ರಾಜಾಜಿನಗರ ಕಾಮಾಕ್ಷಿಪಾಳ್ಯ:ಕಿರು ಅರಣ್ಯ ಮತ್ತು ಮಕ್ಕಳ ಉದ್ಯಾನವನ ಲೋಕಾರ್ಪಣೆ
*ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಇದ್ದಾಗ ಜನರು ಬರುತ್ತಾರೆ-ಲೋಕಸಭಾ ಸದಸ್ಯ ಪಿ.ಸಿ.ಮೋಹನ್*
*ಒಬ್ಬ ಮನುಷ್ಯರಿಗೆ 7ಮರ ಇರಬೇಕು, ಉತ್ತಮ ಅಮ್ಲಜನಕ ಸಿಗುತ್ತದೆ, ಜನರ ಆಶಯದಂತೆ ಕಿರು ಅರಣ್ಯ ಸ್ಥಾಪನೆ-ಶಾಸಕ ಎಸ್.ಸುರೇಶ್ ಕುಮಾರ್*
ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಕಾಮಾಕ್ಷ್ಮಿಪಾಳ್ಯ, ಕೆ.ಹೆಚ್.ಬಿ. ಕಾಲೋನಿಯಲ್ಲಿ ನೂತನವಾಗಿ ಅಭಿವೃದ್ದಿಗೊಂಡಿರುವ ಕಿರು ಅರಣ್ಯ ಉದ್ಯಾನವನ ಮತ್ತು ಮಕ್ಕಳ ಉದ್ಯಾನವನ ದೀಪ ಬೆಳಗಿಸಿ ಲೋಕಾರ್ಪಣೆ ಸಮಾರಂಭ.
ಬೆಂಗಳೂರು: ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಮಾಜಿ ಉಪಮಹಾಪೌರರಾದ ರಂಗಣ್ಣರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ಪ್ರತಿಮಾ, ರವರು ಲೋಕಾರ್ಪಣೆ ಮಾಡಿದರು.
ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್* ರವರು ಮಾತನಾಡಿ ಸಾರ್ವಜನಿಕರು ಒಂದು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರೆ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಇದ್ದಾಗ ಮಾತ್ರ. ಇಂತಹ ಜಾಗ ಬೇರೆ ಕಡೆ ಇದ್ದಿದ್ದರೆ, ಭೂಕಬಳಿಕೆ ಮಾಡುತ್ತಿದ್ದರು , ಅದರೆ ಶಾಸಕ ಸುರೇಶ್ ಕುಮಾರ್ ರವರ ಇರುವುದರಿಂದ ಈ ಜಾಗ ಉಳಿದು , ಸುಂದರವಾದ ಉದ್ಯಾನ ನಿರ್ಮಾಣ ಮಾಡಿದ್ದಾರೆ.
ಉದ್ಯಾನವನದಲ್ಲಿ ಹ್ಯಾಂಪಿ ಥೀಯಟರ್, ರೇಡಿಯೊ ಮತ್ತು ಸಿ.ಸಿ.ಕ್ಯಾಮರ, ವಿಶ್ರಾಂತಿ ತಾಣ ಮಾಡಿ ಪರಿಸರ ಕಾಳಜಿಯಿಂದ ಉದ್ಯಾನವನ ನಿರ್ಮಾಣವಾಗಿದೆ ಶಾಸಕ ಸುರೇಶ್ ಕುಮಾರ್ ರವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.
ಶಾಸಕ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ, ಸಾರ್ವಜನಿಕರ ಆಶಯದಂತೆ ಉದ್ಯಾನವನವನ್ನು ನಿರ್ಮಾಣ ಮಾಡಿ, ಅವರ ಅಮೃತಹಸ್ತದಿಂದ ಉದ್ಘಾಟಿಸಲಾಗಿದೆ. ಇದು ಸಾರ್ವಜನಿಕರ ಸ್ವತ್ತು.ಮೈದಾನ ಅಥವಾ ಉದ್ಯಾನವನ ಮಾಡೋಣ ಎಂದು ನಿರ್ಧಾರ ಮಾಡಲಾಯಿತು ಅದರೆ ಸ್ಥಳೀಯ ಜನರ ಒತ್ತಾಯದ ಮೇರೆಗೆ ಉದ್ಯಾನವನ ಮಾಡಲಾಗಿದೆ.ಈ ಪಾರ್ಕ್ ನಲ್ಲಿ 50ಕ್ಕೂ ಹೆಚ್ಚು ಮರಗಳನ್ನು ಬೆಳಲಾಗಿದೆ ಇದರಿಂದ ಅಮ್ಲಜನಕ ಹೇರಳವಾಗಿ ಸಿಗಲಿದೆ. ಉತ್ತಮ ವಾತವರಣಕ್ಕೆ ಒಬ್ಬ ಮನುಷ್ಯನಿಗೆ 7 ಮರ ವಿರಬೇಕು.
ಸುತ್ತಮುತ್ತಲು ಪ್ರದೇಶದಲ್ಲಿ ಉತ್ತಮ ಅಮ್ಲಜನಕ ಸಿಗಲಿದೆ, ಆರೋಗ್ಯ ವೃದ್ದಿಸಲಿದೆ. ಈ ಉದ್ಯಾನವನಕ್ಕೆ ನಿಸರ್ಗಧಾಮ ಎಂದು ನಾಮಕರಣ ಮಾಡಲಾಗಿದೆ, ಜನರಿಗೆ ನೆಮ್ಮದ್ದಿ, ಶಾಂತಿ ಮತ್ತು ಆರೋಗ್ಯವೃದ್ದಿಸುವ ಉದ್ಯಾನವನವಾಗಲಿ ಎಂದು ಹೇಳಿದರು.
ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಪಾಲಿಕೆ ಸದಸ್ಯ ಎಂ.ಮುನಿರಾಜು, ಮಂಡಲ ಅಧ್ಯಕ್ಷ ಸುದರ್ಶನ್, ರಾಘವೇಂದ್ರರಾವ್ ಗಿರೀಶ್ ಗೌಡ, ಅನಿಲ್ ರಂಗಣ್ಣ , ಮರಿಯಪ್ಪ, ಜೋಗಯ್ಯ, ಶಿವಾನಂದ್ , ವಿರುಪಾಕ್ಷಯ್ಯ, ಹನುಮಯ್ಯ, ಶ್ರೀಮತಿ ವೇದ ಸಚ್ಚಿದಾನಂದ, ಆರ್.ಗಿರೀಶ್ ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.