ಬೆಂಗಳೂರು:ಕೃಷ್ಣ ಕಣಿವೆ ನೀರಾವರಿ ಬಗ್ಗೆ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ತಮ್ಮ ಸಾಹಿತ್ಯದ ಮೂಲಕ ಸಂಶೋಧನೆ ಮಾಡಿ ಹಿದ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಸಚಿವ ಹೆಚ್ ಕೆ ಪಾಟೀಲ ತಿಳಿಸಿದರು.
ಬೆಂಗಳೂರಿನ ಗಾಂಧಿಭವನದಲ್ಲಿ ಹಿರಿಯ ಸಾಹಿತಿ ಹಾಗೂ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ 84 ವರ್ಷ ವಾಗಿದ್ದು, ಬದುಕು ಬರಹ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೃಷ್ಣ ಅವರು ಬದುಕಿನ ಉದ್ದಕ್ಕೂ ಬರಹ, ಸಂಘರ್ಷ, ಸಾಹಿತ್ಯದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ನಮಗೆ ಅರಿವಾಗುವಂತೆ ತಿಳಿಸುತ್ತಿದ್ದರು, ಆಗ ನಮಗೆ ಕೊಂಚ ಗಲಿಬಿಲಿ ಆಗುತ್ತಿತ್ತು.
ಕೃಷ್ಣ ಕಣಿವೆ ಇತಿಹಾಸ, ಸಮಸ್ಯೆ, ನೀರು ಸಿಗುವ ವಿಚಾರವಾಗಿ ಕೃಷ್ಣ ಅವರು ಗ್ರಂಥ, ಸಾಹಿತ್ಯದ ಮೂಲಕ ಅಭಿಯಾನ ವಿಚಾರಗಳನ್ನು ಮಾಡಿದ್ದಾರೆ. ಸರ್ಕಾರವೇ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರನ್ನು ಗೌರವಿಸಬೇಕು, ಕೃಷ್ಣ ಅವರ ಲೇಖನ, ಸಾಹಿತ್ಯ ಸರ್ಕಾರಕ್ಕೆ ಮುಟ್ಟುವ ರೀತಿ ಮಾಡಲಾಗಿದೆ. ಬಿಜಾಪುರದಲ್ಲಿ ಪ್ರವಾಸೋಧ್ಯಮ, ಆದಿಲ್ ಶಾಹಿ, ಬಗ್ಗೆ ಅವರು ನನಗೆ ಸಾಕಷ್ಟು ತಿಳಿಸಿದ್ದರು. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂ ಬಿ ಪಾಟೀಲ ಅವರಾಗಿದ್ದಾರೆ.
ಕಲಬುರ್ಗಿಯವರ 42 ಸಂಪುಟಗಳನ್ನು ಕೃಷ್ಣ ಅವರು ಹೊರ ತರಲು ಮುಂದಾಗಿದ್ದಾರೆ. ಸಮಗ್ರ ಸಾಹಿತ್ಯ ರಚನೆ ವಿಚಾರದಲ್ಲೂ ಅವರ ಪಾತ್ರ ಬಹಳ ಮುಖ್ಯ ಎಂದರು.
ಸಚಿವ ಎಂ ಬಿ ಪಾಟೀಲ ಮಾತನಾಡಿ, 84 ವರ್ಷವಾದರೂ ಸಹ ಯುವಕರ ತರ ಇದ್ದಾರೆ, ವಿಜಯಪುರದಲ್ಲಿ ಹಳ್ಳಕಟ್ಟಿ ಸಂಶೋಧನಾ ಕೇಂದ್ರ ಬೆಳೆಯಲು ಕೃಷ್ಣ ಅವರ ಪಾತ್ರ ಬಹಳ ಇದೆ. ಆದಿಲ್ ಶಾಹಿ ಗ್ರಂಥ ಉರ್ದು, ಪರ್ಷಿಯನ್ ಭಾಷೆಯಿದ್ದ ಕನ್ನಡಕ್ಕೆ ಅನುವಾದವನ್ನು ಮಾಡಿದ್ದಾರೆ. ಒಂದು ಕಡೆ ವಚನ ಸಾಹಿತ್ಯ, ದಾಸ ಸಾಹಿತ್ಯ ಬಗ್ಗೆಯೂ ಎಲ್ಲವನ್ನೂ ಒಂದು ಮಾಡುವ ಕೆಲಸ ಮಾಡಿದರು.
ಬ್ರಿಟಿಷರ ಕಾಲದಲ್ಲಿದ್ದ ಲಿಂಗಾಯತ ಸಮುದಾಯವನ್ನು ಕೃಷ್ಣ ಅವರು ರಾಜ್ಯಕ್ಕೆ ಪರಿಚಯಿಸಿದ್ದಾರೆ. ವಿಜಯಪುರದಲ್ಲಿ ಹೆಚ ಕೆ ಪಾಟೀಲ ಜೊತೆಯಾಗಿ ಬೃಹತ್ ಸಮಾವೇಶದಲ್ಲಿ ಅವರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಗುತ್ತದೆ, ಅದು ವಿಜಯಪುರದ ಜನರಿಗೆ ತಿಳಿಯಲಿ ರಂದು ತಿಳಿಸಿದರು. ಕೃಷ್ಣ ಅವರಿಗೆ ರಾಜ್ಯೋತ್ಸವ, ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ ಎಂದರು.
ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ನೀರಾವರಿ ಸಚಿವರಾಗಿ ಎಂ ಬಿ ಪಾಟೀಲ, ಹೆ ಕೆ ಪಾಟೀಲ, ಬಸವರಾಜ ಬೊಮ್ಮಾಯಿ ಅವರು ಸಹಕರಿಸಿರುವುದಕ್ಕೆ ಇದೆಲ್ಲಾ ಮಾಡಲು ಸಾಧ್ಯವಾಯಿತು. ಕಷ್ಟದ ಕಾಲದಲ್ಲಿ ಒಬ್ಬಬ್ಬರು ನಿಂತು ನನ್ನನ್ನು ಕೈಹಿಡಿದು ಬಹಳಷ್ಟು ಜನ ಸಹಾಯ ಮಾಡಿದ್ದಾರೆ. ಖ್ಯಾತ ಸಂಶೋಧಕ ದ್ರೋಣಚಾರ್ಯ ಅವರು ನನಗೆ ಸಂಶೋಧಕ ಗುರುಗಳು ಎಂದು ನೆನಪಿಸಿಕೊಂಡರು.
ಪರ್ಷಿಯನ್, ಉರ್ದು, ಲಕನಿ,ಅರೇಬಿಕ್ ಭಾಷೆಯಲ್ಲಿ ಗ್ರಂಥವನ್ನು ಮುಸಲೋನಿ ಅವರು ಪಕ್ಕದಲ್ಲಿ ಕುಳಿದುಕೊಂದು ಹೇಳುತ್ತಿದ್ದರು, ಅದು ನನಗೆ ಅನುವಾದ ಮಾಡಲು ಸಹಕಾರಿಯಾಯಿತು. 84 ವರ್ಷಗಳಲ್ಲಿ ಹಲವಾರು ಜನರ ಬೆಂಬಲದಿಂದ ಈ ಮೂರ್ತಿ ದೊಡ್ಡ ಹಂತಕ್ಕೆ ನಿಂತಿದೆ ಎಂದರು.
ಕುಲಕರ್ಣಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡಬೇಕು
ಅಧ್ಯಕ್ಷೀಯ ಭಾಷಣವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕೃಷ್ಣ ಅವರ ಸಾಹಿತ್ಯ ಎಲ್ಲರಿಗೂ ವಿಶೇಷವಾಗಿದೆ, ಆದಿಲ್ ಶಾಹಿಗಳು ಆಡಳಿತ ಮಾಡುತ್ತಾ ಬದಲಾವಣೆ ಹೀಗೆ ಮಾಡಿಕೊಂಡರು ಎಂಬುದು ಕೃಷ್ಣ ಅವರ ಸಾಹಿತ್ಯದಲ್ಲಿ ಸಿಗುತ್ತದೆ, ಬಾಂಬ್ ರಾಜ ಸಾಹಿತ್ಯ ಕೃತಿ ಹೇಗೆಲ್ಲಾ ಜನರ ಬದಲಾವಣೆ ಆಗಿದೆ, ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನು ಕುಲಕರ್ಣಿ ಅವರು ತಿಳಿಸಿದ್ದಾರೆ.
ನೀರಾವರಿ ವಿಚಾರದಲ್ಲಿ ಕೃಷ್ಣ ಅವರು ನಿಷ್ಠುರವಾಗಿ ಮಾತನಾಡುತ್ತಿದ್ದರು. ಆದಿಲ್ ಶಾಹಿ ಜೊತೆ ದಾಸ ಸಾಹಿತ್ಯ, ತಳಕು ಹಾಕುತ್ತಿದ್ದರು, ಸಾಹಿತಿಗಳಿಗೆ ಸಿಗುವ ಕೇಂದ್ರ, ರಾಜ್ಯ, ನಿಜವಾದ ಪ್ರಶಸ್ತಿಗಳು ಸಿಕ್ಕಿಲ್ಲದಿರುವುದು ವಿಪರ್ಯಾಸ ಎಂದರು. ಕೃಷ್ಣ ಕಣಿವೆ ನೀರಾವರಿ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವ ಹಾಗೆ ಮಾಡಬೇಕು.
ಕೃಷ್ಣ ಕಣಿವೆ ಬಗ್ಗೆ ಸರ್ಕಾರದಿಂದಲೇ ಅನುಧಾನ ಸಿಗಬೇಕು, ರಾಜ್ಯ ಸರ್ಕಾರದ ವತಿಯಿಂದ ಯೋಜನೆಯ ಬಗ್ಗೆ ಜನರಿಗೆ ಫಲಪ್ರದ ವಾಗುವಂತೆ ಸಿಗಬೇಕು, ನೀರಾವರಿ ವಿಚಾರದ ಬಗ್ಗೆ ಸಾಹಿತ್ಯದಿಂದ ಸಿಗುವಂತೆ ಮಾಡಿರುವ ಕೃಷ್ಣ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯಿಕ ಕ್ಷೇತ್ರದಲ್ಲಿ ಸಾಧ್ನೆ ಮಾಡಿದವರಿಗೆ ಕೊಡಮಾಡುವ ಪ್ರಶಸ್ತಿಗಳು ಸಾಕಷ್ಟು ಇವೆ, ಅದೇ ರೀತಿ ಸಾಹಿತ್ಯದ ಮೂಲಕ ಸಂಶೋದನೆ ಮಾಡಿದವರಲ್ಲಿ ಕುಲಕರ್ಣಿಯವರು ಒಬ್ಬರು. ಅವರಿಗೆ ರಾಜ್ಯದಿಂದ ಪ್ರಶಸ್ತಿಗಳು ಸಿಕ್ಕಿವೆ ಆದರೆ ಕೇಂದ್ರದಿಂದ ಸಾಹಿತ್ಯ ಪ್ರಶಸ್ತಿ ಸಿಗದಿರುವುದು ಶೋಚನೀಯ ಸಂಗತಿ ಎಂದರು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು. 84 ಕ್ಕಿಂತ ಹೆಚ್ಚು ಸಂಶೋಧನಾ ಕೃತಿಗಳನ್ನು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ರಚಿಸಿದ್ದಾರೆ. ಆದರೆ ರಾಜ್ಯದಲ್ಲಿ ಸಿಗಬೇಕಾದ ಮನ್ನಣೆ ಮಾತ್ರ ಸಿಕ್ಕಿಲ್ಲ, ಅದನ್ನು ಸಾಹಿತ್ಯಕಾರರು, ರಾಜಕೀಯ ಪ್ರತಿನಿಧಿಗಳು ಮಾಡಬೇಕು ಎಂದರು.
ಕೃಷ್ಣ ಕೊಲ್ಹಾರ ಕುಲಕರ್ಣಿ , ವಿಜಯ , ಕಮಲೇಶ್, ಪೂಜಾ, ಎಂ ಬಿ ಪಾಟೀಲ್, ಆಶಾ,ಬಸವರಾಜ, ಬಸವರಾಜ ಬೊಮ್ಮಾಯಿ,ಸತ್ಯ ಧನರಾಜ ಕಟ್ಟಿ