ಬೆಂಗಳೂರು : ವಿಶ್ವಕರ್ಮ ಕರ್ಮ’ವನ್ನು ತೊಡೆದು ಹಾಕಿ ಸನ್ಮಾರ್ಗದಿಂದ ನಡೆಯುವಂತೆ ಜನರಲ್ಲಿ ಮಾರ್ಗದರ್ಶನ ನೀಡುತ್ತೆ. ವಿಶ್ವಕರ್ಮ ಸಮುದಾಯ ಈ ಭೂಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದೆ, ನೀಡುತ್ತಲೇ ಬರುತ್ತಿದೆ. ವಿಶ್ವಕರ್ಮ ಸಮುದಾಯ ಪ್ರತಿಯೊಂದು ಕಸುಬಿನ ಮೂಲ. ಕ್ರಿಯಾಶೀಲತೆ, ಸೃಜನಶೀಲತೆಗೆ ಮತ್ತೊಂದು ಹೆಸರೇ ವಿಶ್ವಕರ್ಮ ಸಮುದಾಯ ಎಂದರೂ ತಪ್ಪಾಗಲಾರದು, ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಹಾಗೂ ಸಮಾಜ ವಿರುದ್ಧ ಮಾತನಾಡಿದ ರಂಗಪ್ಪ ಎಂಬುವರನ್ನು ಪೊಲೀಸ್ ಅಧಿಕಾರಿಗಳು ಬಂದಿಸಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮುದಾಯ ಬೆಂಗಳೂರು ರಾಜ್ಯಾಧ್ಯಕ್ಷೆ ವಸಂತ್ ಮುರುಳಿಯವರು ತಿಳಿಸಿದರು.
ನಂತರ ಮಾತನಾಡಿದ ಅವರು ವಿಶ್ವಕರ್ಮರು ಈ ನಾಡಿನ ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಇಂಥ ಸಮುದಾಯವನ್ನು ಗೌರವಿಸುವ ಮತ್ತು ಆರಾಧಿಸುವ ಬದಲು ಕೆಲ ಅವಿವೇಕಿಗಳು ಈ ವಿಶ್ವಕರ್ಮ ಸಮುದಾಯದ ಬಗ್ಗೆ ಮತ್ತು ವಿಶ್ವಕರ್ಮ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ. ಇವತ್ತು ಈ ಸಮುದಾಯದ ಹೆಣ್ಣು ವಿದ್ಯಾವಂತಳಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಬಲೆಯಾಗುತ್ತಿದ್ದಾಳೆ. ಭಾವನಾತ್ಮಕವಾಗಿ, ಧೈರ್ಯದಿಂದ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು, ಹಿಂಸಾಚಾರಗಳ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದಾಳೆ. ತನಗೆ ಮತ್ತು ತನ್ನ ಸುತ್ತ-ಮುತ್ತಲಿರುವ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯಗಳನ್ನು ಎದುರಿಸಿ ನ್ಯಾಯ ದಕ್ಕಿಸಿಕೊಳ್ಳುತ್ತಿದ್ದಾಳೆ. ಅದೇ ರೀತಿ ಇವತ್ತು. ರಂಗಪ್ಪ.ಆರ್ ಬಿನ್ ರಾಮಾಚಾರಿ ಅನ್ನುವ ವ್ಯಕ್ತಿ, ಅಖಿಲ ಕರ್ನಾಟಕ ವಿಶ್ವಕರ್ಮ ಸಮುದಾಯ ಬೆಂಗಳೂರು ರಾಜ್ಯಾಧ್ಯಕ್ಷೆ ವಸಂತ ಮುರಳಿ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮತ್ತು ವಿಶ್ವಕರ್ಮ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾನೆ.
ಇವತ್ತು ಈ ಸಮುದಾಯ ಆಗಲಿ ಅಥವಾ ಸಮುದಾಯ ಹೆಣ್ಣು ಮಕ್ಕಳಾಗಲಿ ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ಪ್ರತಿ ಕ್ಷಣ ಎಚ್ಚರವಹಿಸುತ್ತಿದ್ದಾರೆ. ಇಂಥ ಹೆಣ್ಣು ಮಕ್ಕಳ ಮೇಲೆ ಮೈಸೂರಿನ ಗಂಗೋತ್ರಿ ಬಡಾವಣೆಯ ನಿವಾಸಿ ರಂಗಪ್ಪ.ಆರ್ ಬಿನ್ ರಾಮಾಚಾರಿ ಅನ್ನುವ ಅವಿವೇಕಿ ಸಮುದಾಯಕ್ಕೆ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿರುವ ವಸಂತ ಮುರಳಿ ಎಂಬ ಹೆಣ್ಣು ಮಗಳ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾನೆ.
ಹಲವು ವರ್ಷಗಳಿಂದ ವಸಂತ ಮುರಳಿ ಅವರು ವಿಶ್ವಕರ್ಮ ಸಮುದಾಯಕ್ಕೆ ಮತ್ತು ಸಂಘಟನೆಗೆ ತಮ್ಮದೇ ಆದಂತಹ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ. ಸಮುದಾಯದ ಉದ್ಧಾರಕ್ಕಾಗಿ ಮತ್ತು ಸಮುದಾಯದ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ದುಡಿದಂತಹ ಹೆಣ್ಣು ಮಗಳು ವಸಂತ ಮುರಳಿ. ತನ್ನ ಸುತ್ತ ಮುತ್ತಲಿನ ಜನರಿಗೆ ಮತ್ತು ಹೆಣ್ಣು ಮಕ್ಕಳಿಗ್ಯಾಗುತ್ತಿರುವ ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ಖಂಡಿಸಿ ಹೋರಾಟ ಮಾಡಿದಂತಹ ದಿಟ್ಟ ಮಹಿಳೆ. ಇಂಥ ಹೆಣ್ಣು ಮಗಳ ಬಗ್ಗೆ ರಂಗಪ್ಪ.ಆರ್ ಎನ್ನುವ ಒಬ್ಬ ಅವಿವೇಕಿ ಅಶ್ಲೀಲ ಪದ ಬಳಕೆ ಮಾಡಿರುವುದು ತಲೆತಗ್ಗಿಸುವಂತದ್ದು.
ವಸಂತ ಮುರಳಿ ಅವರ ಬಗ್ಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುವುದರ ಜೊತೆಗೆ ವಾಟ್ಸಪ್ ಗ್ರೂಪ್ಗಳಲ್ಲಿ ಸಂಬಂಧಗಳನ್ನು ಕಟ್ಟಿ-ಆ ಮೂಲಕ ವಸಂತ ಅವರಿಗೆ ಮನಸ್ಸಿಗೆ ನೋವುಂಟು ಮಾಡುತ್ತಿದ್ದನು. ಅಷ್ಟು ಮಾತ್ರವಲ್ಲ ಈ ಸಮುದಾಯದ ಮುಖಂಡರು, ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದನು. ಇಂಥ ಸಮಾಜ ಘಾತುಕ ವ್ಯಕ್ತಿಯನ್ನು ಬೆಂಗಳೂರಿನ ಪೀಣ್ಯ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಇವತ್ತು ವಿಶ್ವಕರ್ಮ ಸಮುದಾಯ ನಮ್ಮ ನಾಡಿನಲ್ಲಿ ತಲೆ ಎತ್ತಿ ನಿಲ್ಲುತ್ತಿದೆ ಅಂದ್ರೆ ಅದು ಸಮಾಜದ ಹೋರಾಟಗಾರರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ. ನಂಜುಂಡಿ ಅವರು ಈ ಹಿಂದೆಯೂ ಸಹ ಸಮಾಜದ ಸುಮಾರು 25 ಕ್ಕೂ ಹೆಚ್ಚು ಮುಖಂಡರುಗಳ ಎದುರಲ್ಲೇ ರಂಗಪ್ಪ ಎನ್ನುವ ವ್ಯಕ್ತಿ ಕೆ. ಪಿ .ನಂಜುಂಡಿ ವಿಶ್ವಕರ್ಮರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ರಂಗಪ್ಪ. ಆರ್ ಅನ್ನುವ ವ್ಯಕ್ತಿ ಸಮಿತಿಯ ಮುಂದೆ ಹಾಜರಾಗಿ ನನ್ನಿಂದ ಸಮಾಜಕ್ಕೆ ಮಹಾ ಅಪರಾಧವಾಗಿದೆ ಎಂದು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದನು ಅಷ್ಟು ಮಾತ್ರವಲ್ಲ ಕ್ಷಮೆ ಕೇಳಿದ್ದನು.
ಈತನ ಸಹಚರರುಗಳು ಇನ್ನು ಮುಂದೆ ಯಾರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡುವುದಿಲ್ಲ ಎಂದು ಕ್ಷಮಾಪಣಾ ಪತ್ರವನ್ನು ಕೂಡ ಬರೆದು ಕೊಟ್ಟಿದ್ದರು. ಇಂಥ ಸಮಾಜ ಘಾತುಕ ರಂಗಪ್ಪ ಆರ್ ಮೇಲೆ ಎಫ್ಐಆರ್ ದಾಖಲಾಗಿದ್ದು ಇದೀಗ ಬೆಂಗಳೂರಿನ ಪೀಣ್ಯ ಪೊಲೀಸ್ ರಾಣೆಯ ಪೊಲೀಸರು ರಂಗಪ್ಪ ರನ್ನು ಅರೆಸ್ಟ್ ಮಾಡಲಾಗಿದೆ. ಸಮಾಜದ ಬಗ್ಗೆ ಹಗುರವಾಗಿ ಮಾತನಾಡುವ ಇಂತಹ ವ್ಯಕ್ತಿಗಳನ್ನು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಇಂತಹ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಶಿಕ್ಷೆಗೆ ಒಳಪಡಿಸಬೇಕಾಗಿದೆ ಎಂದು ವಸಂತ ಮುರಳಿ ಅವರು ಮನವಿ ಮಾಡಿಕೊಂಡರು.