ಬೆಂಗಳೂರು; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಒಳಗೊಂಡಂತೆ ನಾಡಿನ ಸಮಸ್ತ ಜನತೆಯ ಶ್ರೇಯೋಭಿವೃದ್ಧಿಗಾಗಿ ಎಂ.ಎಸ್. ರಾಮಯ್ಯ ಕುಟುಂಬದ ಕೊಡುಗೆಗಳನ್ನು ಸ್ವಾಮೀಜಿ ಅವರು ನೆನಪು ಮಾಡಿಕೊಂಡರು. ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಕಾರ್ಯಚಟುಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯುವ ನೇತಾರರಾಗಿ ಕಾರ್ಯನಿರ್ವಹಿಸುತ್ತಿರುವ ರಕ್ಷಾ ರಾಮಯ್ಯ ಅವರಿಗೆ ದೇಶೀ ಕೇಂದ್ರ ಸ್ವಾಮೀಜಿ ಅವರು ಯಶಸ್ಸು ಸಿಗಲಿ ಎಂದು ಆಶೀರ್ವದಿಸಿದರು.
ನಂತರ ಮಾತನಾಡಿದ ರಕ್ಷಾ ರಾಮಯ್ಯ, ನಮ್ಮ ಕುಟುಂಬ ಮೊದಲಿನಿಂದಲೂ ಸುತ್ತೂರು ಮಠದ ಬಗ್ಗೆ ವಿಶೇಷ ಅಭಿಮಾನ ಹೊಂದಿದೆ. ನಾವು ಸದಾ ಕಾಲ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಗೌರವ ಸಮರ್ಪಿಸುತ್ತಿದ್ದೇವೆ. ಸ್ವಾಮೀಜಿ ಅವರ ಪಾದಸ್ಪರ್ಷದಿಂದ ತಮಗೆ ಮತ್ತಷ್ಟು ಶಕ್ತಿ ದೊರೆತಿದೆ ಎಂದರು.