ಬೆಂಗಳೂರು: ಗೋವುಗಳನ್ನು ರಾಷ್ಟ್ರೀಯ ತಾಯಿ ಎಂದು ಘೋಷಿಸಲು ದೇಶಾದ್ಯಂತ ಗೋ ಪ್ರತಿಷ್ಠಾ ಧ್ವಜವನ್ನು ಸ್ಥಾಪನೆಗೊಳಿಸಲಾಗುವುದು ಎಂದು ಅವಿಮುಕ್ತಶ್ವರ ಮಠದ ಜ್ಯೋತಿಷಿ ಪೀಠಾಧೀಶ್ವರ ಶಂಕರಾಚಾಯ್ ಸ್ವಾಮಿಜಿ ತಿಳಿಸಿದರು.
ಜಯನಗರದ ಅಶೋಕ ಸ್ತಂಬದ ಬಳಿಯ ಮಹಾರಾಜ ಅಗ್ರಸೇನ ಭವನದಲ್ಲಿ ಗೋ ಪ್ರತಿಷ್ಠಾ ಧ್ವಜವನ್ನು ಸ್ಥಾಪಿಸಿ ಬಳಿಕ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಗೋವುಗಳಿಗೆ ತನ್ನದೇ ಆದ ಮಹತ್ವವಿದ್ದು, ಗೋವುಗಳನ್ನು ರಾಷ್ಟ್ರದ ಮಾತೆ ಎಂದು ಘೋಷಿಸಬೇಕು. ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ ಗೋ ಪ್ರತಿಷ್ಠಾ ಧ್ವಜವನ್ನು ಸ್ಥಾಪನೆ ಮಾಡಲಾಗಿದೆ. ದೇಶದ್ಯಾಂತ ಈ ಧ್ವಜವನ್ನು ಸ್ಥಾಪನೆ ಮಾಡಬೇಕೆಂಬ ಗುರಿ ಹೊಂದಿದ್ದೇವೆ ಎಂದರು.
ಕಳೆದ ವರ್ಷ ಡಿ.22ರಲ್ಲಿ ಅಯೋಧ್ಯೆಯಲ್ಲಿ ಗೋ ಪ್ರತಿಷ್ಠಾ ಧ್ವಜ ಯಾತ್ರೆಯನ್ನು ಆರಂಭಿಸಲಾಗಿದ್ದು, ಈ ಪರಿಣಾಮ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಗೋವುಗಳಿಗೆ ರಾಷ್ಟ್ರೀಯ ಮಾತಾ ಘೋಷಣೆ ಮಾಡಿ ಆ ಪತ್ರಿಯನ್ನು ಅರ್ಪಿಸಿ ಐತಿಹಾಸಿಕ ದಿನವನ್ನು ನಿರ್ಮಾಣ ಮಾಡಿದರು ಎಂದು ಶ್ಲಾಘಿಸಿದರು.
ಭಾರತದಿಂದ ಗೋಹತ್ಯೆಯ ಪಾಪವನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ಈ ಯಾತ್ರೆಯನ್ನು ಕೈಗೊಳ್ಳಲಾಗಿದ್ದು ಸಂಪೂರ್ಣ ಗೋಹತ್ಯೆ ನಿಷೇಧ ಆಗುವವರೆಗೂ ಈ ಯಾತ್ರೆ ನಿಲ್ಲುವುದಿಲ್ಲ ಎಂಬ ಸಂಕಲ್ಪ ಮಾಡಬೇಕಾಗಿದೆ ಎಂದರು.
ಹಸುಗಳು ಕೇವಲ ಹಾಲು ಮತ್ತು ಮಾಂಸವನ್ನು ನೀಡುವ ಪ್ರಾಣಿಯಲ್ಲ ಬದಲಿಗೆ ಮನೆಗಳಲ್ಲಿ ಯಾವುದೇ ಶುಭ ಕಾರ್ಯವಿರಲಿ ಅಥವಾ ಏನೇ ಹೊಸ ಕೆಲಸ ಮಾಡುವ ವೇಳೆ ಮೊದಲು ಗೋವುಗಳಿಗೆ ಪೂಜೆ ಮಾಡಿ ನೈವೇದ್ಯ ನೀಡಲಾಗುತ್ತದೆ. ಅಂತಹ ಗೋವುಗಳ ಮಾಂಸ ಸೇವನೆ ಮಾಡುತ್ತಿರುವ ಜನಗಳ ವಿರುದ್ಧ ಆಕ್ರೋಶ ಪ್ರಾಣಿಯಲ್ಲ, ಗೋವುಗಳಲ್ಲಿ 3 ಕೋಟಿ ದೇವತೆಗಳ ವಾಸವಿದ್ದು ವ್ಯಕ್ತಪಡಿಸಿದರು.ಹಿಂದೂ ಪರಂಪರೆಯಲ್ಲಿ ಗೋವುಗಳಿಗೆ ಅತ್ಯಂತ ಅಗ್ರಸ್ಥಾನ ನೀಡಲಾಗಿದೆ ಎಂದು ತಿಳಿಸಿದರು.
ಗೋವು ಕೊಲ್ಲುವ ಸಂಸದರಿಗೆ ಇನ್ನುಮುಂದೆ ಸ್ಥಾನ ಇಲ್ಲ?
ಗೋಮಾತೆಯನ್ನು ತಾಯಿ ಎಂದು ಪೂಜಿಸುವ ಕಾಲದಲ್ಲಿ ಕಟುಕರು ಪೂಜನೀಯ ಭಾವದಲ್ಲಿ ನೋಡುವ ಪ್ರಾಣಿಯನ್ನು ಕೊಲ್ಲುವುದು ಸರ್ವೇ ಸಾಮಾನ್ಯವಾಗಿದೆ ಹೀಗಾಗಿ ಗೋವು ಕೊಳ್ಳದಂತೆ ಈಗಾಗಲೇ ಮಸೂದೆಯೊಂದು ಸಂಸತ್ ನಲ್ಲಿ ಜಾರಿಯಾಗಿದೆ. ಅದರಲ್ಲಿ ಸ್ಪಷ್ಟವಾಗಿ ಹೇಳಿರುವುದು ಏನೆಂದರೆ. ಹಸುವನ್ನು ಯಾರು ಹಿಂಸೆ ಮಾಡಿ ಕೊಂಡಿರುತ್ತರೂ ಅವರಿಗೆ ಸಂಸತ್ ಸದಸ್ಯರಾಗಿ ನೇಮಕ ಮಾಡಿಕೊಳ್ಳಂಗಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎನ್ನುವುದು ನಮ್ಮ ಮನವಿಯಾಗಿದೆ.
ಜಾತಿ ಗಣತಿ ಮಾಡುವ ಹಾಗೆ ಗೋವುಗಳ ಗಣತಿಯನ್ನು ಕೇಂದ್ರ ಸರ್ಕಾರದಿಂದಲೇ ಮಾಡಬೇಕು, ಅದಕ್ಕೆ ಸೂಕಥ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.