ಬೆಂಗಳೂರು: ಮಕ್ಕಳು 10ನೇ ತರಗತಿಗೆ ಬಂದ ಮೇಲೆ ಅವಸರವಾಗಿ ಓದುವ ಬದಲು 8,9ನೇ ತರಗತಿಯಲ್ಲಿ ಶ್ರಮವಹಿಸಿ ಓದಿಕೊಂಡು ಬಂದರೆ 10ನೇ ತರಗತಿಯ ಪರೀಕ್ಷೆ ಪಾಸ್ ಮಾಡುವುದರಲ್ಲಿ ಹಾಗೂ ಅಧಿಕ ಅಂಕ ಗಳಿಸುವಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ರಾಜ್ಯ ಶಿಕ್ಷಣ ಸಂಶೋಧನೆ ತರಬೇತಿಯ ಹಿರಿಯ ಸಹಾಯಕ ನಿರ್ದೇಶಕ ರಾಜಶೇಖರ್ ಹೆಚ್ ಜಿ ತಿಳಿಸಿದರು.
ಮಕ್ಕಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ
ಜಯನಗರದ ಎಂಟನೇ ಬಡಾವಣೆಯಲ್ಲಿನ ಜೆ ಎಸ್ ಎಸ್ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಯಿಂದ ಶಿಕ್ಷಕರು ಅವರ ಪರವಾಗಿ ಪರಿಶ್ರಮ ಹಾಕುತ್ತಿರುವುದು ಮಕ್ಕಳಿಗೆ ಗೊತ್ತಾಗುವುದಿಲ್ಲ ಶಾಲೆಯಲ್ಲಿ ಅನೇಕ ಚಟುವಟಿಕೆ ಮಾಡುತ್ತಿದ್ದಾರೆ ಮಕ್ಕಳು ಸಹ ಸಮಯ ವ್ಯರ್ಥ ಮಾಡದೆ ಕಲಿಕೆ ಕಡೆ ಗಮನಹರಿಸುವುದು ಮುಖ್ಯವಾಗಿದೆ ಮಕ್ಕಳಿಗಾಗಿ ಪೋಷಕರು ಬಹಳ ಕಷ್ಟ ಪಡುತ್ತಿದ್ದಾರೆ ಅದನ್ನು ಗಮನದಲ್ಲಿ ಇರಿಸಿಕೊಂಡು ಮಕ್ಕಳು ಆಟ ಪಾಠಗಳ ಜೊತೆಗೆ ಓದಿನ ಕಡೆಯೂ ಹೆಚ್ಚು ಗಮನ ಕೊಡಬೇಕು ಎಂದರು.
ನಿರಂತರ ಅಧ್ಯಯನದಿಂದ ನಿಮ್ಮ ಗುರಿಯನ್ನು ತಲುಪಬಹುದು, ಮುಂದಿನ ವಿದ್ಯಾಭ್ಯಾಸದಲ್ಲಿ ಅತ್ಯಂತ ಉನ್ನತ ಶ್ರೇಣಿಯಲ್ಲಿ ಪಾಸ್ ಆಗುವ ಮೂಲಕ ಗುರುಗಳಿಗೆ ಹಾಗೂ ಪೋಷಕರಿಗೆ ಹೆಸರು ತರಬೇಕಾಗಿದೆ, ಓದುವ ಜೊತೆಗೆ ಮಕ್ಕಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಕೇವಲ ಓದಿಗಷ್ಟು ಸೀಮಿತವಾಗದೆ ತುಂಟಾಟಗಳಲ್ಲಿಯೂ ಸಹ ಭಾಗಿಯಾಗಬೇಕು, ಅದರ ಸವಿನೆನಪು ನಮಗೆ ಜೀವನದ ಉದ್ದಕ್ಕೂ ಸದಾ ಕಾಡುತ್ತದೆ ಎಂದರು. ಇನ್ನೂ ಇದೆ ವೇಳೆ ಅವರು ಚಿಕ್ಕ ಚಿಕ್ಕ ಕಥೆಗಳನ್ನು ಹೇಳುವ ಮೂಲಕ ಮಕ್ಕಳ ವಿದ್ಯಾಭ್ಯಾಸ ಕಡೆಗೆ ಹೆಚ್ಚು ಗಮನ ನೀಡಬೇಕು ಎನ್ನುವ ಸತ್ಯಂಶಗಳನ್ನು ಮಕ್ಕಳಿಗೆ ಕಿವಿ ಮಾತಿನ ಮೂಲಕ ಹೇಳಿದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಿಎಂ ಶಶಿಕಾಲ ಅವರು ಮಾತನಾಡಿ, ಜೆ ಎಸ್ ಎಸ್ ವಿದ್ಯಾರ್ಥಿ ಸಂಘವು ವನ್ನು ಶಾಲೆಯಲ್ಲಿ ರಚನೆ ಮಾಡಿದ ಹಾಗೆ ನನಗೂ ಸಹ ಹಳೆಯ ಸಂಘಟನೆ ಮಾಡಿದ ನೆನಪು ಸಹ ಈಗ ಬಂತು, ಮಕ್ಕಳು ಗುರಿ ದೊಡ್ಡ ಮಟ್ಟದಲ್ಲಿ ಇಟ್ಟುಕೊಳ್ಳಬೇಕು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಆಗ ವಿದ್ಯಾರ್ಥಿ ದೆಸೆಯಲ್ಲಿನ ಪರಿಪೂರ್ಣತೆ ತಿಳಿಯುತ್ತದೆ. ಒಳ್ಳೆ ಕೆಲಸಗಳನ್ನು ಮಾಡಲು ಯಾವುದೇ ಕಾರಣಕ್ಕೂ ಹಿಂಜರಿಯ ಬಾರದು, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಮಕ್ಕಳು ಹೆಚ್ಚಿನದಾಗಿ ತೊಡೆದುಕೊಳ್ಳಬೇಕು, ಜೆಎಸ್ಎಸ್ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹೆಸರನ್ನು ಮಾಡಿದೆ, ಅದರ ಸದುಪಯೋಗವನ್ನು ಮಕ್ಕಳು,ವಿದ್ಯಾರ್ಥಿಗಳು ಹೆಚ್ಚಿನದಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಲೆಯ ಪ್ರಗತಿಯ ಬಗ್ಗೆ ಮಾಹಿತಿ
ಜೆಎಸ್ಎಸ್ ಪ್ರೌಢಶಾಲೆಯ ಬೆಳೆದು ಬಂದ ಪ್ರಗತಿಯ ಬಗ್ಗೆ ಶಾಲೆಯ ಶಿಕ್ಷಕಿ ಸುಧೀರ್ಘವಾಗಿ ಮಾತನಾಡಿದರು, ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಯಾವ ರೀತಿ ಮಾಡುತ್ತೇವೆ, ರಾಜಕೀಯದ ಸಚಿವ ಸಂಪುಟ ವಿಸ್ತರಣೆ ಆಗುವ ಮಾದರಿಯಲ್ಲಿಯೇ ಶಾಲೆಯಲ್ಲಿ ಮಕ್ಕಳಿಗೆ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರುಗಳ ಆಯ್ಕೆ ವಿಧಾನಗಳ ಚುನಾವಣೆಯನ್ನು ಸಹ ನಡೆಸಲಾಗುತ್ತದೆ, ಆಯಾ ಕ್ಷೇತ್ರದ ಜವಾಬ್ದಾರಿ ಮಂತ್ರಿಗಳಿಗೆ ಇರುತ್ತದೆ, ಜೊತೆಗೆ ಹಲವು ಸಂಘ ಸಂಸ್ಥೆಗಳು ಶಾಲೆಯಲ್ಲಿ ಮಾಡಿದ್ದು ವ್ಯವಸಾಯತವಾಗಿ ನಡೆಸಿಕೊಂಡು ಹೋಗಲಾಗುತ್ತದೆ. ಶಾಲೆಯಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗವಿದ್ದು ನಾಲ್ಕು ಘಟಕಗಳು ಕಾರ್ಯನಿರ್ವಹಿಸಲಿದೆ.
2023ರ ಬ್ಯಾಚಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಸುಮಾರು 15ಕಿಂತ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು, ಇನ್ನು ಇದೇ ವೇಳೆ ಶಾಲೆಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಪೋಷಕರಿಗೂ ಸನ್ಮಾನವನ್ನು ಮಾಡಲಾಯಿತು. ಈ ಬಾರಿ ಕನ್ನಡ ವಿಷಯದಲ್ಲಿ ಶಾಲೆಗೆ ಹೆಚ್ಚು ಶೇಕಡವಾರು ಅಂಕ ಬಂದಿರುವ ಹಿನ್ನೆಲೆ ಕನ್ನಡ ಶಿಕ್ಷಕಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು, ಶಾಲೆಯ ಶಿಕ್ಷಕರು ಎಲ್ಲರಿಗೂ ಸಹ ಅಭಿನಂದನೆಯನ್ನು ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ ಎಸ್ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಚ್ ಎಸ್ ಭಾಸ್ಕರ್ ಸೇರದಂತೆ ಶಾಲೆಯ ಉಪಾಧ್ಯಾಯರು ಸಿಬ್ಬಂದಿ ವರ್ಗದವರು ಇದೆ ವೇಳೆ ಉಪಸ್ಥಿತರಿದರು.