ಬೆಂಗಳೂರು: ಜೈನ ಅಭಿವೃದ್ದಿ ನಿಗಮ ಮಂಡಳಿ,ಪ್ರತಿ ವರ್ಷ ನಿಗಮಕ್ಕೆ 200 ಅನುದಾನ ನೀಡಲು ಸೇರಿದಂತೆ 6 ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಶ್ರೀ ದಿಗಂಬರ ಜೈನ್ ಗ್ಲೋಬಲ್ ಮಹಾಸಭಾದ ಬೆಂಗಳೂರಿನ ವಿಜಯನಗರದಲ್ಲಿನ ಜೈನ್ ಸಭಾದ ಮಹೇಶ್ ಜೈನ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ತಿಂಗಳಲ್ಲಿ ಜೈನ ಅಲ್ಪಸಂಖ್ಯಾತರ ಬಹು ದಿನಗಳ ಬೇಡಿಕೆಗಳು ಸರಕಾರ ಈಡೇರಿಸಲು ಒಪ್ಪದಿದ್ದರೆ, ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಇವರಿಗೆ ಈಗಾಗಲೇ ಕಳೆದ ತಿಂಗಳು ಪತ್ರ ಬರೆಯಲಾಗಿದೆ.
ಸಮುದಾಯದ ಪ್ರಮುಖ 6 ಮಹತ್ವದ ಬೇಡಿಕೆಗಳು ಕೆಳಕಂಡಂತಿವೆ
1- ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಪ್ರತಿ ವರ್ಷ Rs.200 ಕೋಟಿ ಜೈನ ಅಭಿವೃದ್ಧಿ ನಿಗಮಕ್ಕೆ ಕೊಡಬೇಕು.
2-ಕರ್ನಾಟಕ ಸರಕಾರದ 414 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ (314 ಹಳೆಯ+100 ಹೊಸ) ಪ್ರತಿ ಜಿಲೆಯಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಮತ್ತು ಶೈಕ್ಷಣಿಕ ಕೇಂದ್ರ ಇರುವ ನಗರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳು ಜೈನರ ಸಲುವಾಗಿ ಇಡಬೇಕು. ಬರೀ ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ 50% ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು.
3- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ಹೀಗಾಗಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಕೊಡಬೇಕು ಹಾಗೂ ಇನ್ನು ನಿಗಮದಲ್ಲಿ ಜೈನ ನಿರ್ದೇಶಕರ ಆಯ್ಕೆ ಆಗಿಲ್ಲ ಹೀಗಾಗಿ ತಕ್ಷಣ ಇಬ್ಬರು ಜೈನ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿ ವಿನಂತಿ. ನಿಗಮದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಮಾಡಬೇಕು. ಸಮುದಾಯಗಳಿಗೆ ಸಿಗುವ ಹಾಗೆ ನಿಯಮ
4- ಇಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದಲ್ಲಿ ಅಧ್ಯಕ್ಷ ಸ್ನಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ. ಆಯೋಗದ ಅಧ್ಯಕ್ಷ ಸ್ಥಾನ ಜೈನ – ಸಮಾಜಕ್ಕೆ ಕೊಡಬೇಕು ಮತ್ತು ಇನ್ನು ಆಯೋಗದಲ್ಲಿ ಜೈನ ಸದಸ್ಯರ ಆಯ್ಕೆ ಆಗಿಲ್ಲ ಹೀಗಾಗಿ ತಕ್ಷಣ ಜೈನ ಸದಸ್ಯರು ಆಯೋಗದ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಮತ್ತು ಆಯೋಗದ ಅಧ್ಯಕ್ಷ ಸ್ನಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವ ಹಾಗೆ ನಿಯಮ ಮಾಡಬೇಕು.
5- ಅಲ್ಪಸಂಖ್ಯಾತರ ವಿಭಾಗದಲ್ಲಿ ಬರೀ 5 % ಜೈನ ಸಮಾಜಕ್ಕೆ ಮೀಸಲಾತಿ ಇದೆ ಅದನ್ನು ಹೆಚ್ಚಿಸಿ 20% ಮಾಡಬೇಕು.
6. ಪ್ರಾಚೀನ ಜೈನ ಬಸದಿ ಮತ್ತು ಬಸದಿಗಳ ಆಸ್ತಿಯ ಸಂರಕ್ಷಣೆಗಾಗಿ ಕಠೋರ ಕಾನೂನು ತರಬೇಕು ಮತ್ತು ಎಲ್ಲಾ ಪ್ರಾಚೀನ ಬಸದಿ ಮತ್ತು ಆಸ್ತಿಗಳ ಸರ್ವೇ ಮಾಡಿ ಅತಿಕ್ರಮಣ ಆಗಿರುವ ಪ್ರಾಚೀನ ಬಸದಿಗಳ ಅತಿಕ್ರಮಣ ತೆಗೆಯಲು ಸರಕಾರ ವಿಶೇಷ ಕಾನೂನಿನ ವ್ಯವಸ್ಥೆ ಮಾಡಬೇಕು.
ಕರ್ನಾಟಕ ಸರಕಾರ ಬರಿ ಮುಸ್ಲಿಂ ಮತ್ತು ಕ್ರಿಶ್ಚಿಯನರು ಅಷ್ಟೇ ಅಲ್ಪಸಂಖ್ಯಾತ ಧರ್ಮದವರು, ಅಲ್ಪಸಂಖ್ಯಾತರ ವಿಭಾಗ ಇವರದು ಅಷ್ಟೇ ಅನ್ನುವ ಹಾಗೆ ಜೈನರ ಜೊತೆಗೆ ಭೇದ ಭಾವ ಮಾಡಿ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ವಿಭಾಗದ ಸಚಿವರು ಮುಸ್ಲಿಂ, ಅಲ್ಪಸಂಖ್ಯಾತ ಅಭಿವೃದ್ಧಿಯ ಅಧ್ಯಕ್ಷರು ಮುಸ್ಲಿಂ, ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರು ಮುಸ್ಲಿಂ ಹೀಗೆ ಎಲ್ಲಾ ಮಹತ್ವದ ಹುದ್ದೆಗಳು ಮುಸ್ಲಿಂ ಧರ್ಮದವರಿಗೆ ಸರಕಾರ ಕೊಟ್ಟಿದ್ದಾರೆ ಮತ್ತು ಎಲ್ಲಾ ಅಲ್ಪಸಂಖ್ಯಾತ ಕಚೇರಿಯಲ್ಲಿಯೂ ಕೂಡಾ ಇವರದೇ ಜನ.
ಸರಕಾರ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ 6 ಮುಸ್ಲಿಂ ಜನರನ್ನು ಮತ್ತು 1 ಕ್ರಿಶ್ಚಿಯನ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ. ಆದರೆ ಜೈನರಿಗೆ ಸ್ಥಾನ ಕೊಟ್ಟಿಲ್ಲ. ಅಲ್ಪಸಂಖ್ಯಾತ ಆಯೋಗದಲ್ಲಿಯೂ ಕೂಡಾ ಸ್ಥಾನ ಕೊಟ್ಟಿಲ್ಲ. ಅಧ್ಯಕ್ಷ ಸ್ನಾನ ಬಿಡಿ, ಯಾವುದೇ ವಿಭಾಗದಲ್ಲಿ ಜೈನ ಸಮಾಜಕ್ಕೆ ಸ್ಥಾನ ಮಾನ ಕೊಡುತ್ತಿಲ್ಲ. ಅಲ್ಪಸಂಖ್ಯಾತ ವಿಭಾಗದ ಯೋಜನೆಗಳಲ್ಲಿ 5% ಅಷ್ಟೇ ಮೀಸಲಾತಿ ಜೈನರಿಗೆ ಕೊಟ್ಟಿದ್ದಾರೆ, ಎಲ್ಲಾ ಯೋಜನೆಗಳಲ್ಲಿ ಒಂದೇ ಸಮುದಾಯದವರು ಫಲಾನುಭವಿಗಳು, ಕ್ರಿಶ್ಚಿಯನ್ ಅಭಿವೃದ್ಧಿಗೆ ಪ್ರತಿ ವರ್ಷ Rs. 200 ಕೋಟಿ ಸರಕಾರ ಕೊಡುತ್ತಿದ್ದಾರೆ. ಸರಕಾರ ಜೈನರ ಬೇಡಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ‘ಈಗ ಸರಕಾರಕ್ಕೆ ಒಂದು ತಿಂಗಳ ಸಮಯ ಕೊಡುತ್ತಿದ್ದವು. ಒಂದು ತಿಂಗಳಲ್ಲಿ ಬೇಡಿಕೆಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳದಿದ್ದರೆ ನಾವು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಶುರು ಮಾಡುತ್ತೇವೆ. ಜೊತೆಗೆ ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.