ಬೆಂಗಳೂರು: ಜನಪದ ಕಲೆಗಳಿಗೆ ಶಕ್ತಿ ತುಂಬುವ ಹಾಗೂ ಪ್ರೋತ್ಸಾಹ ನೀಡುವ ಸಲುವಾಗಿ ಅಧಿಕಾರಿಗಳ ಮಟ್ಟದಲ್ಲಿ ಜನಪದ ಕಲಾ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು.
ರಾಜ್ಯದ್ಯಂತ ಜನಪದ ಬಗ್ಗೆ ಸಾಕಷ್ಟು ನಿರಾಶಕ್ತಿಗಳು ಇವೆ ಅದು ಸರ್ಕಾರದ ಸರ್ಕಾರದ ಮಟ್ಟದಲ್ಲಿಯೂ ಸಹ ಹೊರತಾಗಿಲ್ಲ. ರಾಜ್ಯದಲ್ಲಿ ಜನಪದ ಕಲೆಗಳಿಗೆ ಸಾಕಷ್ಟು ಮಹತ್ವ ಇದೆ ಅದೇ ರೀತಿ ರಾಜ್ಯದಲ್ಲಿ ಸುಮಾರು 160ಕ್ಕಿಂತ ಹೆಚ್ಚು ಜನಪದ ಕಲೆಗಳನ್ನು ಕಾಣಬಹುದಾಗಿದೆ ಆದರೆ ಜನಪದ ಕಲಾ ಮೇಳದಲ್ಲಿ ಕೇವಲ 18 ಕಲೆಗಳನ್ನು ಇಲ್ಲಿ ಕಾದರ್ಪಡಿಸಲಾಗುತ್ತದೆ ಎಂದು ಜನಪದ ಕಲಾವಿದರಾದ ಸಿಎನ್ ಶಿವಪ್ರಕಾಶ್ ಅವರು ತಿಳಿಸಿದರು.
ಜನಪದ ಕಲೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿವೆ ಅವುಗಳನ್ನು ಹೇಗಾದರೂ ಮಾಡಿ ಉಡಿಸುವ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಅವಿರತವಾದಂತ ಕ್ರಮಗಳನ್ನು ಕಲಾವಿದರೇ ಮಾಡುತ್ತಿದ್ದಾರೆ ಆದರೆ ಸರ್ಕಾರದ ಮಟ್ಟದಲ್ಲಿ ನಿರಾಕತ್ತಿ ತೋರುತ್ತಿರುವುದು ದುರ್ದೃಷ್ಟಕರ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಜನಪದ ಕಲಾವಿದರ ಒಂದು ಟ್ರಸ್ಟನ್ನು ಸಹ ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಜನಪದ ಕಲಾ ಮೇಳದಲ್ಲಿ ಭೂತಾರಾಧನೆ ಸೋಮನ ಕುಣಿತ,ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ, ಸೇರಿದಂತೆ 18ಕ್ಕಿಂತ ಹೆಚ್ಚು ಜನಪದ ಕಲೆಗಳನ್ನು ವೇದಿಕೆ ಮೇಲೆ ವಿಶೇಷವಾಗಿ ಸಾದರಪಡಿಸಿದರು. ಇನ್ನು ಜನಪದ ಕಲಾ ಮೇಳಕ್ಕೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಮಲ್ಲೇಶ್ವರಂ ಶಾಸಕರಾದ ಅಶ್ವಥ್ ನಾರಾಯಣ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಸೇರಿದಂತೆ ಅನೇಕ ರಾಜಕೀಯ ಮುಖಂಡರುಗಳು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.