ಬೆಂಗಳೂರು: ಯೋಗ ಈ ದೇಶದ ಪಾರಂಪರಿಕ ಕೊಡುಗೆ. ಯೋಗದಿಂದ ರೋಗ ಮುಕ್ತಿಯ ಜೊತೆಗೆ ಮನೋ ವಿಕಾಸವೂ ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಂಎಆರ್ ಪಿ ಲೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತಂಜಲಿ ಮಹರ್ಷಿಗಳು ಯೋಗವನ್ನು ಪರಿಚಯಿಸಿದರು. ಇಂದು ಯೋಗ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿದೆ. ಯೋಗ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇದೇ ನೆಲದವರಾದ ನಾವು ಯೋಗವನ್ನು ಕಡೆಗಣಿಸಿದೆ ಬದುಕಿನ ಭಾಗವಾಗಿಸಿಕೊಳ್ಳಬೇಕೆಂದರು. ಅಲ್ಲದೆ ಮಕ್ಕಳು ಓದಿನ ಜೊತೆಗೆ ಇತರೆ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಆಟಪಾಠಗಳಲ್ಲಿ ಮಕ್ಕಳು ಭಾಗವಹಿಸಿದರೆ ಗಟ್ಟಿಮುಟ್ಟಿ ನಿಂದ ಆರೋಗ್ಯ ಕಾಪಾಡಿಕೊಳ್ಳುತ್ತಿರ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಶಾಲೆಯನ್ನು ನೋಡಿಕೊಳ್ಳಲು ಇಬ್ಬರನ್ನು ನಿಯೋಜನೆ ಮಾಡಲಾಗಿದೆ, ಶಾಲೆಯಲ್ಲಿ ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯದ, ಗುಣಮಟ್ಟದ ಶಿಕ್ಷಣ, ಮಕ್ಕಳಿಗೆ ಆಟವಾಡಲು ಪರಿಕರಗಳು, ಈಜುಕೊಳ ಹೀಗೆ ಶಾಲೆಯಲ್ಲಿ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ, ಎಲ್ಲವನ್ನೂ ಕಲ್ಪಿಸಲಾಗಿದೆ. ಯೋಗ ಶಿಕ್ಷಕಿಯರು ವಾರದಲ್ಲಿ 2 ದಿನ ಮಕ್ಕಳಿಗೆ ಶಾಲೆಯಲ್ಲಿಯೇ ತರಬೇತಿ ನೀಡುತ್ತಾರೆ. ಅದನ್ನು ಕಲಿತುಕೊಂಡು ಆರೋಗ್ಯಕಾಪಾಡಿಕೊಳ್ಳಬೇಕೆಂದರು.
ಬಿಬಿಎಂಪಿ ಮಾಜಿ ಸದಸ್ಯರಾದ ಆಡುಗೋಡಿ ಬಿ.ಮೋಹನ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಎಲ್ಲಾ ಮಕ್ಕಳು ಯೋಗಾಭ್ಯಾಸದ ಮೂಲಕ ಉತ್ತಮ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು. ಬೆಂಗಳೂರಿನಲ್ಲಿ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಮೊದಲಬಾರಿಗೆ ಯೋಗ ತರಗತಿ ಪ್ರಾರಂಭ ಮಾಡಲಾಗಿದೆ. ಸಚಿವರು ಎಲ್ಲದಕ್ಕೂ ಸಂಪೂರ್ಣ ಸಹಕಾರ ನೀಡಿದರೆ. ಇದರ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳಬೇಕಾವುದೇ. ಅಲ್ಲದೆ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಬಹಳ ಮುಖ್ಯವಾಗಿದೆ. ಎಲ್ಲಾ ಶಾಲೆಗಳಿಗೆ ನಮ್ಮ ಎಂಎಆರ್ ಪಿ ಲೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೀತಿ ಮಾದರಿಯಾಗಬೇಕಿದೆ.
ಯೋಗದಿಂದ ಆಗುವ ಪ್ರಯೋಜನ, ಯೋಗದಲ್ಲಿ ಎಸ್ಟು ಬಗೆಗಳು ಇವೆ, ಅದರ ಹಿನ್ನೆಲೆ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿದರು. ಯೋಗ ಮಾಡುವವರ ಆರೋಗ್ಯ ಗಟ್ಟಿಯಾಗಿರುತ್ತದೆ. ಮಕ್ಕಳು ಚಿಕ್ಕವರಾಗಿದ್ದಾಗ ಲೇ ಯೋಗದಲ್ಲಿ ತೊಡಗಿ ಅದರ ಪ್ರಯೋಜನ ಪಡೆದುಕೊಳ್ಳಬಹುದು.
ಮೊದಲ ಬಾರಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವನ್ನು ನೀಡಲಾಗುತ್ತಿದ್ದು; ಇತರೆ ಎಲ್ಲಾ ಶಾಲೆಗಳಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲೂ ಯೋಗ ತರಬೇತಿ ಹಮ್ಮಿಕೊಂಡರೆ ಉತ್ತಮ ಬೆಳವಣಿಗೆಯಾಗಲಿದೆ ಎಂದು ಮಕಕ್ಕಿಗೆ ಸಲಹೆ ನೀಡಿದರು.
ನಮ್ಮ ಶಾಲೆ ಎಲ್ಲಾ ವಿಚಾರದಲ್ಲಿ ಮುಂದೆ ಇದೆ. ಮಕ್ಕಳಿಗೆ ಬೇಕಾಗುವ ಪರಿಕರಗಳನ್ನು ಒದಗಿಸಲಾಗುತ್ತದೆ. ಮಕ್ಕಳೆಲ್ಲ ಅತಿ ಹೆಚ್ಚಿನದಾಗಿ ಶಾಲೆಗೆ ಸೇರಲು ಹಾಗು ಶಾಲೆಯಲ್ಲಿ ಯೋಗ ಸಿಂದ ಆರೋಗ್ಯದ ಜೊತೆ ವಾತಾವರಣ ಬಹಳ ಮುಖ್ಯವಾಗುತ್ತದೆ, ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ಕೊಟ್ಟಂಗೆ ಆಗುತ್ತದೆ. ಪಠ್ಯದ ಜೊತೆ ಸಮಾನವಾಗಿ ಇಟ್ಟರೆ ಚಟುವಟಿಕೆಯಲ್ಲಿ ಭಾಗವಹಿಸುವುದು ಒಳ್ಳೆಯದು, ಅನತಃ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಯಾಗಿದೆ. ನಮ್ಮ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಮಂಜುನಾಥ್, ಡಿಸಿಪಿ, ಸಿಎಆರ್ (ದ) ಚನ್ನವೀರಪ್ಪ ಹಡಪದ್, ಬಿಇಓ(ದ) ಡಾ.ಶಶಿಕಲಾ, ಎಸಿಪಿಗಳಾದ ಶ್ರೀನಿವಾಸ್, ಸುರೇಶ್, ಇಇ ಅಶೋಕ್, ಎಇಇ ವಿಜಯೇಂದ್ರ, ಎಇ ನವೀನ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ನೇತ್ರಾವತಿ, ಬಿಆರ್ಎಸ್ (ದ) ಚಂದ್ರಪ್ಪ, ಯೋಗ ಶಿಕ್ಷಕರಾದ ಮಂಜುಳಾ, ಸುಮ ಸೇರಿ.ದಂತೆ ಅನೇಕರು ಹಾಜರಿದ್ದರು.