ಬೆಂಗಳೂರು: ಸಂಯುಕ್ತ ಸ್ವಕುಳಸಾಳಿ ಸಂಘ ಆರ್ಥಿಕವಾಗಿ ರಾಜಕೀಯವಾಗಿ ಹಿಂದುಳಿದಿದ್ದು, ಪ್ರಸ್ತುತ ಹಂತ ಹಂತವಾಗಿ ಮುಂದೆ ಬರುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಅವರು ತಿಳಿಸಿದರು.
ಬೆಂಗಳೂರಿನ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದಲ್ಲಿ ಭಗವಾನ್ ಶ್ರೀ ಜಿಹ್ನೇಶ್ವರ ಜಯಂತಿ ಆಚರಣೆಯನ್ನು ಸಂಯುಕ್ತ ವತಿಯಿಂದ ವಿಶೇಷವಾಗಿ ಆಚರಿಸಿಕೊಳ್ಳಲಾಯಿತು, ಪ್ರತಿ ವರ್ಷವೂ ಜಿಹ್ನೇಶ್ವರ ಜಯಂತಿಯನ್ನು ರಾಜ್ಯ, ದೇಶದಲ್ಲಿ ಅದ್ದೂರಿಯಾಗಿ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ, ಅದೇ ರೀತಿ ಕರ್ನಾಟಕದಲ್ಲಿ ಸಮುದಾಯವು ಸಹ 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಪ್ರತಿ ವರ್ಷವೂ ಸಹ ವಿಭಿನ್ನ ಹಾಗೂ ವಿಶೇಷವಾಗಿ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ರಾಜಕೀಯವಾಗಿ ಹಿಂದೆ ಉಳಿದಿದ್ದು, ಮುಖ್ಯವಾಹಿನಿಗೆ ಬರಲು ಯಾರ ಪ್ರೋತ್ಸಾಹ ಸಿಗುತ್ತಿಲ್ಲ
ಬೆಳಿಗ್ಗೆಯಿಂದ ಸಂಜೆ ತನಕ ಹತ್ತು ಹಲವು ಕಾರ್ಯಕ್ರಮಗಳು ನಡೆದವು, ಸಾಮೂಹಿಕ ಪೂಜೆ,ಜಿಹ್ನೇಶ್ವರ ತೊಟ್ಟಿಲೋತ್ವವ, ಪೂಜಾರತಿ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆದವು,
ಸಂಯುಕ್ತ ಸ್ವಕುಳಸಾಳಿ ಸಂಘ ಪ್ರತಿ ವರ್ಷ ವಿಭಿನ್ನವಾಗಿ ಜಿಹ್ನೇಶ್ವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ,ಈ ಬಾರಿ 40 ಜನ ವಿದ್ಯಾರ್ಥಿಗಳಿಗೆ ಎಸ್ ಎಸ್ಎಲ್ಸಿ ಪಿಯುಸಿ ಹಾಗು ಡಿಗ್ರಿ ಮಾಡಿರುವ ಹಾಗೂ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಘದಿಂದ ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಇನ್ನು ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ, ವೈದ್ಯಕೀಯ,ಪರಿಸರ,ಕಲೆ, ಧಾರ್ಮಿಕ, ಉದ್ಯಮ,ರಾಜಕೀಯ,ಕ್ರೀಡಾ,ಸಾಂಸ್ಕೃತಿಕ,ಪ್ರವಾಸ ಹೀಗೆ ಹತ್ತು ಹಲವು ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ 9 ಜನ ಸಂಘದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು, ಅದರಲ್ಲಿ ಈಶ್ವರರಾವ್ ಕಾಪ್ಸೆ , ಡಾ. ನರೇಂದ್ರ ರಾವ್ ಪಾಂಡ್ರೆ, ಡಾ. ಮೀನಾ ಸರೋದೆ, ಶಿವಶಂಕರ್ ಹಾಲುಬಾಯಿ, ನಾಗರಾಜ್ ಸುರಸ್ ಗಾರ್, ಸುರೇಶ್ ಬಾಬು ಚೆಲ್ಲಾಳ, ಶ್ರೀನಿವಾಸ ಸುಧಾಕರ್ ಪಾಂಡ್ರೆ ವರ್ಧನ್ ಬಾಲು, ಶ್ರೀಮತಿ ಸವಿತಾ ಮತ್ತು ಶ್ರೀನಿವಾಸ ಪಾಣಿಭಾತೆ.
ಇನ್ನು ಇದೇ ವೇಳೆ ಭಗವಾನ್ ಶ್ರೀ ಜಿಹ್ನೇಶ್ವರ ಭಾವಚಿತ್ರವನ್ನು ಇಟ್ಟು ವಿಶೇಷವಾಗಿ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆದವು, ಕಾರ್ಯಕ್ರಮದಲ್ಲಿ ಕೇಂದ್ರ ಮಂತ್ರಿಗಳಾದ ವಿ ಸೋಮಣ್ಣ, ಮಾಜಿ ಶಾಸಕರಾದ ಎಂ ಡಿ ಲಕ್ಷ್ಮೀನಾರಾಯಣ, ಸಹ ಪೋಷಕರಾದ ಡಾ. ಪುಷ್ಪಾ ಕ್ಷೀರಸಾಗರ್, ಗುರುನಾಥ ಕಾಂಬಳೆ,ದಾನಪ್ಪ ಪಾನಿಭಾತೆ, ದಾನಪ್ಪ ಪಾನಿಭಾತೆ, ಡಾ.ಗಿರಿಧರ ಗಾಯಕವಾಡ,ಪ್ರದೀಪ್ ರೋಖಡೆ,ವೆಂಕಟೇಶ್ ಚಿಲ್ಲಾಳ,ಮಾಧವರಾವ್ ಏಕಾಬೋಟೆ,ಬಸವರಾಜ ಪಾಡಮುಖಿ,ಸುರೇಶ್ ಸರೋದೆ,ರಾಮಕೃಷ್ಣ ಪಾಡಮುಖಿ, ಜಿಹ್ವಾಜಿ ಭಂಡಾರೆ, ಜಲಜಾ ಸವ್ವಸೇರೆ, ಜ್ಯೋತಿ ದರೋದೆ, ಗುರುಪ್ರಸಾದ್ ಗಾಯಕವಾಡ, ರಕ್ಷಿತ್ ಜುಜಾರೆ ಸೇರಿದಂತೆ ಇತರರು ಭಾಗವಹಿಸಿದರು. ಕೊನೆಯದಾಗಿ ಸಂಘದ 18ನೇ ವಾರ್ಷಿಕ ಮಹಾಸಭೆ ನಡೆಯಿತು, ಅದರಲ್ಲಿ ಮುಂದಿನ ವರ್ಷ ಮಾಡಬೇಕಾದ ಕಾರ್ಯಕಲಾಪಗಳು ಬಗ್ಗೆ ಚರ್ಚೆಗಳು ನಡೆದವು.