ಲಕ್ನೋ (ಉತ್ತರ ಪ್ರದೇಶ): ಗ್ರೋ ಕೇರ್ ಇಂಡಿಯಾ ರವರು ಪ್ರತಿಷ್ಠಾಪಿಸಿರುವ Grow Care India Best Strategy ಪ್ರಶಸ್ತಿಯನ್ನು, ಕರಾರಸಾ ನಿಗಮಕ್ಕೆ ಮಾನವ ಸಂಪನ್ಮೂಲ ವರ್ಗದಲ್ಲಿ ವಿನೂತನ ಉಪಕ್ರಮಗಾಗಿ ಲಭಿಸಿರುತ್ತದೆ.
ಲಕ್ನೋದ (ಉತ್ತರ ಪ್ರದೇಶ) ಹೋಟೆಲ್ ರ್ಕ್ಲಾಕ್ಸ್ ಅವದ್ ನಲ್ಲಿ ಗ್ರೋ ಕೇರ್ ಇಂಡಿಯಾ ರವರು ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ ಮುಜಫರ್ ಅಹಮದ್ ಮಾಜಿ ಸದಸ್ಯರು, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ, ಭಾರತ ಸರ್ಕಾರ, ರಾಕೇಶ್ ದ್ವಿವೇದಿ , ಅಧ್ಯಕ್ಷರು, ಗ್ರೋಕೇರ್ ಇಂಡಿಯಾ, ಅದಿತಿ ಉಮ್ರಾವ್, ಭಾಆಸೇ, ಪ್ರಾಜೆಕ್ಟ್ ಡೈರೆಕ್ಟರ್, ಉತ್ತರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ.
ಎಂ ದೀಪಕ್ ಕುಮಾರ್ ವಿಭಾಗೀಯ ನಿಯಂತ್ರಣಾಧಿಕಾರಿ, ಹಾಸನ ವಿಭಾಗ ಹಾಗೂ ಜಿ ವಿಜಯ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಶಿವಮೊಗ್ಗ ವಿಭಾಗ, ಕೆ ಎಸ್ ಆರ್ ಟಿ ಸಿ ರವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.