ಬೆಂಗಳೂರು: 50 ವರ್ಷಗಳ ಸುದೀರ್ಘ ಪಯಣದ ಮೈಲಿಗಲ್ಲು ಸಾಧಿಸಿರುವ ಸಂಗೀತಾ, ಮೊಬೈಲ್ ಗಳ ವಿಭಾಗದಲ್ಲಿ ಭಾರತದ ಮೊಟ್ಟ ಮೊದಲ ವೈಶಿಷ್ಟ್ಯಗಳ ಮಳಿಗೆಯಾಗಿ ಗುರುತಿಸಿಕೊಂಡಿದ್ದು ಸುವರ್ಣ ಸಂಭ್ರಮದ ಈ ಹೊತ್ತಿನಲ್ಲಿ ತನ್ನ ನೂತನ ಆಡಳಿತ ಕಚೇರಿ, ʼಸಂಗೀತಾ ವಿಷನ್ʼ, ಮತ್ತು “ಸಂಗೀತಾ ಗ್ಯಾಜೆಟ್ಸ್” ನ್ನು ಬೆಂಗಳೂರಿನ ಜಯನಗರದಲ್ಲಿ ಲೋಕಾರ್ಪಣೆಗೊಳಿಸಿತು.
ಈ ಕುರಿತು ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಜೆಪಿ ನಗರದಲ್ಲಿ ಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿರುವ ಸಂಗೀತ ಮೊಬೈಲ್ ಸಂಸ್ಥೆ ತನ್ನ ಆಡಳಿತ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭ ಮಾಡಿರುವುದು ಗ್ರಾಹಕರ ಹಿತದೃಷ್ಟಿ ಇಟ್ಟುಕೊಂಡು, ಮಳಿಗೆ “ಸಂಗೀತಾ ಗ್ಯಾಜೆಟ್ಸ್” ನ್ನು ಹಾಗು ʼಸಂಗೀತಾ ವಿಷನ್ʼ, ಇಟ್ಟುಕೊಂಡು ಸ್ಥಾಪನೆಯಾಗಿಸಿದೆ. ಹಾಗೆ ದರ್ಜೆಯಲ್ಲಿ ಕೆಲಸ ಮಾಡುವವರಿಗೆ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಸಹಕಾರಿಯಾಗಿದೆ. ರಾಜ್ಯದಲ್ಲಿ ಬಹು ದೊಡ್ಡ ಮಟ್ಟದ ಮೊಬೈಲ್ ಸಂಸ್ಥೆಯಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಹೊಸ ಹೊಸ ನಾವಿನ್ಯತೆಯುಳ್ಳ ಮೊಬೈಲ್ ಫೋನ್ಸ್, ಗ್ಯಾಜೆಟ್ ವಸ್ತುಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲಾಗಿದೆ. ಅಲ್ಲದೆ ಉಪಕರಣಗಳ ಡಿಲವರಿಗೆ ವಿಶೇಷತೆ ಮೆರೆಗೂ ನೀಡಲಾಗಿದೆ. ಕೇವಲ 15 ನಿಮಿಷದಲ್ಲಿ ಸಂಗೀತ ಸಂಸ್ಥೆಗಳ ವಸ್ತುಗಳನಾನು ಗ್ರಾಹಕರಿಗೆ ಕೊಂಡೊಯ್ಯಲು ಹಾಗು ತಲುಪಿಸಲು ಸಹಕಾರಿಯಾಗಿದೆ ಎಂದರು. ತಮ್ಮದೇ ಆದ ಸಿದ್ಧಾಂತ ಗಳ ಮೂಲಕ ಹಂತ ಹಂತವಾಗಿ ಸಂಸ್ಥೆ ಹರಡಿದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದರು.
ಸಂಗೀತದ ಹೊಸ ಅಧ್ಯಾಯ ಶುರು!: ಸುಭಾಶ್ಚಂದ್ರ
ಸಂಗೀತಾದ ನೂತನ ಆಡಳಿತ ಕಚೇರಿ ʼಸಂಗೀತಾ ವಿಷನ್ʼ ಅನಾವರಣಗೊಳಿಸಿ ಸಂಗೀತಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಭಾಶ್ಚಂದ್ರ ಅವರು ಮಾತನಾಡಿ, ಹಣಕಾಸು ವರ್ಷ 2025-26ರಲ್ಲಿ ಸಂಗೀತಾ ತನ್ನ ಸಮೂಹಕ್ಕೆ 1,000 ಮಳಿಗೆಗಳನ್ನು ಸೇರ್ಪಡೆಗೊಳಿಸುವುದಾಗಿ ಘೋಷಿಸಿದರು. ಜೊತೆಗೆ ಪ್ರಸ್ತುತ ಇರುವ ಮೊಬೈಲ್ ಉಪಕರಣಗಳ (ಗ್ಯಾಜೆಟ್ಗಳ) ವಿಸ್ತರಣೆ ಜೊತೆಗೆ ಭೌಗೋಳಿಕ ವಿಸ್ತರಣೆಗೆ ಅನುಗುಣವಾಗಿ ಸಂಗೀತಾ ಕೂಡ ತನ್ನ ವಿಸ್ತರಣೆ ಕೈಗೊಳ್ಳಲಿದೆ ಎಂದು ತಿಳಿಸಿದರು. ಇದೀಗ ಆಡಳಿತ ಕಚೇರಿಯೊಂದಿಗೆ ಲೋಕಾರ್ಪಣೆಗೊಂಡಿರುವ ಸಂಗೀತಾ ಮೊಬೈಲ್ ಉಪಕರಣಗಳ ಅತ್ಯಾಧುನಿಕ ಮತ್ತು ಅತ್ಯುತ್ತಮ ಮಳಿಗೆ ʼಸಂಗೀತಾ ಗ್ಯಾಜೆಟ್ಟ್ʼ ಗ್ರಾಹಕರಿಗೆ ಖರೀದಿಯ ಮತ್ತು ತಂತ್ರಜ್ಞಾನಗಳನ್ನೊಳಗೊಂಡ ಅತ್ಯುನ್ನತ ಅಪರಿಮಿತ ಅನುಭವವನ್ನು ಅನಾವರಣಗೊಳಿಸಲಿದೆ.
2025ನೇ ವರ್ಷವು ದಿನಸಿಯಿಂದ ಗ್ಯಾಜೆಟ್ಗಳವರೆಗೆ ಕ್ರಾಂತಿ
ತ್ವರಿತ ವಾಣಿಜ್ಯ ಬೆಳವಣಿಗೆಗಳು ಭಾರತದಲ್ಲಿ ಚಿಲ್ಲರೆ ವ್ಯಾಪಾರದ ಗತಿಯನ್ನೇ ಪರಿವರ್ತಿಸುವ ನಿಟ್ಟಿನಲ್ಲಿ ಸಾಗುತ್ತಿದೆ. 2025ನೇ ವರ್ಷವು ದಿನಸಿಯಿಂದ ಹಿಡಿದು ಗ್ಯಾಜೆಟ್ಗಳವರೆಗೆ ಕ್ರಾಂತಿಕಾರಕ ಬದಲಾವನೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ತ್ವರಿತ ವಾಣಿಜ್ಯವು ಬೆಳವಣಿಗೆಯ ನಿರ್ಣಾಯಕ ಚಾಲಕ ಶಕ್ತಿಯಾಗಿ ಹೊರ ಹೊಮ್ಮಿದೆ. ಇದು ಗ್ರಾಹಕರು ಬ್ರಾಂಡ್ ಉತ್ಪನ್ನಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆಂಬುದನ್ನು ಪ್ರತಿಫಲನಗೊಳಿಸಲಿದೆ. ಈ ಪರಿವರ್ತನೆಯ ಕಾಲಘಟ್ಟದಲ್ಲಿ ಸಂಗೀತಾವು ಮೊಬೈಲ್ ಉಪಕರಣಗಳ ಮಾರಾಟ ವಿಭಾಗದಲ್ಲಿ ತನ್ನದೇ ಆದ ವೈಶಿಷ್ಟ್ಯತೆಯೊಂದಿಗೆ ಮುಂಚೂಣಿಯಲ್ಲಿರಲಿದೆ.
ಅತಿ ಶೀಘ್ರವಾಗಿ ಗ್ಯಾಜೆಟ್ಗಳನ್ನು ಗ್ರಾಹಕರಿಗೆ ತಲುಪಿಸುವ ತನ್ನ ಭರವಸೆ ಮತ್ತು ಬದ್ಧತೆಯೊಂದಿಗೆ ಸಂಗೀತಾ,ಇಂದಿನ ವೇಗದ ಜೀವನ ಶೈಲಿಯ ಬೇಡಿಕೆಗಳನ್ನು ಪೂರೈಸುವುದರೊಂದಿಗೆ ಅನುಕೂಲತೆಗಳು ಮತ್ತು ತಂತ್ರಜ್ಞಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವಾಗಲಿದೆ ಎಂದು ಸುಭಾಶ್ಚಂದ್ರ ಅವರು ಹೇಳಿದರು. “ತ್ವರಿತವಾಗಿ ಮತ್ತು ಸುಲಭವಾಗಿ ಖರೀದಿಯು ಇನ್ನು ಮುಂದೆ ಐಷಾರಾಮಿ ಅಲ್ಲ ಬದಲಾಗಿ ಅಗತ್ಯತೆ ಆಗಿದೆ. ಬಲಿಷ್ಟವಾದ ಪರಂಪರೆ ಮತ್ತು ಚಿಲ್ಲರೆ ಮಾರಾಟದಲ್ಲಿನ ವಿಶಿಷ್ಟ ಪರಿಣತಿಯೊಂದಿಗೆ ಸಂಗೀತಾ ಈ ಕ್ರಾಂತಿಯನ್ನು ಅನನ್ಯವಾಗಿ ಮುನ್ನಡೆಸಲು ಸಜ್ಜಾಗಿದ್ದು ತಂತ್ರಜ್ಞಾನವು ಇನ್ನು ಮುಂದೆ ಎಲ್ಲರಿಗೂ ಸುಲಭವಾಗಿ ದಕ್ಕುವಂತಾಗಲು ಮತ್ತು ಅನುಕೂಲಕರವಾಗಿಸಲು ಬದ್ಧರಾಗಿದ್ದೇವೆ ಎಂದು ವಿವರಿಸಿದರು.
ಗ್ರಾಮೊಫೋನ್ ಸ್ಟೋರ್ ನಿಂದ ಇದೀಗ 800ಕ್ಕಿಂತ ಹೆಚ್ಚು ಮೊಬೈಲ್ ಚಿಲ್ಲರೆ ಮಾರಾಟದಲ್ಲಿ ಅಗ್ರಗಣ್ಯ
1974ರಲ್ಲಿ ಗ್ರಾಮೊಫೋನ್ ಸ್ಟೋರ್ ಆಗಿ ಆರಂಭಗೊಂಡ ಸಂಗೀತಾ ದೇಶದಾದ್ಯಂತ 800ಕ್ಕೂ ಹೆಚ್ಚು ಸ್ಟೋರ್ಗಳೊಂದಿಗೆ ಮೊಬೈಲ್ ಚಿಲ್ಲರೆ ಮಾರಾಟದ ಅಗ್ರಗಣ್ಯ ಸಮೂಹವಾಗಿ ಹೊರಹೊಮ್ಮಿದೆ. ಈ ಹಣಕಾಸು ವರ್ಷ 2025-26ರಲ್ಲಿ ಸಂಗೀತಾದಿಂದ 1,000 ಸ್ಟೋರ್ಸ್ಗಳ ಸೇರ್ಪಡೆಗೆ ಹೆಜ್ಜೆ,ಗ್ರಾಹಕ ಸ್ನೇಹಿ ಉಪಕ್ರಮಗಳು ಮತ್ತು ನಿರಂತರ ವಿಕಸನವು ಸಂಗೀತಾವನ್ನು ಅತ್ಯಂತ ವಿಶ್ವಾಸಾರ್ಹ ಮಳಿಗೆಯಾಗಿ ಬೆಳೆಯುವಂತೆ ಮಾಡಿದೆ. 50ರ ಸುವರ್ಣ ಸಂಭ್ರಮದ ಈ ಹೊಸ್ತಿಲಲ್ಲಿ ಸಂಗೀತಾ, ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತಾ ಭಾರತದ ಅಗ್ರಗಣ್ಯ ಮೊಬೈಲ್ ಮಾರಾಟ ಮಳಿಗೆಯಾಗಿ ಹೊರಹೊಮ್ಮಿದ್ದು ಇದೇ ಸೇವೆಯನ್ನು ಸದಾ ಗ್ರಾಹಕರಿಗೆ ಇನ್ನು ಮುಂದೆಯೂ ಒದಗಿಸುವ ಬದ್ಧತೆ ಮತ್ತು ಭರವಸೆಯನ್ನು ನೀಡುತ್ತದೆ.
ಸಂಗೀತಾ ಸುವರ್ಣ ಮಹೋತ್ಸವ ಸಂಭ್ರಮದ ಭವ್ಯ ಸಮಾರಂಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ಚಲನಚಿತ್ರ ನಟ,, ನಿರ್ದೇಶಕ ಡಾ.ರಮೇಶ್ ಅರವಿಂದ್ ಅವರ ಉಪಸ್ಥಿತಿಯಲ್ಲಿ ಆಡಳಿತ ಕಚೇರಿ ಮತ್ತು ನೂತನ ಮಳಿಗೆ ಶುಭಾರಂಭಗೊಂಡವು. ನಂದನ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ರವಿಚಂದರ್ ಅವರು ಜ್ಯೋತಿ ಬೆಳಗಿದರು. ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ,ದಕ್ಷಿಣ ಬೆಂಗಳೂರು ಬಿಜೆಪಿ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್, ಅಡ್ಯಾರ್ ಆನಂದ ಭವನದ ವ್ಯವಸ್ಥಾಪಕ ನಿರ್ದೇಶಕ ಕೆ.ಟಿ.ವೆಂಕಟೇಶ ರಾವ್ ಮೊದಲಾದವರು ಭಾಗವಹಿಸಿ ಸಂಗೀತಾದ ಪರಂಪರೆ ಮತ್ತು ವಿಶೇಷವಾಗಿ ಮೊಬೈಲ್ ವಿಭಾಗದಲ್ಲಿ ವೈಶಿಷ್ಟ್ಯತೆಯನ್ನು ಶ್ಲಾಘಿಸಿದರು.