ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು.
ಗುರುವಾರದ ನಿಮಿತ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಯರಿಗೆ ಹೂವಿನ ಅಲಂಕಾರ, ಅನ್ನದಾಸೋಹ,ವಿವಿಧ ರೀತಿಯ ಅಭಿಷೇಕಗಳು ಸಾಂಗವಾಗಿ ನಡೆದವು. ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸನ್ನಿಧಿಗೆ ಆಗಮಿಸಿ ಗುರು ರಾಯರ ದರ್ಶನ ಪಡೆದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ (ನಿವೃತ್ತ ಪೊಲೀಸ್ ಆಯುಕ್ತರು) ಮತ್ತು ಡಾ.ಕಿರಣ್ ಕುಮಾರ್ ( ನಿರ್ದೇಶಕರು, ಎಫ್.ಕೆ.ಸಿ.ಸಿ.ಐ.) ಶ್ರೀಮಠಕ್ಕೆ ಆಗಮಿಸಿ ದೀಪಗಳನ್ನು ಬೆಳಗಿಸಿ ರಾಯರ ದರ್ಶನ ಪಡೆದು “ಶೇಷವಸ್ತ್ರ ಫಲ ಮಂತ್ರಾಕ್ಷತೆ” ಪರಿಮಳ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.