ಬೆಳಗಾವಿ: ಈ ಬೆಳಗಾವಿ ಪುಣ್ಯ ಭೂಮಿ ಭಾರತ ದೇಶದ ಪುಣ್ಯ ಭೂಮಿ. ಕಾಂಗ್ರೆಸ್ ಪಕ್ಷ ಮತ್ತು ಅದರ ಎಲ್ಲ ಸದಸ್ಯರಿಗೆ ಈ ಬೆಳಗಾವಿಯ ಭೂಮಿ ಪುಣ್ಯ ಭೂಮಿಯಾಗಿದೆ. ಲೋಕಮಾನ್ಯ ತಿಲಕ್ ಅವರು ಅವರ ಚಳುವಳಿಯನ್ನ ಬೆಳಗಾವಿಯಿಂದ ಪ್ರಾರಂಭ ಮಾಡಿದ್ದರು. ಶತಮಾನಗಳ ಹಿಂದೆ ಗಾಂಧೀಜಿಯವರು ಬೆಳಗಾವಿ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇವತ್ತು ಸುವರ್ಣ ಸೌಧದಲ್ಲಿ ಬಸವಣ್ಣ, ಅಕ್ಕಮಹಾದೇವಿಯವರ ಚಿತ್ರ ನೋಡಿದೆ. ಅದು ಕರ್ನಾಟಕದ ಪ್ರಜಾಪ್ರಭುತ್ವವನ್ನು ಎತ್ತಿ ತೋರಿಸುತ್ತದೆ. ಆ ಚಿತ್ರದಲ್ಲಿ ಪ್ರಜಾಪ್ರಭುತ್ವದ ಮೂಲಗಳು, ಸಮಾನತೆ ಬಗ್ಗೆ ಗಮನಿಸಬಹುದು. ಇದು ಒಂದು ಸ್ವಾತಂತ್ರ್ಯದ ಅಡಿಪಾಯವಾಗಿದೆ. ಈ ತತ್ವ ಸಿದ್ದಂತಾದ ಮೇಲೆ ಗಾಂಧೀಜಿಯವರು ಸತ್ಯಾಗ್ರಹದ ಹೊರಟ ಮಾಡಿದ್ದಾರೆ. ಒಂದು ಸಾಮ್ರಾಜ್ಯ ಉರುಳಿಸಲು ರಕ್ತ, ಹಿಂಸಾಚಾರಗಳು ಆಗುತಿತ್ತು. ಆದರೆ ಈ ಸ್ವಾತಂತ್ರ್ಯದ ಹೋರಾಟದಲ್ಲಿ ಸತ್ಯ, ಅಹಿಂಸೆಯ ಹೋರಾಟವಾಗಿತ್ತು.
ಮಹಾತ್ಮ ಗಾಂಧಿ ಸೇರಿ ಹಲವು ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಅಹಿಂಸೆಯ ಹೋರಾಟ ಮಾಡಿದರು. ಅಹಿಂಸೆಯ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಇದು ವಿಶ್ವದಲ್ಲಿ ವಿಶೇಷವಾದ ಸ್ವಾತಂತ್ರ್ಯ ಹೋರಾಟ. ನಂತರ ಯಾವ ಮಾರ್ಗದಿಂದ, ಆಶೋತ್ತರದಿಂದ ಸ್ವಾತಂತ್ರ್ಯ ಬಂತೋ ಬಾಬಾ ಸಾಹೇಬ್ ಅಂಬೇಡ್ಕರ್, ನೆಹರುರವರು ಸೇರಿ ಈ ಸಂವಿಧಾನವನ್ನು ಕೊಟ್ಟಿದ್ದಾರೆ. ಈ ಸಂವಿಧಾನ ಪುಸ್ತಕ ಮಾತ್ರವಲ್ಲ ನಮ್ಮನೆಲ್ಲ ಕಾಪಾಡುವ ರಕ್ಷಾ ಕವಚ.
ಈ ದೇಶದಲ್ಲಿ ತುಳಿತಕ್ಕೆ ಒಳಗಾದ ವರ್ಗದವರಿಗೆ ದೇವರಾಗಿ ನಿಂತಿದ್ದಾರೆ ಅಂಬೇಡ್ಕರ್. ಅಂಬೇಡ್ಕರ್ ಅವರು ನಿಮಗೆ ಮತ ಚಲಾಯಿಸಿ ನಿಮ್ಮ ಸರ್ಕಾರ ಆಯ್ಕೆ ಮಾಡುವ ಅವಕಾಶ ನೀಡಿದ್ದಾರೆ. ಇದು ನಿಮಗೆ ಸರ್ಕಾರವನ್ನು ಪ್ರಶ್ನೆ ಮಾಡುವ ಅಧಿಕಾರ ಕೊಟ್ಟಿದೆ. ದೇಶ ಹಲವಾರು ಪಕ್ಷದ ಸರ್ಕಾರ ನೋಡಿದೆ. ಆದರೆ ಅಮಿತ್ ಶಾ ಅವರು ಸಂಸತ್ ನಲ್ಲಿ ನಿಂತು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಇವತ್ತು ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ.
ನಾವು ಯಾರು ಯೋಚನೆ ಮಾಡಿರಲಿಲ್ಲ ಸರ್ಕಾರದಿಂದ ಈ ತರಹದ ಅವಮಾನ ಆಗುತ್ತದೆಂದು. ಇದು ಯಾವ ಕಾರಣಕ್ಕೆ ನಡೆಯುತ್ತಿದೆ. ದೇಶದಲ್ಲಿರುವ ರೈತರು, ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದರೆ, ಅಲ್ಲಿ ಮತ್ತೊಂದು ವಿಚಾರ ಧಾರೆ ಹರಿಯುತಿತ್ತು. ಅದು ಸ್ವಾತಂತ್ರ್ಯ ಸಮಯದಲ್ಲೂ ಸಹ ಸಂವಿಧಾನಕ್ಕೆ ವಿರೋಧಗಳಿತ್ತು.
ಮಹಿಳಾ ಸಮಾನತೆ ಬಗ್ಗೆ ಅಂದೇ ಅಂಬೇಡ್ಕರ್ ಪ್ರಸ್ತಾಪಿಸಿದ್ದರು. ಈ ಸಮಯದಲ್ಲಿ ಆರ್ ಎಸ್ಎಸ್ ಮತ್ತು ಅದರ ಸಂಘ ಪರಿವಾರಗಳು ಇದನ್ನ ವಿರೋಧಿಸಿ ಅಂಬೇಡ್ಕರ್ ಪುತ್ಥಳಿಗಳಿಗೆ ಬೆಂಕಿ ಹಚ್ಚಿದರು. ಈ ತತ್ವದಿಂದ ಹುಟ್ಟಿದ ಬಿಜೆಪಿ ಸಂವಿಧಾನವನ್ನ ಸತತವಾಗಿ ಅವಮಾನಿಸುತ್ತಿದೆ. 2024ರ ಚುನಾವಣೆ ವೇಳೆ ಸಂವಿಧಾನವನ್ನ ಬದಲಾಯಿಸುತ್ತೇವೆಂದವರಿಗೆ ಜನರು ಸರಿಯಾಗಿ ಪಾಠ ಕಲಿಸಿದ್ದಾರೆ. ನಿಮ್ಮ ಮತದಾನದಿಂದ ಮೋದಿಜಿ ಗಾಬರಿಗೊಂಡಿದ್ದರು.
ಸಂವಿಧಾನಕ್ಕೆ ಮೋದಿ ತಲೆ ಬಾಗುವಂತೆ ನೀವು ಮಾಡಿಸಿದ್ದೀರ. ಈ ದೇಶದ ಪ್ರಧಾನಿ, ಗೃಹ ಮಂತ್ರಿಗಳು ಸಂವಿಧಾನದ ವಿರೋಧಿಗಳು ಮತ್ತು ಆಧಾರ ಮೇಲೆ ದಾಳಿ ಮಾಡುತ್ತಿದ್ದಾರೆ. ಇವರ ಮಾತೃ ಸಂಸ್ಥೆಯವರು ತ್ರಿವರ್ಣ ಧ್ವಜದ ವಿರೋಧಿಗಳಾಗಿದ್ದರು. ಮೊದಲು ಅಧಿಕಾರಕ್ಕೆ ಬಂದಾಗ ಸಂವಿಧಾನ ಸಮೀಕ್ಷೆ ಸಮಿತಿ ಮಾಡಿದ್ರು. ಇವರ ಹೆಜ್ಜೆಗಳು ನಿಮ್ಮ ತತ್ವಗಳಿಗೆ ವಿರುದ್ಧವಾಗಿದೆ. ನಮ್ಮ ಸರ್ಕಾರ ನಿಮಗೆ ಉಚಿತ 200 ಯೂನಿಟ್ ಫ್ರೀ ವಿದ್ಯುತ್ ಕೊಡುತ್ತಿದೆ.
ನಾನು ಬಿಜೆಪಿಯ ರಾಜ್ಯಗಳಿಗೆ ಹಾಗು ಉತ್ತರ ಪ್ರದೇಶಕ್ಕೆ ಹೋದಾಗ ರೈತರು ತಮ್ಮ ಅಳಲು ತೋಡಿಕೊಂಡರು. ನಮಗೆ ವಿದ್ಯುತ್ ಹೊರೆ ಆಗುತ್ತಿದೆ ಎಂದು. ಬಿಜೆಪಿ ಈ ದೇಶದ ಸಂಪತ್ತು, ಸಂಪನ್ಮೂಲಗಳನ್ನು ಅಧಿಕಾರವನ್ನು ಅದಾನಿಯ ಕೈಗೆ ಕೊಟ್ಟಿದೆ. ಅದಾನಿ ವಿರುದ್ಧ ಅಮೆರಿಕಾದ ಪ್ರಕರಣ ಬಗ್ಗೆ ಮಾತನಾಡಿದಾಗ ನಮ್ಮ ಬಾಯಿಯನ್ನು ಮುಚ್ಚಿಸಲು ಪ್ರಯತ್ನಿಸಿದರು. ಇವರಿಂದ ದೇಶದ ವಿದ್ಯುತ್ ಬೆಲೆ ಜಾಸ್ತಿ ಆಗಿ ರೈತರ ಮೇಲೆ ಹೊರೆಯಾಗುತ್ತಿದೆ. ಎಲ್ಲಿ ನೋಡಿದರು ಬೆಲೆ ಏರಿಕೆಯಾಗುತ್ತಿದೆ. ರೈತರ ಮೇಲೆ ಭಾರ ಹಾಕುತ್ತಿದ್ದಾರೆ. ಆದರೆ ಕೋಟ್ಯಧಿಪತಿಗಳ ಸಾಲವನ್ನು ಮನ್ನಾ ಮಾಡುತ್ತಿದ್ದಾರೆ. ಎಲ್ಲಾ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದಾರೆ . ಅದಾನಿ, ಅಂಬಾನಿಯವರ ಟ್ಯಾಕ್ಸ್ ಜಾಸ್ತಿ ಮಾಡಿದ್ದಾರಾ? ಇದರಿಂದ ಸಾಮಾನ್ಯ ಜನ ಜೀವನ ಸಾಗಿಸುವುದು ಕಷ್ಟವಾಗಿದೆ.
ನಾವು ಇಲ್ಲಿಗೆ ಬಂದಾಗ ಒಬ್ಬ ಡ್ರೈವರ್ ಬಳಿ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ಮಾತನಾಡುವಾಗ ಆತ ಹೇಳಿದ, ಮೈಸೂರ್ ನಲ್ಲಿ ಇರುವ ವಿಮಾನ ನಿಲ್ದಾಣವನ್ನು ಅದಾನಿ ತೆಗೆದುಕೊಂಡ ಸಂದರ್ಭದಲ್ಲಿ ನಮ್ಮಂತಹ ಹಲವರನ್ನು ಹೊರ ಹಾಕಿದರು ಎಂದು. ದೇಶದ ಸಂಪನ್ಮೂಲಗಳನ್ನು ದೇಶದ ಕೆಲವರಿಗೆ ಮಾತ್ರ ಸಿಗುವಂತೆ ಮಾಡುತ್ತಿದ್ದಾರೆ. ಮೀಸಲಾತಿಯನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ .
ಸಂವಿಧಾನವನ್ನು ವಿರೋಧಿಸುತ್ತ, ನಿಮ್ಮಲ್ಲಿ ಹೆಚ್ಚು ತೊಂದರೆಗಳನ್ನು ಹುಟ್ಟಿಸುತ್ತಿದ್ದಾರೆ. ಈ ಸಂವಿಧಾನ ನಿಮನ್ನ ಅನ್ಯಾಯದಿಂದ ಕಾಪಾಡುತ್ತದೆ. ನ್ಯಾಯ ದೊರಕಿಸಿ ಕೊಡುತ್ತದೆ. ಈ ಸಂವಿಧಾನ ನಿಮಗೆ ಎಲ್ಲವನ್ನೂ ಕೊಡುತ್ತದೆ. ನಮ್ಮನ್ನ ಸುರಕ್ಷಿತವಾಗಿಟ್ಟಿರುವ ಸಂವಿಧಾನವನ್ನು ರಕ್ಷಿಸುವ. ರಾಹುಲ್ ಗಾಂಧಿಯವರು ಪ್ರತಿದಿನ, ಪ್ರತಿ ಕ್ಷಣ ಹೋರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ರಾಹುಲ್ ಗಾಂಧಿಯವರನ್ನು ನೋಡಿದರೆ ಸರ್ಕಾರ ನಡುಗುತ್ತದೆ. ಏಕೆಂದರೆ ಅವರು ಸತ್ಯದ ಪರ ಹೋರಾಟ ಮಾಡುತ್ತಿದ್ದಾರೆ. ಯಾವುದೇ ಪ್ರಕರಣ ದಾಖಲಿಸಿದರು ಅವರು ಹೆದರುವುದಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಾನು ಮತ್ತು ಕಾಂಗ್ರೆಸ್ ನಾಯಕರು ಯಾರು ಇದಕ್ಕೆ ಹೆದರುವುದಿಲ್ಲ. ನಮ್ಮದು ಸಂವಿಧಾನದ ವಿಚಾರಧಾರೆಗಳು. ನಾವು ನಿಮ್ಮ ರಕ್ಷಣೆಗೆ ರಕ್ತ , ತ್ಯಾಗ ಬಲಿದಾನ ಮಾಡಲು ತಯಾರಿದ್ದೇವೆ. ನಮ್ಮದು ಜೈಲಿನಲ್ಲಿ ಕೂತು ಬ್ರಿಟಿಷರ ವಿರುದ್ಧ ಹೋರಾಡಿದ ಪರಂಪರೆ, ಜೈಲಿನಲ್ಲಿ ಕೂತು ಕ್ಷಮಾಪಣೆ ಪತ್ರ ಬರೆದ ಪರಂಪರೆ ಅಲ್ಲ.