೆದಿದೆ.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೇಂದ್ರ ಸಚಿವರಾದ ಮನೋಹರ್ ಲಾಲ್ ರವರು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರಿಗೆ ದೆಹಲಿಯ “ಇಂಡಿಯಾ ಹ್ಯಾಬಿಟೇಟ್ ಸೆಂಟರ್”ನಲ್ಲಿ ಪ್ರಶಸ್ತಿನ್ನು ನೀಡಿದರು.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(DAY-NULM) ವತಿಯಿಂದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ(ಪಿಎಂ ಸ್ವನಿಧಿ) ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಡಿ ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಕಿರು ಸಾಲಗಳನ್ನು ನೀಡಲಾಗುತ್ತಿದೆ.
ಪಿಎಂ ಸ್ವನಿಧಿಯಿಂದ ಅನುಕೂಲ ಪಡೆದ ವಿವರವನ್ನು ಕೆಳಕಂಡ ಲಿಂಕ್ ನಲ್ಲಿ ಪಡೆಯಬಹುದಾಗಿದೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಎಂ ಸ್ವನಿಧಿ ಯೋಜನೆಯಿಂದ ಅನುಕೂಲ ಪಡೆದಿರುವ ವಿವರವನ್ನು ಪಿಎಂಎಸ್ ಡ್ಯಾಶ್ಬೋರ್ಡ್ ಲಿಂಕ್ https://pmsvanidhi.mohua.gov.in/Home/PMSDashboard ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. (ಡ್ಯಾಶ್ ಬೋರ್ಡ್ ಪ್ರತಿಯನ್ನು ಲಗತ್ತಿಸಲಾಗಿದೆ).
ಅನುಕೂಲ ಪಡೆದ ಬೀದಿ ವ್ಯಾಪಾರಿಗಳ ವಿವರ
ಅರ್ಹ ಅರ್ಜಿಗಳ ಸಂಖ್ಯೆ:* 204173
*ಮಂಜೂರಾದ ಅರ್ಜಿಗಳ ಸಂಖ್ಯೆ:* 164276
*ಸಾಲ ಪಡೆದ ಫಲಾನುಭವಿಗಳ ಸಂಖ್ಯೆ:* 128844
*ಮಂಜೂರಾದ ಹಣ:* 199.94 ಕೋಟಿ ರೂ.
*ವಿತರಿಸಲಾದ ಹಣ:* 184.36 ಕೋಟಿ ರೂ.
ಮೆಗಾ ಮತ್ತು ಮಿಲಿಯನ್ ಪ್ಲಸ್ ನಗರಗಳಡಿ ಪ್ರಶಸ್ತಿ ವಿತರಣೆ
*ಮೊದಲನೇ ರ್ಯಾಂಕ್:* ಮುನ್ಸಿಪಲ್ ಕಾರ್ಪೊರೇಷನ್, ದೆಹಲಿ.
*ಎರಡನೇ ರ್ಯಾಂಕ್:* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ.
*ಮೂರನೇ ರ್ಯಾಂಕ್:* ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಗುಜರಾತ್.
ಈ ವೇಳೆ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ತೋಹಾನ್ ಸಾಹು, ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಪಿಎಂ ಸ್ವನಿಧಿಯ ಸಮುದಾಯ ಸಂಘಟಕರಾದ ಜನಾರ್ಧನ ಚಾರ್ ಹಾಜರಿದ್ದರು.