ಬೆಂಗಳೂರು: ನಿರ್ಮಾಣ ಯಂತ್ರಗಳ ಮುಂಚೂಣಿ ತಯಾರಿಕಾ ಸಂಸ್ಥೆಯಾದ ಸ್ಯಾನಿ ಇಂಡಿಯಾ, ದಕ್ಷಿಣ ಏಶ್ಯಾದ ಅತಿದೊಡ್ಡ ನಿರ್ಮಾಣ ಯಂತ್ರಗಳ ಪ್ರದರ್ಶನವಾದ ಎಕ್ಸ್ಕಾನ್(EXCON)ದಲ್ಲಿ ನಿರ್ಮಾಣ ಸಾಧನಗಳ ಕ್ರಾಂತಿಕಾರಿ ಶ್ರೇಣಿಯನು ಪ್ರದರ್ಶಿಸಿತು.
ಅರ್ತ್ವರ್ಕ್, ಎಕ್ಸ್ಕವೇಶನ್, ಹೆವಿ ಲಿಫ್ಟಿಂಗ್, ಆಳವಾದ ಅಡಿಪಾಯ ಕೆಲಸಗಳು, ಗಣಿಗಾರಿಕೆ ಕಾರ್ಯಾಚರಣೆಗಳು, ರಸ್ತೆ ನಿರ್ಮಾಣ, ಮತ್ತು ಬಂದರು ಸಾಧನ ಮುಂತಾದ ವೈವಿಧ್ಯಮಯ ಪ್ರಯೋಗಗಳಿಗೆ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ವಿದ್ಯುತ್ ಯಂತ್ರಗಳು ಒಳಗೊಂದಂತೆ, ೧೫ ಹೊಸ ಯಂತ್ರಗಳ ಪರಿಚಯ ಸೇರಿದಂತೆ ಒಟ್ಟೂ ೪೪ ಯಂತ್ರಗಳನ್ನು ಪ್ರದರ್ಶಿಸಲಾಗಿದ್ದು, ಇವು ಉದ್ಯಮವನ್ನು ಪರಿವರ್ತಿಸುವಲ್ಲಿ ಮಹತ್ತರವಾದ ಪತ್ರ ವಹಿಸಲಿದೆ. ಈ ವಿದ್ಯುತ್ ಯಂತ್ರಗಳು, ಸುರಕ್ಷತೆ, ಉತ್ಪಾದಕತೆ ಅಥವಾ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಅತ್ಯುತ ಕ್ಲಿಷ್ಟಕರ ಕಾರ್ಯಾಚರಣೆ ಆರ್ಥಿಕತೆಯನ್ನು ಒದಗಿಸಿ, ನಿರ್ಮಾಣದಲ್ಲಿ ಇನ್ನಷ್ಟು ದೀರ್ಘಕಾಲ ಇರುವಂತಹ ಭವಿಷ್ಯತ್ತಿಗೆ ಮಾರ್ಗ ಕಲ್ಪಿಸಿವೆ.
ಉದ್ಯಮ ಮಾನದಂಡಗಳನ್ನು ಮರುವವಿವರಿಸುವ ಹಾಗೂ ಪರಿಸರ ದೀರ್ಘಸ್ಥಾಯಿತ್ವಕ್ಕೆ ಕೊಡುಗೆ ಸಲ್ಲಿಸುವ ವಿನೂತನ ಪರಿಹಾರಗಳನ್ನು ಕಂಡುಹಿಡಿಯುವ ತನ್ನ ಪ್ರಯತ್ನವನ್ನು ಸ್ಯಾನಿ ಇಂಡಿಯಾ ಮುಂದುವರಿಸುತ್ತಲಿದೆ. ದೀರ್ಘಸ್ಥಾಯಿತ್ವ, ಆಪರೇಟರ್ ಅನುಕೂಲತೆ, ಅಧಿಕ ಉತ್ಪಾದಕತೆ, ಮತ್ತು ಅರ್ಥಿಕ ಅನುಕೂಲತೆಯ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಗುರುತಿಸಿ ಸ್ಯಾನಿ ಇಂಡಿಯಾ, ತನ್ನ ಎಲ್ಲಾ ಸಾಧನಗಳೂ, ಜಿಪಿಎಸ್, ಜೈವಿಕ ಇಂಧನ-ಅನುಸರಣೆಯ ಇಂಜಿನ್ಗಳು, ಮತ್ತು ಪರ್ಯಾಯ ಇಂಧನ ಆಯ್ಕೆಗಳು ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅವು ಸಾಮರ್ಥ್ಯ ಹಾಗೂ ಪರಿಸರ ಕಾರ್ಯಕ್ಷಮತೆಗಾಗಿ ಇರುವ ಉದ್ಯಮ ಮಾನದಂಡಗಳನ್ನು ಮೀರಿರುವುದನ್ನು ಖಾತರಿಪಡಿಸುತ್ತದೆ.
“Naye Bharat ka Nirmata” ” ಎಂದು ಗುರುತಿಸಿಕೊಳ್ಳುವಲ್ಲಿ ಸ್ಯಾನಿ ಇಂಡಿಯಾ ಹೆಮ್ಮೆ ಪಡುತ್ತದೆ. ಪ್ರಸ್ತುತ, ೩೦,೦೦೦ಕ್ಕಿಂತ ಹೆಚ್ಚಿನ ಸ್ಯಾನಿ ಯಂತ್ರಗಳು, ದೇಶಾದ್ಯಂತ ಇರುವ ಪ್ರಮುಖ ಹಾಗೂ ಚಿಕ್ಕ ಯೋಜನೆಗಳಿಗೆ ಸಕ್ರಿಯವಾಗಿ ಕೊಡುಗೆ ಸಲ್ಲಿಸುವ ಮೂಲಕ ಭಾರತದ ಮೂಲಸೌಕರ್ಯ ಅಭಿವೃದ್ಧಿಯನ್ನು ರೂಪಿಸುವ ಪ್ರಮುಖ ಪಾತ್ರದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿವೆ.
ಸ್ಯಾನಿ ಮತ್ತು ದಕ್ಷಿಣ ಏಶ್ಯಾದ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಗರ್ಗ್ ಮಾತನಾಡಿ, “ಎಕ್ಸ್ಕಾನ್ ೨೦೨೩ದಲ್ಲಿ ನಮ್ಮ ಇತ್ತೀಚಿನ ಉತ್ಪನ್ನಗಳ ಶ್ರೇಣಿಯನ್ನು ಅನಾವರಣಗೊಳಿಸುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಇದು, ನಿರ್ಮಾಣ ಉದ್ದಿಮೆಯಲ್ಲಿ ಆವಿಷ್ಕಾರವನ್ನು ಮುನ್ನಡೆಸಬೇಕೆನ್ನುವ ಸ್ಯಾನಿ ಇಂಡಿಯಾದ ಬದ್ಧತೆಗೆ ಪುರಾವೆಯಾಗಿದೆ. ದೀರ್ಘಕಾಲ ಇರುವಂತಹ ಭವಿಷ್ಯತ್ತಿನೆಡೆಗೆ ನಾವು ಮುನ್ನಡಿ ಇಡುತ್ತಿರುವಂತಹ ಸಂದರ್ಭದಲ್ಲಿ, ವಿದ್ಯುತ್ ಯಂತ್ರಗಳನ್ನೂ ಒಳಗೊಂಡ ಈ ಅತ್ಯಾಧುನಿಕ ಉತ್ಪನ್ನಗಳು ನಮ್ಮ ಪಯಣದಲ್ಲಿ ಮಹತ್ತರವಾದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಸ್ಯಾನಿ ಇಂಡಿಯಾದಲ್ಲಿ ನಾವು, ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಅವರ ನಿರೀಕ್ಷೆಗೂ ಮೀರಿದ ಅತ್ಯಾಧುನಿಕ, ಪರಿಸರ-ಸ್ನೇಹಿ ಪರಿಹಾರಗಳನ್ನು ಒದಗಿಸುವಲ್ಲಿ ನಂಬಿಕೆ ಇರಿಸಿದ್ದೇವೆ.
ವಿವಿಧ ಕ್ಷೇತ್ರಗಳಲ್ಲಿ ನಾವು ಬಿಡುಗಡೆ ಮಾಡಿರುವ ೧೫ ಹೊಸ ಯಂತ್ರಗಳು, ಮೂಲಸೌಕರ್ಯ ಕ್ಷೇತ್ರದಲ್ಲಿ ಒದಗಿಸಿ ಧನಾತ್ಮಕ ಬದಲಾವಣೆಯನ್ನು ಮುನ್ನಡೆಸುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಆವಿಷ್ಕಾರಗಳು, ಉದ್ಯಮ ಮಾನದಂಡಗಳನ್ನು ಮರುವಿವರಿಸುವುದು ಮಾತ್ರವಲ್ಲದೆ, ಕೇವಲ ಯಂತ್ರಗಳಷ್ಟೇ ಅಲ್ಲದೆ, ನಿರ್ಮಾಣದ ಭವಿಷ್ಯತ್ತಿಗೆ ದೀರ್ಘಕಾಲ ಇರುವಂತಹ ಮತ್ತು ಸಮರ್ಥವಾದ ಮಾರ್ಗಸೂಚಿಸುವ ಯಂತ್ರಗಳನ್ನು ಒದಗಿಸುತ್ತೇವೆ ಎಂಬ ವಿಶ್ವಾಸ ನಮಗಿದೆ.
ಪ್ರತಿಯೊಂದು ಯಂತ್ರದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಸ್ಯಾನಿ ಇಂಡಿಯಾ ಕೇವಲ ಆವಿಷ್ಕಾರವನ್ನು ಮಾತ್ರ ಪ್ರದರ್ಶಿಸುತ್ತಿಲ್ಲ, ಅದು ನಿರ್ಮಾಣ ಭವಿಷ್ಯತ್ತಿನ ಸಂಭಾವ್ಯ ದರ್ಶನವನ್ನೂ ತೋರಿಸುತ್ತಿದೆ. ಈ ದರ್ಶನವು, ಭಾರತೀಯ ಮೂಲಸೌಕರ್ಯ ಅಭಿವೃದ್ಧಿತ ಚಿತ್ರಣವನ್ನು ಮರುರೂಪಿಸಿ ಹೆಚ್ಚು ದೀರ್ಘಕಾಲ ಇರುವಂತಹ ಮತ್ತು ಸಮರ್ಥವಾದ ಭವಿಷ್ಯತ್ತಿಗೆ ಕೊಡುಗೆ ಸಲ್ಲಿಸುತ್ತದೆ.
ದೀರ್ಘಕಾಲ ಇರುವಂತಹ ನಿರ್ಮಾಣ ಸಾಧನಗಳು ತನ್ನ ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಮಾಡುವುದಕ್ಕೆ ಸ್ಯಾನಿ ಇಂಡಿಯಾ ಬದ್ಧವಾಗಿದೆ. ಸ್ಥಳೀಯ ಉತ್ಪಾದನೆಯ ಮೂಲಕ ಅದರೊಂದಿಗೆ ಸೇರಿಕೊಂಡ ವೆಚ್ಚಗಳನ್ನು ಕಡಿಮೆ ಮಾಡಿ, ಸರಬರಾಜು ಸರಪಳಿಯನ್ನು ಗರಿಷ್ಟಗೊಳಿಸಿ ಅಂತಿಮವಾಗಿ ಕೈಗೆಟುಕುವ ದರಗಳಲ್ಲಿ ಯಂತ್ರಗಳು ಸಿಗುವಂತೆ ಮಾಡುವುದು ಅದರ ಗುರಿಯಾಗಿದೆ. ಪ್ರಸ್ತುತ ಸಂಸ್ಥೆಯು, ೪೦% ಸ್ಥಳೀಕರಣ ಸಾಧಿಸಿದ್ದು, ಮುಂದಿನ ೩-೫ ವರ್ಷಗಳಲ್ಲಿ ಇದನ್ನು ೭೫%ಗೆ ಹೆಚ್ಚಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ..
ಅರ್ತ್ಮೂವಿಂಗ್, ಲಿಫ್ಟಿಂಗ್, ಅಡಿಪಾಯ ಕೆಲಸ, ಬಂದರು, ಕಾಂಕ್ರೀಟ್, ಮತ್ತು ಗಣಿಗಾರಿಕೆ ಉತ್ಪನ್ನ ವರ್ಗಗಳಲ್ಲಿ ಮುಂಚೂಣಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಮೂಲಸೌಕರ್ಯ, ರೈಲ್ವೇಸ್, ರಸ್ತೆಗಳು, ನೀರಾವರಿ, ವಿದ್ಯುತ್, ಮತ್ತು ಬಂದರುಗಳು ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ದೀರ್ಘಸ್ಥಾಯಿತ್ವವನ್ನು ನಿರೀಕ್ಷಿಸಿ, ಬೆಳೆಯುತ್ತಿರುವ ಈ ಅಗತ್ಯಗಳನ್ನು ಪೂರೈಸುವ ಸಲುವಾಗಿ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತಾರಗೊಳಿಸುವುದಕ್ಕೆ ಸ್ಯಾನಿ ಬದ್ಧವಾಗಿದೆ.