ಬೆಂಗಳೂರು: ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ನಡುವಿನ ದಟ್ಟವಾದ ಗ್ಯಾಪ್ನ್ನು ಅನುಕೂಲಕರವಾಗಿ ಪುನರ್ ನಿರ್ಮಾಣ ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗುವ ಜೊತೆಗೆ ಆರ್ಥಿಕವಾಗಿ ಪ್ರಭಲರಾಗಬಹುದು ಎಂದು ಉನ್ನತ ಶಿಕ್ಷಣ ಹಾಗು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಟೀಲ ತಿಳಿಸಿದರು.
ಬೆಂಗಳೂರಿನಲ್ಲಿ ಆಯೋಜಿಸಲಾದ ಉದ್ಯಮ-ಶೈಕ್ಷಣಿಕ ಸಂಮೇಳನವು ಪ್ರಮುಖ ಉದ್ದೇಶವನ್ನು ನನಸುಪಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಮುಂದಿನ ದಿನಗಳಲ್ಲಿ ಕೈಗಾರಿಕೆಗೆ ಏನು ಬೇಕು ಎಂಬುದರ ಬಗ್ಗೆ ತಿಳಿಸುವುದು, ಅವುಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.ಉದ್ಯೋಗ ನೀಡುವ ನಿಟ್ಟಿನಲ್ಲಿ . ನೀರಿದ್ಯೋಗಗಳಿಂದ ಪೋಸ್ಕರಿಗೆ ಮಕ್ಕಳ ಬಗ್ಗೆ ತಿಳಿವಳಿಕೆ ನೀಡಬೇಕು. ರಾಜ್ಯದಲ್ಲಿ 2 ಲಕ್ಷ ಪದವೀಧರರು ನಿರುದ್ಯೋಗಿಗಳಾಗಲಿದ್ದಾರೆ, ಅವರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. 100ಕ್ಕೆ ನೂರರಷ್ಟು ಉದ್ಯೋಗ ಕೊಡಿಸುವುದರಲ್ಲಿ ಕೆಲಸ ಮಾಡುತ್ತೇವೆ. ಅವುಗಳಿಗೆ. ಯುವನಿಧಿ , ಕೆಜಿ ವಿಧ್ಯಾ ಯೋಜನೆಗಳನ್ನು ಬಳಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ 100 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಇವೆ. ಕೌಶಲ್ಯ ಬಗ್ಗೆ ನಾವು ತರಬೇತಿ ಪಡೆಯಬೇಕು, ಅವುಗಳನ್ನು ನಿತ್ಯದ ಪತ್ಯಕ್ರಮದಲ್ಲಿ ಬಳಸಬೇಕು.
ವಿದ್ಯಾರ್ಥಿಗಳು ಕೇವಲ ತರಬೇತಿ ಪಡೆಯುವುದಲ್ಲದೆ ಓದುವ ಮೂಲಕವಲ್ಲದೇ ಯಂತ್ರಗಳ ಮೂಲಕ ಎಂದರು.ಕೈಗಾರಿಕೆಗಳಿಗೆ ಬೇಕಾಗುವ ಕೌಶಲಗಳ ಬಗ್ಗೆ ನಾವು ಚಿಂತನೆ ಮಾಡಬೇಕು. ಕೌಶಲ್ಯದ ಕೃತಕ. ಬುದ್ದಿ ಮತ್ತೆ ಅಳವಡಿಸಿಕೊಳ್ಳಲಾಗಿದೆ. ಬಳ್ಳಾರಿಯಲ್ಲಿ ಸ್ಕಿಲ್ ಪತ್ಕ ಮಾಡಲಾಗಿದೆ. ವರುಣದಲ್ಲಿ, ಕಲಬುರ್ಗಿ, ಕೊಪ್ಪಳದಲ್ಲಿ ಮಲ್ಟಿ ಸ್ಕಿಲ್ ಯೋಜನೆ ಮಾಡಲಾಗಿದೆ. ನಂತರ ಮುಂದನ್ ದಿನಗಳಲ್ಲಿ ಚಿತ್ರದುರ್ಗ, ದಾವಣಗೆರೆಯಲ್ಲಿ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಮಾಡಲಾಗುತ್ತದೆ ಎಂದರು.
ಪ್ರಿಯಾಂಕ್ ಖರ್ಗೆ, ಮತ್ತು ಡಾ. ಎಂ.ಸಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಶಿಕ್ಷಣವನ್ನು ಮತ್ತಷ್ಟು ಸಮನ್ವಯಗೊಳಿಸುವ ಅಗತ್ಯವನ್ನು ಪುನರುಚ್ಚರಿಸಿತು. ಈ ಸಂಮೇಳದ ಅತ್ಯಂತ ಪ್ರಗತಿಶೀಲ ಭಾಗವಾಗಿ, ಇಂಟೆಲ್,ಐಬಿಎಂ ಮತ್ತು ಕರ್ನಾಟಕದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಆರ್ಎನ್ಎಸ್ಐಟಿ, ಬಿಎನ್ಎಂಐಟಿ ಮತ್ತು ವಿಟಿಯು ನಡುವೆ ಹಲವು ಒಪ್ಪಂದಗಳ ಸಹಿ ಆಗಿದ್ದು, ಮುಂದಿನ ಪೀಳಿಗೆಗೆ ನವೀನ ತರಬೇತಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಹಕ್ಕುಗಳನ್ನು ಒದಗಿಸುವ ಹೊಸ ದಾರಿ ತೆರೆದಿವೆ.
ಈ ಮೊತ್ತ ಮೊದಲಾದ ಶಕ್ತಿಶಾಲಿ ಸಹಕಾರವು ವಿದ್ಯಾರ್ಥಿಗಳನ್ನು ಕೌಶಲ್ಯಗಳಲ್ಲಿ ಪರಿಣತಿ ಪಡೆಯಲು, ತಂತ್ರಜ್ಞಾನಗಳ ಪೈಕಿ ಅನುಭವ ಮತ್ತು ಕೌಶಲ್ಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಿದೆ. ಇಂಟೆಲ್ ಮತ್ತು ಐಬಿಎಂ ಉದ್ಯಮಕ್ಕೆ ಅಗತ್ಯವಿರುವ ನವೀನ ತಂತ್ರಜ್ಞಾನಗಳ ಬಳಕೆಯ ಮೂಲಕ, ಕನ್ನಡನಾಡಿನಲ್ಲಿ ಕೌಶಲ್ಯಾಭಿವೃದ್ಧಿಗೆ ನೇರವಾಗಿ ಹೊತ್ತಿರುವ ಹೊಣೆಗಾರಿಕೆಯನ್ನು ವಹಿಸಿಕೊಂಡಿವೆ. ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಪರಿಣಮಿಸಲು, ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಒಂದು ಸಮನ್ವಯಿತ, ಮುಂದುವರೆದ ಮತ್ತು ಉದಾರವಾದ ಪರಿಸರ ನಿರ್ಮಾಣವಾಗಲಿದೆ ಎಂದರು. . ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತ ನಾಯಿಕ್ ಮಾತನಾಡಿ, ಮಕ್ಕಳು ಕಲಿಕೆ ಜೊತೆ ಎಲ್ಲಾ ಹಂತಗಳಲ್ಲಿ ಕೌಶಲ್ಯವನ್ನು ಕಲಿಯಬೇಕು, ಕಾಲೇಜು ಹಂತದಲ್ಲಿ ಅವುಗಳನ್ನ ಬಳಸಿಕೊಳ್ಳಬೇಕು. ಶಾಲೆಯ ಹಂತದಲ್ಲಿಯೇ ಕೌಶಲ್ಯಗಳ ಮೂಲಕ ಸ್ಪರ್ಧೆಯನ್ನು ಮಾಡಬೇಕು, ಜಿಲ್ಲಾ, ತಾಲುಕು, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಬೇಕು, ನಿಗಮದಿಂದ ಇವೆಲ್ಲವನ್ನೂ ಮಾಡಲಾಗುತ್ತದೆ. ಕೌಶಲ್ಯದ ಬಳಕೆ ಮಾಡುವುದರಲ್ಲಿ ಇಡೀ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕಾಲೇಜು ಮಟ್ಟದಲ್ಲಿ ಅಂತಹ ಪ್ರತಿಭೆಗಳು ಇರುವುದು ಗೊತ್ತಾಗಿದೆ, ಅವರನ್ನು ಗುಣಮಟ್ಟದ ಕೌಶಲ್ಯವನ್ನು, ತರಬೇತಿಯನ್ನು ಕೊಟ್ಟರೆ ಇನ್ನು ಮುಂದೆ ದೊಡ್ಡಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ. ಕೈಗಾರಿಕೆಗಳ ಬೇಡಿಕೆಗಳ ಅನುಗುಣವಾಗಿ ನೀವು ತರಬೇತಿ ಕೊಟ್ಟು ನೀವೇ ಉದ್ಯೋಗ ನೋಡಬಹುದು ಎಂದಿದ್ದರು, ಅದಕ್ಕೆ ಹಲವು ಕಂಪನಿಗಳು ಮುಂದೆ ಬಂದಿವೆ ಎಂದರು.
ಸಚಿವರು ಹೇಳಿದಹಾಗೆ ಕೃತಕ ಬುದ್ಧಿ ಮತ್ತೆ ಬಗ್ಗೆ ಸಾಕಷ್ಟು ಮಾಹಿತಿ ತಿಳಿಸಿದರು. ತರಬೇತಿ ತೆಗೆದುಕೊಂಡಿದ್ದೆ ಆದರೆ ಉದ್ಯೋಗ ಸಿಗುವುದು ಪಕ್ಕ. ಕೈಗಾರಿಕೆಗೆ ಬೇಕಾದದನ್ನು ನೀವ್ ಮಾಡಬೇಕು, 2027ರ ಒಳಗಾಗಿ ಕೌಶಲ್ಯ ಹೆಚ್ಚು ಅಭಿವೃದ್ದಿ ಮಾಡುವ ಸಲುವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಂದರ್ ರಾಜ್, ದಿನೇಶ್, ಸೇರಿದಂತೆ ಕೌಶಲ್ಯ ಅಭಿವೃದ್ಧಿ ನಿಗಮದ ಪದಾಧಿಕಾರಿಗಳು, ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.