ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ವೀರಶೈವ ಧರ್ಮವನ್ನೆ ಕಡೆಗಣಿಸುತ್ತಿದ್ದು ನಮ್ಮ ಸಮಾಜವನ್ನು ಪೋಷಿಸಬೇಕಾದ ಪ್ರತಿನಿಧಿಗಳು ವೈರಿಗಳ ನಡೆದುಕೊಳ್ಳುತ್ತಿದ್ದಾರೆ.ಯಾವತ್ತೂ ವೀರಶೈವರಿಗೆ ವೀರಶೈವರು ವೈರಿಗಳಾಗಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಕಿವಿ ಮಾತು ಹೇಳಿದರು. ಅವರು ಆನಂದರಾವ್ ಸರ್ಕಲ್ ಹತ್ತಿರಯಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಸಂಸ್ಕೃತಿ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ನಮ್ಮ ಸಮಾಜದ ಕೆಲ ದೊಡ್ಡ ದೊಡ್ಡ ರಾಜಕಾರಣಿಗಳು ಜಗದ್ಗುರು ಪಂಚಚಾರ್ಯ. ರೇಣುಕಾಚಾರ್ಯ ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅವರ ಬೋದನೆಯನ್ನು ಅನುಸರಿಸುವ. ಸ್ಮರಿಸುವ, ಗೌರವಿಸುವ ಕಾರ್ಯವನ್ನು ಮಾಡುತ್ತಿಲ್ಲ, ಇದು ನಡೆಯಬಾರದು ಎಂದರು.
ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಸಭ್ಯತೆ ಸಾಮರಸ್ಯ ಬೆಳೆಸುವುದೇ ಇವೆರಡೂ ಸಂಸ್ಕೃತಿ ಧರ್ಮದ ಗುರಿಯಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ವೀರಶೈವ ಧರ್ಮ ಸದಾ ಶ್ರಮಿಸುತ್ತಾ ಬಂದಿದೆ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಉತ್ಕೃಷ್ಟ ಸಂಸ್ಕೃತಿಯ ಸಂವರ್ಧೇನೆಗಾಗಿ ಶ್ರಮಿಸಿದೆ ಎಂದರು. ಜಾತಿ ಮತ ಪಂಥಗಳ ಗಡಿ ಮೀರಿ ಉದಾತ್ತ ಜೀವನ ಮೌಲ್ಯಗಳನ್ನು ಈ ಬೆಳೆಸುವ ಗುರಿಯನ್ನು ಹೊಂದಿದೆ. ಗುರಿಯಿಲ್ಲದ ಗುರಿ ಸಾಧಿಸದ ಜೀವನ ನಿರರ್ಥಕ, ಪ್ರಾಪಂಚಿಕ ಸಂಬಂಧಗಳು ಕೆಲವು ಸಂದರ್ಭದಲ್ಲಿ ಶಿಥಿಲಗೊಂಡರೂ ಗುರು ಶಿಷ್ಯರ ಸಂಬಂಧ ಯಾವಾಗಲೂ ಬೆಳೆಯುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ ಎಂದರು.
ಸಮಾರಂಭ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವುದೇ ಧರ್ಮದ ನಿಜವಾದ ಧೈಯವಾಗಿದೆ. ವೈಚಾರಿಕ ಹೆಸರಿನಲ್ಲಿ ಸಂಸ್ಕೃತಿ,ಸಭ್ಯತೆ ನಾಷಗೊಳ್ಳಬಾರದು, ಯುವ ಸಮೂಹ ಶಿಕ್ಷಣ ಜೊತೆ ಸಂಸ್ಕಾರವನ್ನು ಬೆಳಸಬೇಕಾಗಿದೆ. ವೀರಶೈವ ಸಮುದಾಯವನ್ನು ಒಡೆಯುವ ಕಾಲದಲ್ಲಿ ಒಂದು ಗೂಡಿಸಿದ್ದು ರಂಭಾಪುರಿ ಶ್ರೀಗಳು ಜಗದ್ಗುರುಗಳಾದ ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳು ದಾರಿದೀಪವಾಗಿದೆ ಎಂದರು.
ಬಿ.ಎಸ್.ಪರಮಶಿವಯ್ಯ ಮಾತನಾಡಿ,ಐದು ಪಂಚ ಪೀಠಗಳನ್ನು ಒಂದೆಡೆ ಸೇರಿಸಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡುವುದಾದರೆ ಅದರ ನೇತೃತ್ವವನ್ನು ನಾನೇ ವಹಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಕಲ್ಲುಬಾಳುಮಠದ ಶಿವಾನಂದ ಶಿವಾಚಾರ್ಯರು, ಬೆಳ್ಳಾವಿ ಮಹಾಂತ ಶಿವಾಚಾರ್ಯರು, ಬಿ.ಎಸ್.ಪರಮಶಿವಯ್ಯ, ಗುರುಸ್ವಾಮಿ, ಹೆಚ್.ಬಿ.ನಾಗರಾಜ್, ಪಂಚಾಕ್ಷರಿ ಹಿರೇಮಠ ಮತ್ತು ಸಂಗಯ್ಯ ಹಿರೇಮಠ ಅವರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು, ವೀರಶೈವ ಸಮಾಜದವರು, ಸಂಘದ ಪದಾಧಿಕಾರಿಗಳು ಭಾಗಿ.