ರಾಯಚೂರು: ರಾಯಚೂರಿನಲ್ಲಿ ವಿಚಿತ್ರ ಪ್ರಕರಣ ನಡೆದಿದೆ.ಲೋಕಲ್ ಕುಡುಕನೊಬ್ಬ ಲೋಕಲ್ ಡಾಬಾಗೆ ನುಗ್ಗಿ ಲೋಕಲ್ ಬ್ರಾಂಡ್ ಮದ್ಯ ಕಳ್ಳತನ ಮಾಡಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.
ಇಂಥದ್ದೊಂದು ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಮಾಕಾಪುರ ಗ್ರಾಮದಲ್ಲಿ ನಡೆದಿದೆ.ಬಸವರಾಜ್ ಅನ್ನೊ ವ್ಯಕ್ತಿ ಮಾಕಾಪುರ ಗ್ರಾಮದ ಬಳಿ ಡಾಬಾ ನಡೆಸುತ್ತಿದ್ದಾನೆ.ಇತ್ತೀಚೆಗೆ ಆತನ ಡಾಬಾದಲ್ಲಿ ಸಾಲು ಸಾಲು ಕಳ್ಳತನ ಪ್ರಕರಣ ನಡೆದಿದ್ದವು.ದೊಡ್ಡ ಹಣವಾಗಲಿ ಇಲ್ಲಾ ದೊಡ್ಡ ವಸ್ತುಗಳ ಕಳ್ಳತನ ಆಗಿರ್ಲಿಲ್ಲ.ಬರಿ ಮದ್ಯದ ಬಾಟಲ್ ಗಳು,ಇಲ್ಲ ಮದ್ಯದ ಟೆಟ್ರಾ ಪ್ಯಾಕೆಟ್ ಗಳನ್ನ ಖದೀಮರು ಅಬೇಸ್ ಮಾಡುತ್ತಿದ್ದರು.ಇದೇ ಕಾರಣಕ್ಕೆ ಬಸವರಾಜ್ ಡಾಬಾಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ.ಇದಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ.
ನಿನ್ನೆ ರಾತ್ರಿ ಡಾಬಾ ಬಂದ್ ಆದ ಬಳಿಕ ಪಂಚೆ ಉಟ್ಟಿದ್ದ ಕಳ್ಳನೊಬ್ಬ ಬಸನರಾಜನ ಡಾಬಾಗೆ ಬಂದಿದ್ದ. ಬೀಗ ಮುರಿಯದೇ ಆ ಪಂಚೆ ಉಟ್ಟಿದ್ದ ಕಳ್ಳ ಟಿನ್ ಶೆಡ್ ಗಳ ಅಂತರದಲ್ಲಿ ತೂರಿ ಒಳಗೆ ಬಂದಿದ್ದ. ಬಳಿಕ ಗಲ್ಲಾ ಪೆಟ್ಟಿಗೆ ಸ್ವಲ್ಪ ಹಣ ಇದ್ದರೂ ಆ ಕಳ್ಳ ಮುಟ್ಟಿರಲಿಲ್ಲ. ಆದರೆ ಅದೇ ಗಲ್ಲಾ ಪೆಟ್ಟಿಗೆ ಬಳಿಯಿದ್ದ ಪಕ್ಕಾ ಲೋಕಲ್ ಎಣ್ಣೆಯನ್ನ ಕಳ್ಳತನ ಮಾಡಿಕೊಂಡು ಜೂಟ್ ಆಗಿದ್ದಾನೆ.
ಇಂದು ಬೆಳಿಗ್ಗೆ ಮಾಲೀಕ ಬಸವರಾಜ್ ಡಾಬಾಗೆ ಬಂದಾಗ ಅಸಲಿ ಕೃತ್ಯ ಬಯಲಾಗಿದೆ.ಈ ಬಗ್ಗೆ ಮುದಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಶುರುಮಾಡಿದ್ದಾರೆ.