ಬೆಂಗಳೂರು: ಜೀವನಬೀಮಾ ನಗರದಲ್ಲಿರುವ ಆದಿಪರಾಶಕ್ತಿ ಶಕ್ತಿಪೀಠದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ಭಕ್ತರು ಆಗಮಿಸಿ ಭಕ್ತಿಯಲ್ಲಿ ಪುನೀತರಾದರು.
ಶಿವರಾತ್ರಿಯಲ್ಲಿ ಶಿವನ ಜಾಗರಣೆಗೆ ದೇವಾಲಯದಲ್ಲಿ ಅಲಂಕಾರ ಮಾಡಿರುವ ಬಗ್ಗೆ ದೇವಾಲಯದ ಸಂಸ್ಥಾಪಕರಾದ ನಾರಾಯಣಪ್ಪ ಅವರು ಮಾತನಾಡಿ, ಪ್ರತಿ ವರ್ಷವು ಸಹಾ ಶಿವರಾತ್ರಿ ಹಬ್ಬಕ್ಕೆ ಓಂ ಶಕ್ತಿ ಅಮ್ಮನ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈ ಭಾರಿಯಲ್ಲಿ ಓಂ ಶಕ್ತಿ ಅಮ್ಮ ಶಿವನಿಗೆ ಗಂಗಾ ಜಲವನ್ನು ಸಮರ್ಪಿಸುವ ಮೂಲಕ ಜಲಾಭಿಕ್ಷೇಕ ಮಾಡುವ ಚಿತ್ರಾವಳಿಯನ್ನು ನಿರ್ಮಿಸಲಾಗಿದೆ.
ಅಲ್ಲದೆ ದೇವಾಲಯದಲ್ಲಿ ಶಿವ ತಪ್ಪಸು ಮಾಡುವ ರೀತಿಯಲ್ಲಿ ಪ್ರತಿಕೃತಿ ಇಡಲಾಗಿತ್ತು. ಬೃಹತ್ ಗಾತ್ರದ ಶಿವಲಿಂಗ ನಿರ್ಮಾಣ ಮಾಡಲಾಗಿತ್ತು. ಇನ್ನು ವಿಶೇಷ ಎಂದರೆ ಭಕ್ತರೇ ಸ್ವತಃ ಶಿವನಿಗೆ ಗಂಗಾಜಲವನ್ನು ಸಮರ್ಪಿಸುವ,ಅಭಿಷೇಕ ಮಾಡುವ ಕಾರ್ಯವನ್ನು ನಿರ್ಮಾಣ ಮಾಡಲಾಗಿತ್ತು, ಅದೇರೀತಿ ಭಕ್ತರು ದೇವಾಲಯಕ್ಕೆ ಆಗಮಿಸಿ ಅಮ್ಮನ ಭಕ್ತಿಯಲ್ಲಿ ಮಿಂದು ಪುನೀತರಾದರು.
ದೇವರ ಬಗ್ಗೆ ನಂಬಿಕೆ:
ದೇವರು ಎಲ್ಲರ ಮನ ಮನದಲ್ಲಿ ಇದ್ದಾನೆ, ಅವರವರ ಭಕ್ತಿ, ಭಾವಕ್ಕೆ,ಕಾಯಕವೇ ಕೈಲಾಸ ಎನ್ನುವ ರೀತಿ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು. ಇರುವುದು ಮೂರು ದಿನಕ್ಕೆ ಅವಾಂತರಗಳು ಏಕೆ ಮಾಡಿಕೊಳ್ಳಬೇಕು, ಭಕಟಹರಿಂದ ಬಂದಿದ್ದನ್ನು ಭಕ್ತರಿಗೆ ವಿನಿಯೋಗಿಸಲಾಗುತ್ತದೆ. ಇದರಲ್ಲಿ ನಮ್ಮದು ಯಾವ ಪಾತ್ರ ಇಲ್ಲ, ಎಲ್ಲಾ ಆದಿ ಶಕ್ತಿ ಪರಾಶಕ್ತಿ ಅಮ್ಮನ ನಡೆ.
ಮನುಷ್ಯ ಯಾರಿಗೂ ಕೆಡುಕನ್ನು ಬಯಸಬಾರದು, ಈ ದೇವಾಲಯದಲ್ಲಿ ಅಮಾವಾಸ್ಯೆ, ಪೌರ್ಣಮಿ ಕಾಲದಲ್ಲಿ ವಿಶೇಷ ಹೋಮ ಹವನ ನಡೆಯುತ್ತದೆ. ಕಷ್ಟ ಅಂತ ಬಂದ ಭಕ್ತರಿಗೆ ದಾರಿ ನೀಡುವ ಶಕ್ತಿ ಇದೆ. ಸನ್ನಿಧಿಯಲ್ಲಿ ಅನ್ನದಾನ ನಡೆಯುತ್ತದೆ. ಬೆಂಗಳೂರಿನಲ್ಲಿ ಅತ್ಯಂತ ದೊಡ್ಡ ದೇವಾಲಯವಾಗಿದೆ, ಇನ್ನೂ ತಮಿಳುನಾಡಿನಲ್ಲಿರುವ ಮೆಲ್ಮಲ್ವತ್ತೂರು ಮಂದಿರ ಅತಿ ದೊಡ್ಡದಾಗಿದೆ. ಪ್ರತಿ ವರ್ಷವೂ ಸಹಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಶಿವರಾತ್ರಿ ಜಾಗರಣೆ ಪೂಜೆಯಲ್ಲಿ ನಾರಾಯಣಪ್ಪ ಅವರ ಮಕ್ಕಳು, ಪತ್ನಿ, ಮಮ್ಮಕ್ಕಳು ಉಪಸ್ಥಿತರಿದ್ದರು.