ಬೆಂಗಳೂರು: ದೇಶದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆಯೇ ವರತು ಭೂಮಿ, ನೀರು ಹೆಚ್ಚಾಗುತ್ತಿಲ್ಲ. ಹೀಗಾಗಿ ಸ್ಮಾರ್ಟ್ ಅಗ್ರಿಕಲ್ಚರ್ ಮಾಡುವ ಮೂಲಕ ಆಹಾರದ ಉತ್ಪಾದಕತೆ ಹೆಚ್ಚಳ ಮಾಡಬೇಕು ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ. ಸಿ ವಾಸುದೇವಪ್ಪ ತಿಳಿಸಿದರು.
ಕೃಷಿ ತಂತ್ರಜ್ಞರ ಸಂಸ್ಥೆತ 56ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗು ಹಿರಿಯ ತಂತ್ರಜ್ಞರಿಗೆ ಸಂಸ್ಥೆಯಿಂದ ಸನ್ಮಾನಿಸಿ,ಪ್ರಶಸ್ತಿ ಪತ್ರ ನೀಡಿ ಮಾತನಾಡಿ, ದೇಶದಲ್ಲಿ ಕೃಷಿ ಉತ್ಪಾದನೆ ಹಾಗು ಉತ್ಪತ್ತಿ ಆಗುತ್ತಿದ್ದು, ಭೂಮಿ, ನೀರು ಮಾತ್ರ ಹೆಚ್ಚಾಗುತ್ತಿಲ್ಲ, ಆದರೆ ಜನಸಂಖ್ಯೆ ಮಾತ್ರ ನಿತ್ಯ ನಾಗಲೋಟದಲ್ಲಿ ಹೋಗುತ್ತಿದೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೇಕು, ಅದು ಸಾಧ್ಯವಾಗುತ್ತಿಲ್ಲ ಕಡಿಮೆ ಭೂಮಿಯಲ್ಲಿ ಹೆಚ್ಚು ಉತ್ಪಾದನೆ ಮಾಡುವ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಪಾದನೆ ಆಗಬೇಕಾಗಿದೆ.
ರೈತರು ಬೆಳೆದ ಆಹಾರದಲ್ಲಿ ಸಾಕಷ್ಟು ಪದಾರ್ಥಗಳು ಹಾಳಾಗುತ್ತಿವೆ, ಹೀಗಾಗಿ ಅದೇರೀತಿ ಸಾಕಷ್ಟು ಹಣವು ಸಹ ಖರ್ಚಾಗುತ್ತಿದೆ, ಹೀಗಾಗಿ ಇದು ಎಲ್ಲರ ಜವಾಬ್ದಾರಿಯಾಗಿದೆ, ಆಹಾರ ಫೋಲಾಗುವ ವಿಚಾರವಾಗಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಆಹಾರದ ಸಂಗ್ರಹಿಸುವ ಉಗ್ರಾಣಗಳು ಅತ್ಯಾಧುನಿಕ ತಂತ್ರಜ್ಞಾನವುಳ್ಳಗಳಿಂದ ಕೂಡಿರಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆಹಾರ ಹಾಳಾಗದಂತೆ ನೋಡಿಕೊಳ್ಳಬೇಕಾಗಿದೆ. ಗ್ರಾಮಾಂತರ ಭಾಗದಲ್ಲಿ ಕಡಿಮೆ ಜಾಮೀನು ಇರುವ ಕ್ರೂಡಿಕರಣ ಮಾಡಿಕೊಂಡು ಆಹಾರ ಉತ್ಪಾದನೆ ಹೆಚ್ಚು ಆಗುತ್ತದೆ. ಇದೆ ವೇಳೆ ಸಿರಿ ದಾನ್ಯಗಳ ಉಪಯೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಅಂತಿಮವಾಗಿ ಕೃಷಿಕರಿಗೆ, ಅವರ ಮಕ್ಕಳಿಗೆ, ಆಸಕ್ತರಿಗೆ ಕೌಶಲ್ಯ ತರಬೇತಿ ಕೊಟ್ಟಾಗ ಕೃಷಿ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷರಾದ ಸಿ ಎನ್ ನಂದಿನಿ ಕುಮಾರಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಸ್ವಯಂ ಸಾದನೆ ಮಾಡಲಾಗಿದೆ, ಆದರೆ ಎಣ್ಣೆಕಾಳುಗಳ ಬಗ್ಗೆ ಹೆಚ್ಚು ಕೆಲಸ ಮಾಡಬೇಕು. ಇತ್ತೀಚೆಗೆ ಕೃಷಿ ಬಗ್ಗೆ ನಿತ್ಯ ತಂತ್ರಜ್ಞಾನಗಳು ಬರುತ್ತಿವೆ, ಕೃಷಿ ತಂತ್ರಜ್ಞರಿಗೆ, ರೈತರಿಗೆ ಸಾಕಷ್ಟು ಮಾಹಿತಿ ಕೊರತೆ ಇದ್ದು, ಅದನ್ನು ನೀಗಿಸುವಂಕೆಲಸ ಮಾಡಬೇಕು.
ಸರ್ಕಾರಕ್ಕೆ ಕೃಷಿ ತಂತ್ರಜ್ಞರಿಂದ ಕೆಲವು ಬೇಡಿಕೆ ಇದೆ, ಅದರಲ್ಲಿ ಪ್ರೌಢ ಶಾಲ ಮಟ್ಟದಲ್ಲಿ ಮಕ್ಕಳಿಗೆ ಕೃಷಿ ಬಗ್ಗೆ ಒಂದು ಪಠ್ಯ ಇಡಬೇಕು ಎನ್ನುವ ಬೇಡಿಕೆ ಇದೆ, ಐಚ್ಛಿಕ ವಿಷಯವಾಗಿಯೂ ಇಟ್ಟರೆ ಮಕ್ಕಳಿಗೆ ಕೃಷಿ ಬಗ್ಗೆ ಅನುಕೂಲವಾಗುತ್ತಾದೆ. ಗ್ರಾಮೀಣ ಭಾಗದಲ್ಲಿ ಕೃಷಿ ಬಗ್ಗೆ ಅರಿವು ಇದೆ, ಆದರೆ ನಗರದ ಮಕ್ಕಳಿಗೆ ಕೃಷಿ ಬಗ್ಗೆ ತಿಳಿಸುವ ಅಗತ್ಯ ವಿದೆ ಎಂದರು. ಕೃಷಿಯಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಕೃಷಿಕರಿಗೆ, ಸಂಭಂದಪಟ್ಟ ಅಧಿಕಾರಿಗಳಿಗೆ, ಸರ್ಕಾರಕ್ಕೆ ತಿಳಿಸಲಾಗುತ್ತುದೆ. ಕಾಲಕಾಲಕ್ಕೆ ಕೃಷಿಯಾದಾರಿತ ತಂತ್ರಜ್ಞಾನ ಬರುತ್ತಿದೆ, ಅದರ ಬಗ್ಗೆ ಕೃಷಿಕರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಕೆಲಸವನ್ನು ಸಂಸ್ಥೆ ಮಾಡಿಕೊಂಡು ಬರುತ್ತಿದೆ.
ಕೃಷಿ ತಂತ್ರಜ್ಞರ ಸಂಸ್ಥೆಯ ಕೆಲಸ ಕಾರ್ಯಗಳಿಗೆ ಸಂಬಧಿಸಿದಂತೆ ಹಣ ನೀಡುವ ಬಗ್ಗೆ ಸಂಸ್ಥೆಯಿಂದ ಸರ್ಕಾರಕ್ಕೆ ಕಳಿಸಿದಾಗ ಪ್ರತಿ ಭಾರಿಯೂ ಬಜೆಟ್ನಲ್ಲಿ ಅನುಮೋದನೆ ಸಿಗುತ್ತಿದೆ. ಅದಕ್ಕೆ ಧನ್ಯವಾದ ಸಲ್ಲಿಸಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೃಷಿ ಸಂಸ್ಥೆಯ ಹಿರಿಯ ಕೃಷಿ ತಂತ್ರಜ್ಞರಿಗೆ ಸನ್ಮಾನಿಸಿ,ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರೊಡಗಿ, ಕಾರ್ಯಕ್ರಮಗಳ ಉಪಸಮಿತಿಯ ಅಧ್ಯಕ್ಷರಾದ ಮಹಾಂತೇಶ್, ಕಾರ್ಯದರ್ಶಿ ವಿಕೆ ಕಾಮತರ, ಖಜಾಂಚಿ ಉಮೇಶ್, ಜಂಟಿ ಕಾರ್ಯದರ್ಶಿ ಡಾ.ಬಿ ಕೃಷ್ಣಮೂರ್ತಿ, ನಿರ್ದೇಶಕರಾದ ಸಿ ಲೋಕೇಶ್ವರ ಹಾಗು ಸಂಸ್ಥೆಯ ಸಂಸ್ಥಾಪನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.