ಬೆಂಗಳೂರು: ರೋಟರಿ ಸಂಸ್ಥೆ ವತಿಯಿಂದ ಹಿರಿಯ ನಾಗರಿಕರು ಮತ್ತು ಅಗತ್ಯವಿರುವವರಿಗೆ ವೈದ್ಯಕೀಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ 3192ರ ಜಿಲ್ಲಾ ರೋಟರಿ ಸಂಸ್ಥೆಯಿಂದ ಆಸರೆ ಎಂಬ ವಿನೂತನ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಗವರ್ನರ್ ಮಹಾದೇವ ಪ್ರಸಾದ್.ಎನ್. ಎಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಎಲ್ಲೆಡೆಯೂ ನಮ್ಮ ಸಂಸ್ಥೆಯ ಇದ್ದು, ವಯೂ ವೃದ್ಧರಿಗೆ ತುರ್ತು ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಮನೆಬಾಗಿಲಿಗೆ ಉಚಿತವಾಗಿ ಆಂಬುಲೆನ್ಸ್ ಒದಗಿಸುವ ಕೆಲಸ ಮಾಡಲಾಗುತ್ತದೆ. ಇದರಿಂದ ವೃದ್ಧರಿಗೆ ಅನುಕೂಲವಾಗಲಿದೆ.
ಈ ಯೋಜನೆಯಲ್ಲಿ ಸಾರ್ವಜನಿಕರಿಗೆ ರೋಟರಿ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ನೇರ ಸಂಪರ್ಕ ಸಾಧಿಸಲು ಅವಕಾಶ, ಹೆಚ್ಚಿನ ಪಾರದರ್ಶಕತೆ ಮತ್ತು ಸಮುದಾಯದೊಂದಿಗೆ ನಿಕಟ ಸಂಪರ್ಕ, ವಿ ಮಿಡೋ ವೈದ್ಯಕೀಯ ಸೇವೆಗಳ ಮೂಲಕ ತುರ್ತು ವೈದ್ಯಕೀಯ ಸಹಾಯಕ್ಕೆ ಸುಲಭ ಅವಕಾಶ, ರೋಟರಿಯ ಸ್ಥಳೀಯ ಅಗತ್ಯತೆಗಳಿಗೆ ಸ್ಪಂದಿಸಲು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತಿದ್ದು ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಸೇವೆ ಮತ್ತು ಆಸ್ಪತ್ರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಇದಲ್ಲದೆ ಸರ್ವೇಕಲ್ ಕ್ಯಾನ್ಸರ್ ಇರುವ ಮಕ್ಕಳಿಗೂ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದ್ದಾರೆ, ಪ್ರತಿ ವರ್ಷವೂ ಸಹ 3192 ಜಿಲ್ಲಾ ರೋಟರಿ ಸಂಸ್ಥೆ ವರ್ಷದ ಉದ್ದಕ್ಕೂ ಅನೇಕ ರೀತಿಯ ವೈದ್ಯಕೀಯ ಸೇವೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಸಾವಿರಾರು ಜನರಿಗೆ ಹೃದಯ ಚಿಕಿತ್ಸೆ, ಕಣ್ಣಿನ ಪೊರೆ ಚಿಕಿತ್ಸೆ, ರಕ್ತದಾನ ಶಿಬಿರ ಮಾಡಿಕೊಂಡು ಬರಲಾಗುತ್ತದೆ.
ಆದರೆ ಯೋಜನೆಯ ಪ್ರಮುಖಗಳು
ತುರ್ತು ಸಂಖ್ಯೆಯ ನಿರ್ವಹಣೆ, ಸ್ಥಳೀಯ ಸೇವಾ ಸಂಪರ್ಕ, ವೈದ್ಯಕೀಯ ಸೇವೆಗಳ, ರೊಟರಿಯ ತುರ್ತು ಸಂಖ್ಯೆಗೆ ಕತೆ ಮಾಡಿದರೆ ಮನೆಬಾಗಿಲಿಗೆ ಸೇವೆ, ಆಯಾ ಪ್ರದೇಶದಲ್ಲಿ ರೋಟರಿ ಚಟುವಟಿಕೆಯಲ್ಲಿ ತೊಡಗಿರುವವರು ವ್ಯಕ್ತಿಗಳನ್ನು ಗುರುತಿಸಿ ರೋಟರಿ ವಾಟ್ಸಪ್ ಗೆ ಕನೆಕ್ಟ್ ಮಾಡಲಾಗುತ್ತದೆ, ಸಾರ್ವಜನಿಕರು ಸಹಾಯಕ್ಕಾಗಿ 9535534666ಗೆ ಕರೆ ಮಾಡಬಹುದು. ಇದರಿಂದ ವೈದ್ಯಕೀಯ ಸೇವೆಗೆ ಸಂಪರ್ಕ ಮಾಡಲಾಗುತ್ತದೆ. ವಿ ಮಿಡೋ ಸಂಸ್ಥೆಯೊಂದಿಗೆ ಆನ್ಲೈನ್ ಮೂಲಕ ವೈದ್ಯರ ಸಮಾಲೋಚನೆ ಉಚಿತವಾಗಿ ಮಾಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಜಿಲ್ಲಾ 3192 ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕರು, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.