ನಂಜನಗೂಡು: ನಗರದ ಪ್ರವಾಸಿ ಮಂದಿರದಲ್ಲಿ ಶ್ರೀಭಗೀರಥ ಜಯಂತಿ ಆಚರಣೆ ಮಾಡುವ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಿ, ಸಾಧಕ, ಬಾದಕ ಕುರಿತು, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಭೆ ನಡೆಸಲಾಯಿತು.
ಭಗೀರಥ ಜಯಂತಿ ಸಂಬಂಧ ಮಾನ್ಯ ಮುಖ್ಯಮಂತ್ರಿಯವರನ್ನು ಆಹ್ವಾನಿಸಿ(ಲಭ್ಯವಿರುವ ದಿನಾಂಕ)ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ರೂಪುರೇಷೆ ಮತ್ತು ಸಿದ್ಧತೆ ಕುರಿತು ಚರ್ಚಿಸಿ ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ನಂಜನಗೂಡು ಕ್ಷೇತ್ರದಲ್ಲಿ ನಮ್ಮ ಉಪ್ಪಾರ ಜನಸಂಖ್ಯೆ 3ನೆಯ ದೊಡ್ಡ ಸಂಖ್ಯೆಯಲ್ಲಿರುತ್ತದೆಯೆಂದು ಸಭೆಯಲ್ಲಿ ಮೂಗಶೆಟ್ಟಿ ರವರು ತಿಳಿಸಿದರು.ನಮ್ಮ ನಂಜನಗೂಡು ತಾಲ್ಲೂಕು 2 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿದ್ದು (ವರುಣ ಕ್ಷೇತ್ರ ಒಳಗೊಂಡಂತೆ) ಎರಡು ಕ್ಷೇತ್ರಗಳಲ್ಲೂ ನಮ್ಮ ಉಪ್ಪಾರ ಮತದಾರರೆ ನಿರ್ಣಯಕ ಪಾತ್ರವಾಗಿರುತ್ತದೆ ಎಂದು ಸಮುದಾಯದ ಜನರಿಗೆ ಅರಿವು ಮಾಡಿದರು.
ಈ ವೇಳೆ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧೃವನಾರಾಯಣ್ ರವರು,ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ರಂಗಸ್ವಾಮಿ ರವರು, ಮಹಿಳಾ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ ರವರು, ಉಪ್ಪಾರ ಸಂಘದ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ರವರು, ಮೂಗಶೆಟ್ಟಿ ರವರು, ಶಿವಣ್ಣ ರವರು, ಸಿದ್ದರಾಜು ರವರು, ಮುದ್ದಮಾದ ಶೆಟ್ಟಿ ರವರು ಸೇರಿದಂತೆ ನಮ್ಮ ಸಮಾಜದ ಮುಖಂಡರುಗಳು, ನಗರಸಭೆ ಸದಸ್ಯರುಗಳು, ಹಲವು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.