ಫೊಂಡಾ (ಗೋವಾ): ಯಾವ ರೀತಿ ಕುಂಭಮೇಳದಲ್ಲಿ ಲಕ್ಷಾಂತರ ಕೋಟ್ಯಂತರ ಭಕ್ತರು, ಸಂತ-ಮಹಂತರು ಒಟ್ಟಾಗಿ ಸೇರಿದ್ದರೋ, ಅದೇ ರೀತಿ ಗೋವಾದ ಪವಿತ್ರ ಭೂಮಿಯಲ್ಲಿ ಮೊದಲ ಬಾರಿಗೆ ಮೇ 17 ರಿಂದ 19 ರವರೆಗೆ ಒಂದು ದಿವ್ಯ ಆಧ್ಯಾತ್ಮಿಕ ಕುಂಭಮೇಳ ನಡೆಯಲಿದೆ – ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’! ಈ ಮಹೋತ್ಸವದಲ್ಲಿ 23 ದೇಶಗಳ ನಾಗರಿಕರು ಮತ್ತು ಸಂತ-ಮಹಂತರು, ಧರ್ಮಪ್ರೇಮಿ ಹಿಂದೂಗಳು, ಹಾಗೂ 25 ಸಾವಿರಕ್ಕೂ ಹೆಚ್ಚು ಭಕ್ತರು 4 ರಿಂದ 5 ದಿನಗಳ ಕಾಲ ವಾಸ್ತವ್ಯ ಮಾಡಲಿದ್ದು, ಸಂತರ ವಾಣಿಯ ಜ್ಞಾನಗಂಗೆ, ಒಂದು ಕೋಟಿ ರಾಮನಾಮ ಜಪಯಜ್ಞ, ಶಿವಾಜಿ ಕಾಲದ ಐತಿಹಾಸಿಕ ಶಸ್ತ್ರಾಸ್ತ್ರಗಳ ಪ್ರದರ್ಶನ, ವಿವಿಧ ಸಂತರ ಪವಿತ್ರ ಪಾದುಕೆಗಳು, ಒಂದು ಸಾವಿರ ವರ್ಷಗಳ ಹಿಂದಿನ ಸೌರಾಷ್ಟ್ರ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ದರ್ಶನ ಮತ್ತು ಮಹಾಧನ್ವಂತರಿ ಯಾಗದಿಂದ ಶತಚಂಡಿ ಯಾಗದವರೆಗಿನ ಕಾರ್ಯಕ್ರಮಗಳು ಸೇರಿವೆ. ಮಹೋತ್ಸವದ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದು, ಶೀಘ್ರದಲ್ಲೇ ಎಲ್ಲರಿಗೂ ಭಕ್ತಿ ಮತ್ತು ಶಕ್ತಿಯ ಸುಂದರ ಸಂಗಮವನ್ನು ಗೋವಾದಲ್ಲಿ ನೋಡಲು ಸಿಗಲಿದೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಅವರು ತಿಳಿಸಿದರು.
ಅವರು ಫರ್ಮಾಗುಡಿ, ಫೊಂಡಾ, ಗೋವಾದ ಇಂಜಿನಿಯರಿಂಗ ಮೈದಾನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮಹೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಶ್ರೀ. ಜಯಂತ ಮಿರಿಂಗಕರ, ಗೋಮಂತಕ ದೇವಸ್ಥಾನ ಮಹಾಸಂಘದ ಕಾರ್ಯದರ್ಶಿ ಶ್ರೀ. ಜಯೇಶ ಥಳಿ, ಹಿಂದೂ ಜನಜಾಗೃತಿ ಸಮಿತಿಯ ಗೋವಾ ರಾಜ್ಯ ಸಂಘಟಕ ಶ್ರೀ. ಸತ್ಯವಿಜಯ ನಾಯಕ ಮತ್ತು ಶ್ರೀ. ಸುಚೇಂದ್ರ ಅಗ್ನಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ. ಅಭಯ ವರ್ತಕ ಅವರು ಮಾತನ್ನು ಮುಂದುವರಿಸಿ, ಸನಾತನ ಧರ್ಮದ ವಿಶ್ವವ್ಯಾಪಿ ಕಾರ್ಯವನ್ನು ಮಾಡುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಳೆ ಅವರ 83 ನೇ ಜನ್ಮದಿನದ ಅಂಗವಾಗಿ ನಡೆಯುವ ಈ ಮಹೋತ್ಸವವು ರಾಮರಾಜ್ಯದ ಕಡೆಗಿನ ಒಂದು ಸಾಮೂಹಿಕ ಹೆಜ್ಜೆಯಾಗಿದೆ. ಈ ಮಹೋತ್ಸವದಿಂದ ಸಾಧಕರು ಮತ್ತು ಧರ್ಮಪ್ರೇಮಿ ಹಿಂದೂಗಳು ದೇವರು, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಹೊಸ ಸಂಕಲ್ಪದೊಂದಿಗೆ ಕಾರ್ಯೋನ್ಮುಖರಾಗಲಿದ್ದಾರೆ.
*ಶಂಖನಾದ ಮಹೋತ್ಸವದ ಜಾಗೃತಿ* : ಗೋವಾದಾದ್ಯಂತ ಜಾಗೃತಿ ಮೂಡಿಸುವ ನೂರಾರು ಫ್ಲೆಕ್ಸ್ ಬ್ಯಾನರಗಳು, ವಿವಿಧ ವೃತ್ತಗಳಲ್ಲಿ ಇಡಲಾಗಿರುವ ಶಂಖನಾದ ಮಾಡುವ ಭಗವಾನ ಶ್ರೀಕೃಷ್ಣನ ಕಟ್ ಔಟ್ ಗಳು, ವಿವಿಧ ಮಾರ್ಗಗಳಲ್ಲಿ ಸ್ವಾಗತ ಕಮಾನುಗಳು, ಸಾಧುಸಂತರ ಭಾವಚಿತ್ರಗಳ ಭವ್ಯ ಬ್ಯಾನರಗಳು, ಮಹೋತ್ಸವದ ಮುಖ್ಯ ದ್ವಾರದಲ್ಲಿ ದೇವಸ್ಥಾನದ ಆಕಾರದ ಭವ್ಯ ಕಮಾನು ಮುಂತಾದವು ಭಕ್ತಿಮಯ ವಾತಾವರಣ ನಿರ್ಮಾಣ ಮಾಡಿದೆ. ಮಹೋತ್ಸವದಲ್ಲಿ 38 ಅಡಿ ಎತ್ತರದ ಭವ್ಯ ಧರ್ಮಧ್ವಜವನ್ನು ಸ್ಥಾಪಿಸಲಾಗುವುದು.
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವೈಶಿಷ್ಟ್ಯಗಳು
ಮಹೋತ್ಸವದ ವಿಸ್ತೀರ್ಣ 1 ಲಕ್ಷ 26 ಸಾವಿರ ಚದರ ಮೀಟರಗಳಷ್ಟಿದ್ದು, ಅದರಲ್ಲಿ 25 ಸಾವಿರ ಜನರಿಗೆ ಕುಳಿತುಕೊಳ್ಳಲು ಹವಾನಿಯಂತ್ರಿತ ಮಂಟಪದ ವ್ಯವಸ್ಥೆ ಮಾಡಲಾಗಿದೆ. ಒಂದೇ ಬಾರಿಗೆ 8 ಸಾವಿರ ಜನರ ಭೋಜನದ ವ್ಯವಸ್ಥೆ, ಸಾವಿರಾರು ವಾಹನಗಳಿಗೆ 17 ಪಾರ್ಕಿಂಗ್ ವಲಯಗಳು, ಭಕ್ತರಿಗಾಗಿ 350 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಭವ್ಯ ಧಾರ್ಮಿಕ ಗ್ರಂಥ ಮಾರಾಟ ಕೇಂದ್ರ, ಗೋ-ಕಕ್ಷೆ, ಶ್ರೀ ಅನ್ನಪೂರ್ಣಾ ಕಕ್ಷೆ, ಗುರುಮಂದಿರ, 6 ಸಾವಿರ ಚದರ ಅಡಿ ವಿಸ್ತೀರ್ಣದ ಶಿವಾಜಿ ಕಾಲದ ಐತಿಹಾಸಿಕ ಶಸ್ತ್ರಾಸ್ತ್ರ ಪ್ರದರ್ಶನ, 15 ಸಂತರ ಪವಿತ್ರ ಪಾದುಕೆಗಳ ಕಕ್ಷೆ, ಒಂದು ಸಾವಿರ ವರ್ಷಗಳ ಹಿಂದಿನ ಸೌರಾಷ್ಟ್ರ ಸೋಮನಾಥ ಜ್ಯೋತಿರ್ಲಿಂಗದ ದರ್ಶನ ಕಕ್ಷೆ ಇರಲಿದೆ.
ಹಾಗೆಯೇ ಮಹೋತ್ಸವದಲ್ಲಿ ಸುರಕ್ಷತೆಗಾಗಿ ಪೊಲೀಸ್ ಗೋಪುರಗಳು, ಸಿಸಿಟಿವಿ, ಭದ್ರತಾ ಸಿಬ್ಬಂದಿ, ಅನೇಕ ಅಂಬ್ಯುಲೆನ್ಸಗಳು, ಬೈಕ್ ಅಂಬ್ಯುಲೆನ್ಸಗಳು; ಅಗ್ನಿಶಾಮಕ ದಳದ ವಾಹನಗಳು, ವೈದ್ಯಕೀಯ ಕೇಂದ್ರದಲ್ಲಿ 16 ವೈದ್ಯರು, ಸುಗಮ ನಿರ್ವಹಣೆಗಾಗಿ ಆಡಳಿತದ 25 ವಿಭಾಗಗಳಿಗೆ ಸ್ಥಳ, ಮಾಧ್ಯಮ ಪ್ರತಿನಿಧಿಗಳಿಗಾಗಿ ಕೊಠಡಿ, ಹಾಗೂ ಇತರ ಅಗತ್ಯ ಸೌಲಭ್ಯಗಳು ಇರಲಿವೆ. ಈ ಮಹೋತ್ಸವದಲ್ಲಿ ಸುರಕ್ಷತೆಯ ಕಾರಣದಿಂದಾಗಿ ಎಲ್ಲರಿಗೂ ಪ್ರವೇಶಕ್ಕಾಗಿ ಸರಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು ತರುವುದು ಕಡ್ಡಾಯವಾಗಿದೆ. ಹಾಗೂ ಬರುವಾಗ ಬ್ಯಾಗಗಳನ್ನು ತರಬಾರದೆಂದು ವಿನಂತಿಸಲಾಗಿದೆ. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ *SanatanRashtraShankhnad.in* ಈ ಸಂಕೇತಸ್ಥಳಕ್ಕೆ ಭೇಟಿ ನೀಡಿರಿ.
ಸುದ್ದಿಗೋಷ್ಠಿಯಲ್ಲಿ . ಸತ್ಯವಿಜಯ ನಾಯಕ, ಶ್ರೀ. ಜಯೇಶ ಥಳಿ, ಸನಾತನ ಸಂಸ್ಥೆಯ ವಕ್ತಾಯರಾದ ಶ್ರೀ. ಅಭಯ ವರ್ತಕ, ಶ್ರೀ. ಜಯಂತ ಮಿರಿಂಗಕರ ಮತ್ತು ಶ್ರೀ. ಸುಚೇಂದ್ರ ಅಗ್ನಿ.ಮತ್ತಿತರರು ಉಪಸ್ಥಿತರಿದ್ದರು.