ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಸಾರ್ವಜನಿಕ ಕುಂದು ಕೊರತೆಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಾಗೂ ವಲಯ ಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವ ಸಲುವಾಗಿ, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು”ಮುಖ್ಯ ಆಯುಕ್ತರ ನಡೆ-ವಲಯದ ಕಡೆ” ಕಾರ್ಯಕ್ರಮ ನಡೆಸಲಿದ್ದಾರೆ.
ಮುಂದುವರಿದು, ಆಯಾ ವಲಯಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಬೆಳಿಗ್ಗೆ 07.00 ರಿಂದ 10.00 ಗಂಟೆಯವರೆಗೆ ವಿವಿಧ ಸ್ಥಳಗಳ ಭೆಟಿ ನೀಡಿ ಪರೀಶೀಲಿಸಿದ ಬಳಿಕ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆ/ಅಹವಾಲುಗಳನ್ನು ಪರಿಶೀಲಿಸಲಿದ್ದಾರೆ. ವಲಯಗಳಲ್ಲಿ ನಡೆಯುವ”ಮುಖ್ಯ ಆಯುಕ್ತರ ನಡೆ ವಲಯದ ಕಡೆ.
ಕಾರ್ಯಕ್ರಮ ವೇಳಾಪಟ್ಟಿ ಈ ಕೆಳಕಂಡಂತಿದೆ.
01. ಪ್ರತಿ ತಿಂಗಳ ಮೊದಲನೇ ಮಂಗಳವಾರ- *ಪೂರ್ವ ವಲಯ*
02. ಪ್ರತಿ ತಿಂಗಳ ಮೊದಲನೇ ಶುಕ್ರವಾರ- *ಪಶ್ಚಿಮ ವಲಯ*
03. ಪ್ರತಿ ತಿಂಗಳ ಎರಡನೇ ಮಂಗಳವಾರ- *ಮಹದೇವಪುರ ವಲಯ*
04. ಪ್ರತಿ ತಿಂಗಳ ಎರಡನೇ ಶುಕ್ರವಾರ- *ಯಲಹಂಕ ವಲಯ*
05. ಪ್ರತಿ ತಿಂಗಳ ಮೂರನೇ ಮಂಗಳವಾರ- *ದಾಸರಹಳ್ಳಿ ವಲಯ*
06. ಪ್ರತಿ ತಿಂಗಳ ಮೂರನೇ ಶುಕ್ರವಾರ- *ರಾಜರಾಜೇಶ್ವರಿ ನಗರ ವಲಯ*
07. ಪ್ರತಿ ತಿಂಗಳ ನಾಲ್ಕನೇ ಮಂಗಳವಾರ- *ಬೊಮ್ಮನಹಳ್ಳಿ ವಲಯ*
08. ಪ್ರತಿ ತಿಂಗಳ ನಾಲ್ಕನೇ ಶುಕ್ರವಾರ – *ದಕ್ಷಿಣ ವಲಯ*