ಬೆಂಗಳೂರು: ಶಾಲಾ ದಿನಗಳಲ್ಲಿ ಸಿಕ್ಕಿರುವ ವೇದಿಕೆಗಳು, ಸಂದಿರುವ ಪ್ರಶಸ್ತಿಗಳು ಒಂದಲ್ಲ ಒಂದು ದಿನ ಸಮಾಜದಲ್ಲಿ ದೊಡ್ಡಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಶರತ್ ಲೋಹಿತಾಶ್ವ ತಿಳಿಸಿದರು.
ವಿಜಯನಗರದಲ್ಲಿರುವ ಸಿದ್ದಗಂಗಾ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಉತ್ಸವ, ವಿಕಾಸ್ 2024 ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಹಾಕಿಕೊಟ್ಟ ದಾರಿಯನ್ನು ನಮ್ಮ ಸಿದ್ದಗಂಗಾ ಸ್ವಾಮಿಗಳು ಚಾಚುತಪ್ಪಡೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ವಿಜಯನಗರದಲ್ಲಿ ನ ಸಿದ್ದಗಂಗಾ ಶಾಲೆಯಲ್ಲಿ ಹಮ್ಮಿಕೊಳ್ಳುತ್ತಿರುವ ಕೆಲಸ ಕಾರ್ಯಗಳ ತರ ನನಗೂ ಸಹ ಶಾಲೆಯ ದಿನಗಳಲ್ಲಿ ಇಂತಹ ಅವಕಾಶ ಸಿಕ್ಕಿದೆ, ಹೀಗಾಗಿ ಮೊದಲು ರಂಗಭೂಮಿಯಿಂದ ಮಾಡಿದ ಕೆಲಸಕ್ಕೆ ಇದೀಗ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯ ಎಂದರು.
ನಾವೇನೆ ಕಲಿತರು ಸಹಾ ಆಳಕ್ಕೆ ಇಳಿದು ಕಲಿಯಬೇಕು, ಓದುವುದು ಹಣ ಸಂಪಾದನೆ ಮಾಡಲಿಕ್ಕಲ್ಲ, ಜ್ಞಾನ ಸಂಪಾದನೆ ಮಾಡಲಿಕ್ಕೆ. ಯಾವುದೇ ಒಂದು ವಿಚಾರ, ಕ್ಷೇತ್ರದಲ್ಲಿ ಆಳವಾಗಿ ತಿಳಿಯಬೇಕು, ನಾವು ಯಾವಾಗಲೂ ಬೆನ್ನು ಬಿದ್ದು ಹೋಗಬೇಕು. ಇದೇ ವೇಳೆ ಬಸವಣ್ಣನವರ ವಚನವನ್ನು ಹಾಡುವ ಮೂಲಕ ನೆರೆದಿದ್ದವರಿಗೇ ಸಂದೇಶ ತಿಳಿಸಿದರು.
ಸಿದ್ದಗಂಗಾ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಎಲ್ ರೇವಣ್ಣಸಿದ್ದಯ್ಯ ಮಾತನಾಡಿ, ಮಕ್ಕಳ ಶ್ರೇಯೋಭಿವೃದ್ಧಿಗೆ ಪೋಷಕರು ಮಕ್ಕಳ ಸಹಾಯಕ್ಕೆ ಸದಾ ನಿಲ್ಲಬೇಕು, ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ಪೋಷಕರು ಕರೆದುಕೊಂಡು ಬಂದಿರುವುದು ಬಹಳ ವಿಶೇಷವಾಗಿದೆ, ಮಕ್ಕಳ ಸರ್ವೋಮುಖ ಅಭಿವೃದ್ಧಿಗೆ ಸಂಸ್ಥೆಯ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಶ್ರಮವಹಿಸಿರುತ್ತಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪುತ್ತುರಾಯ ಅವರು ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿ, ನೀರು,ಆಹಾರ, ಸೇವನೆ ಮಾಡುತ್ತಿರುವಾಗ ಕನ್ನಡಲ್ಲೇ ಮಾತು ಆರಂಭಿಸಿದರು, ಮಕ್ಕಳು ಪೋಷಕರಿಗೆ ಮಕ್ಕಳಾಗಿ ಗುರು ಹಿರಿಯರಿಗೆ ಉತ್ತಮ ವಿದ್ಯಾರ್ಥಿಗಳಾಗಿ ಇರಬೇಕು, ಎಲ್ಲೇ ಇದ್ದರೂ ಸಹ ಕನ್ನಡ ತನವನ್ನು ಮರೆಯಬೇಡಿ, ಮಕ್ಕಳು ಜೀವನದಲ್ಲಿ ಕಲಿಯಬೇಕಾದ ಸೂತ್ರಗಳನ್ನು ಹೇಳಿದರು, ಮೊದಲು ಪ್ರಾಮಾಣಿಕರಾಗಿರಬೇಕು, ಕೆಟ್ಟಿದನ್ನು ಕೇಳಬಾರದು, ಕೆಟ್ಟಿದ್ದನ್ನು ನೋಡಬಾರದು,ಮಾಡಬಾರದು ಎಂದರು.
ಮಕ್ಕಳು ಓದಿನ ಜೊತೆಗೆ ಕ್ರಿಯಾಶೀಲ ಚಟುವಟಿಕೆಯಲ್ಲಿ ಪಾಲಗೊಳ್ಳಬೇಕು, ಪೋಷಕರು ಮಕ್ಕಳಿಗೆ ಒತ್ತಡ ಹಾಕಬಾರದು,ಹಾಗೆ ಬೇಕಾಬಿಟ್ಟಿ ಉದಾಸೀನ ಮಾಡಬಾರದು ಎಂದು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಕಿವಿ ಮಾತು ಹೇಳುವ ಮೂಲಕ ಸ್ವಾರಸ್ಯಕರ ಜೊತೆಗೆ ಅರ್ಥಗರ್ಭಿತ ಮಾತುಗಳಿಂದ ನೆರೆದಿದ್ದವರನ್ನು ಪುಳಕಿತರನ್ನಾಗಿಸಿದರು, ಶಾಲೆಯಲ್ಲಿ ಅತಿಹೆಚ್ಚು ಅಂಕಗಳಿಸಿದ, ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಥಮ ಸ್ಥಾನ ಬಂದಿರುವವರಿಗೆ, ಸಾದನೆ ಮಾಡಿದ ನೂರಾರು ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು.
ಇನ್ನು ಇದೇವೇಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಅವರು ಶಾಲೆಯ ವಾರ್ಷಿಕ ಪ್ರಗತಿ, ಪಠ್ಯ, ಪಠ್ಯೇತರ ಚಟುವಟಿಕೆ,ಅಭಿವೃದ್ದಿ ಬಗ್ಗೆ ಮಾಹಿತಿ ತಿಳಿಸಿದರು. ಶಾಲೆಯ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಸಾವಿರಾರು ಸಂಖ್ಯೆಯಲ್ಲಿ ಮಕ್ಕಳ ಪೋಷಕರು ನೆರೆದಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮಕ್ಕೆ ಶಂಕರ್ ಲಿಂಗಯ್ಯ, ಸಂಸ್ಥೆ ಸಲಹೆಗಾರ, ದೀನ್ ದಯಾಳ್, ಪ್ರಾಂಶುಪಾಲರಾದಪ್ರ ಭಾಕರ್,ಮೃತ್ಯುಂಜಯ, ಜಂಟಿ ಕಾರ್ಯದರ್ಶಿ,aಹಂಸಾ, ಚಂದ್ರಲೇಔಟ್ ಶಾಲೆಯ ಮುಖ್ಯೋಪಾಧ್ಯಾಯಿನಿ, ತುಳುಸಿ ಕುಮಾರ್, ಶೈಕ್ಷಣಿಕ ಟ್ರಸ್ಟ್ ನ ಸಲಹೆಗಾರ,ಲಕ್ಷ್ಮಿ, ವ್ಯವಸ್ಥಾಪಕರಾದ, ಕಮಲಾ,ರಾಜಶೇಖರ, ಗಂಗಾದರ್,ಮಧುಮತಿ,ಚಂದ್ರಶೇಖರಯ್ಯ,ಲೋಕಪ್ರಕಾಶ್ ಶಾಲೆಯ ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು.