ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕೈದು ದಿನಗಳಿಂದ RDPR ನೌಕರರು ರಾಜ್ಯದಾದ್ಯಂತ ಆಯಾ ಜಿಲ್ಲಾ ಪಂಚಾಯತಿ ಕಛೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಬೆಂಗಳೂರು ನಗರ ಹೊರತಾಗಿಲ್ಲ.
ಬೆಂಗಳೂರಿನ ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ವೃಂದದ ಸಂಘಟನೆಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಜಿಲ್ಲೆ ಸಮಿತಿ ನೇತೃತ್ವದಲ್ಲಿ ಧರಣಿಯನ್ನು ನಡೆಸಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ನಡೆಸುತ್ತಿರುವ ಸತ್ಯಾಗ್ರಹದ ಸ್ಥಳಕ್ಕೆ ಸಂಬನಡಪಟ್ಟ ಅಧಿಕಾರಿಗಳಾಗಲಿ, ಸಚಿವರಾಗಲಿ ಆಗಮಿಸಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
RDPR ಗೆ ಒಳಪಡುವ ಪಂಚಾಯತ್ ರಾಜ್ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, SDA ಅಧಿಕಾರಿಗಳು, ತೆರಿಗೆ ಸಂಗ್ರಹ, ನೀರು ಘಂಟೆಗ, ಕಸ ಗುಡಿಸುವವರು, ಸಹಾಯಕರು ಹೀಗೆ ಹತ್ತು ಹಲವು ವರ್ಗದವರು ಹಲವು ವರ್ಷಗಳಿಂದ ಇಲಾಖೆಯಲ್ಲಿ ಕಷ್ಟವನ್ನು ಅನುಭವಿಸುತ್ತಲೇ ಇದ್ದಾರೆ, ಅದಕ್ಕೆ ಯಾರು ಸೊಪ್ಪು ಇಲ್ಲಿಯತನಕ ಹಾಕಿಲ್ಲದಿರುವುದು ನೋವಿನ ಸಂಗತಿಯಾಗಿದೆ.
ಇಲಾಖೆಯಲ್ಲಿ ಇಲ್ಲಿಯ ತನಕ backlog ಹುದ್ದೆಗಳನ್ನು ಭರ್ತಿ ಮಾಡಿಲ್ಲ, ಸಿಬ್ಬಂದಿಗಳ ಕೊರತೆ ಇದೆ, ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ, ಪದೋನ್ನತಿ ನೀಡುತ್ತಿಲ್ಲ, ಡಿಜಿಟಲ್ ಹೆಸರಿನಲ್ಲಿ ಇಲಾಖೆಯಲ್ಲಿ ಅನೇಕ ತಂತ್ರಾಂಶಗಳು ಬಂದು ಅದನ್ನು ನಿರ್ವಹಣೆ ಮಾಡುವವರು ಯಾರು ಇಲ್ಲದಂತಾಗಿದ್ದು, ತಾಂತ್ರಿಕ ಕೆಲಸವನ್ನು ಸಿಬ್ಬಂದಿ ವರ್ಗದವರೇ ಮಾಡಿಕೊಳ್ಳಲಿ ಎಂದು ಸಲೀಸಾಗಿ ಹೇಳುತ್ತಿರುವುದು ನೌಕರರು ಹಾಗು ಸಿಬ್ಬಂದಿಗಳ ಮೇಲೆ ದುಪ್ಪಟ್ಟು ಕೆಲಸ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ನಿರತರಲ್ಲಿ ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಹಾಗು ಪಿಡಿಒ ಆದ ಎಸ್ ರಮೇಶ್ ಮುಷ್ಕರದಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, 1993 ರಿಂದ ಪಿಡಿಒ ಪ್ರಾರಂಭ ಮಾಡಲಾಗಿದೆ ಅದೇರೀತಿ ಅಂದಿನಿಂದಲೂ ಸಹ RDPR ನಲ್ಲಿ ಸಾಕಷ್ಟು ಸಮಸ್ಯೆಗಳು ಇವೆ, ಅದರಲ್ಲಿ ವೇತನ ಹೆಚ್ಚಳ, ಸಿಬ್ಬಂದಿ ಸಮಸ್ಯೆ,ಬಡ್ತಿ, ಮೂಲಭೂತ ಸೌಕರ್ಯಗಳು, ಇಲಾಖೆಗೆ ಕಟ್ಟಡ ಹೀಗೆ ಹತ್ತು ಹಲವು ಸಮಸ್ಯೆಗಳು ಇದ್ದು ಇಲ್ಲಿಯ ತನಕ ಅವುಗಳ ಬಗ್ಗೆ ಕಿಡಿಗೊಡುವವರು ಯಾರು ಇಲ್ಲದಂತಾಗಿದೆ. ಗ್ರಾಮ ಪಂಚಾಯ್ತಿಯಲ್ಲಿ ನೀರು ಬಿಡುವವನಿಂದ ಹಿಡಿದು ಕಾರ್ಯದರ್ಶಿಗಳ ವರೆಗೆ ಒಂದಲ್ಲ ಒಂದು ರೀತಿಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ.
ಪಿಡಿಒ ಇಲಾಖೆಯಲ್ಲಿ ಹಲವು ವರ್ಷಗಳಿಂದ ಜಾರಿಯಲ್ಲಿರುವ ಸರ್ಕಾರದ ಆದೇಶಗಳು ಅವೈಜ್ಞಾನಿಕವಾಗಿವೆ, ಅನುಷ್ಠಾನ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ವಿಚಾರ, ಗ್ರಾಮೀಣ ಜನರ ಹಿತ ಕಾಯಲು ಬಂದಿದ್ದೇವೆ ಎಂದು ಹೇಳುವ ನಾವು ಆದರೆ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ, ಕೆಲವು ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಲು ಹಿಂದೇಟು ಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
ಅದೇ ರೀತಿ ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ವಿಭಾಗದ ಉಪಾಧ್ಯಕ್ಷರು ಹಾಗು ಪಿಡಿಒ ಆದ ಬಿ ಆರ್ ನಾರಾಯಣ ಸ್ವಾಮಿ ಮಾತನಾಡಿ, ಪಿಡಿಒ, RDPR ನಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು ಅದನ್ನು ಕೀಳುವ ಕೆಲಸವನ್ನು ಯಾರು ಮಾಡುತ್ತಿಲ್ಲ, ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಇಲಾಖೆಯ ಎಲ್ಲಾ ವೃಂದದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ, ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ವರೆಗೂ ನಾವು ನಮ್ಮ ಮುಷ್ಕರವನ್ನು ಕೈಬಿಡಲ್ಲ. ಇಲ್ಲಿಯ ತನಕ ಸಚಿವರಾಗಲಿ, ಸಂಬಂದಿಸಿದ ಅಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸಿದ ತಾತ್ಸಾರ ಮನೋಭಾವ ಮಾಡುತ್ತಿದ್ದಾರೆಂದರು.
ಮಹಿಳೆಯರ ಮೇಲೆ ಹೆಚ್ಚು ಕೆಲಸದ ಒತ್ತಡ!
ಕೊಡುಗೆಹಳ್ಳಿ ಪಿಡಿಒ ಭಾಗೀರತಿ ಮಾತನಾಡಿ, ದಿನದಿಂದ ದಿನಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಾವಿನ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಇದಕ್ಕೆ ಕಾರಣಗಳು ಅನೇಕ ಇವೆ, ಸರ್ಕಾರದ ಲೋಪದೋಷಗಳು ಅನೇಕ ಇವೆ. ಮಹಿಳಾ ಪಿಡಿಒ ಅಧಿಕಾರಿಗಳ ಮೇಲೆ ಹೆಚ್ಚು ಒತ್ತಡ ಆಗುತ್ತಿವೆ, ನಾವು ಪರೀಕ್ಷೆ ಬರೆದಿರುವುದು ಜಿಲ್ಲಾ ವೃಂದಕ್ಕೆ ಆದರೆ ಹೊಸದಾಗಿ ರಾಜ್ಯ ವೃಂದ ಮಾಡಿಕೊಂಡು ಅಲ್ಲಿಗೆ ನೀಮಿಸುತ್ತಿರುವುದು ಇನ್ನಿಲ್ಲದ ಅಂದರೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು. ನಮ್ಮ ಪ್ರಮುಖ ಬೇಡಿಕೆ ಜಿಲ್ಲಾ ವೃಂದವಾಗಿ ಮಾಡಬೇಕು, ಕೆಲಸ ಒತ್ತಡದಲ್ಲಿ ಮಹಿಳೆಯರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ ಸರ್ಕಾರ ಆದಷ್ಟು ಬೀಗ ಪರಿಗಣನೆಗೆ ತೆಗೆದುಕೊಂಡು ಒಂದು ನಿರ್ಧಾರಕ್ಕೆ ಬರಬೇಕು ಎಂದರು.
ಇಲಾಖೆಯಲ್ಲಿ 15 ರಿಂದ 20 ಸಾಫ್ಟವೇರ್ ಇದ್ದು ಅದಕ್ಕೆ ಪ್ರತ್ಯೇಕವಾಗಿ ಪಾಸ್ವರ್ಡ್ ಗಳು ಇವೆ, ಇವುಗಳನ್ನು ಯಾರು ನಿಯತ್ರ್ಣ ಮಾಡುವವರು, ಅದನ್ನು ನಾವೇ ಮಾಡಬೇಕು ಎಂದರೆ ಸಾಧ್ಯನಾ? ಎಂಬ ಪ್ರಶ್ನೆ ಮೂಡುತ್ತದೆ ಎಂದರು. ಕಾರ್ಯಭಾರವನ್ನು ಆದಷ್ಟು ಕಡಿಮೆ ಮಾಡಿ ಮುಂದಾಗುವ ಸಾವು ನೋವುಗಳನ್ನು ತಡೆಯಿರಿ, ಎಂದರು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸುಮಾರು 400 ಕ್ಕಿಂತ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಬೇಡಿಕೆ ಈಡೇರುವ ತನಕ ಧರಣಿ ನಿಲ್ಲಿಸಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಚೇರಿಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ಧರಣಿಯಲ್ಲಿ ಪಾಲುಗೊಂಡಿದ್ದಾರೆ ಎಂದರು.