ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಯನಗರದ 3ನೇ ಬ್ಲಾಕ್ ನಲ್ಲೈರುವ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ 15ನೇ ರಾಜ್ಯ ಮಟ್ಟದ ಅಂತರ ಶಾಲಾ ಒಲಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಉದ್ಘಾಟನೆ ಮಾಡಿದರು, ಕ್ರೀಡಾ ಕಾರ್ಯಕ್ರಮವನ್ನು young star sports promotor club ಹಾಗೂ young star sports club ನಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ನೇತೃತ್ವವನ್ನು ಬಾಂಧವ ಸಂಸ್ಥೆಯ ಮುಖ್ಯಸ್ಥ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎನ್ ನಾಗರಾಜು ಅವರು ವಹಿಸಿದ್ದರು.
ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮಕ್ಕಳಿಗೆ ಕೇವಲ ಶಾಲಾ ಚಟುವಟಿಕೆ ಅಲ್ಲದೆ ಕ್ರೀಡೆ ಕಡೆ ಹೆಚ್ಚು ಗಮನ ನೀಡಿದಾಗ ಮಾತ್ರ ಮಕ್ಕಳ ಆತ್ಮ ಸ್ಥೈರ್ಯ, ಬುದ್ದಿಮಟ್ಟ, ಕ್ರಿಯಾಶೀಲ ಚಟುವಟಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪ್ರತಿ ವರ್ಷವೂ ಇಂತಹ ಕ್ರೀಡಾ ಚಟುವಟಿಕೆಯನ್ನು ನಾಗರಾಜ್ ಅವರು ಮಾಡಿಕೊಂಡು ಬರುತ್ತಿದ್ದಾರೆ. ಅದನ್ನು ಹೀಗೆ ಮುಂದುವರೆಸಿಕೊಂಡು ಹೋಗಲಿ, ಮಕ್ಕಳಿಗೆ ಕ್ರೀಡಾ ಚಟುವಟಿಕೆಯಿಂದ ಹೆಚ್ಚು ಸ್ಪೂರ್ತಿ ಬರಲಿ ಎಂದು ಆಶಿಸಿದರು.
ಬಿಬಿಎಂಪಿ ಮಾಜಿ ಸದಸ್ಯ ಎನ್ ನಾಗರಾಜು ಮಾತನಾಡಿ, young star sports promotor club ಹಾಗೂ young star sports club ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿ ವರ್ಷ ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆ ಮಾಡಲಾಗುತ್ತದೆ, ನೂರಾರು ಮಕ್ಕಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಲ್ಲಿ ಅಡಗಿರುವ ಕ್ರೀಡೆಯನ್ನು ತೋರಿಸುತ್ತಿದ್ದಾರೆ, ಇದರಿಂದ ಅವರ ಜೀವನದಲ್ಲಿ ಒಂದು ರೀತಿಯಲ್ಲಿ ಸಾಧನೆಯೇ ಸರಿಯಾಗಿದೆ, ಇಂತಹ ಕ್ರೀಡೆಗಳು ಇವತ್ತಿನ ಕಾಲಘಟ್ಟಕ್ಕೆ ಬೇಕಾಗಿದೆ, ಕೇವಲ ಓದಿನಲ್ಲಿ ಮುಂದೆ ಇದ್ದರೆ ಸಾಲದು, ಬದಲಿಗೆ ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳನ್ನು ಬಳಸಿಕೊಳ್ಳಲು ಒಂದು ವೇದಿಕೆಯಾಗಿದೆ ಎಂದರು.
ಇದೇ ವೇಳೆ ನಾಡ ದ್ವಜ ಹಾರಿಸುವ, ಬಲೂನ್ ಹಾರಿ ಬಿಡುವ ಮೂಲಕ ಕ್ರೀಡಾ ಚಟುವಟಿಕೆ ಚಾಲನೆ ನೀಡಲಾಯಿತು. ಮಕ್ಕಳಿಗೆ ವಾಲಿಬಾಲ್, ಕಬಡಿ, ಉದ್ದ ಜಿಗಿತ, ಓಟದ ಸ್ಪರ್ಧೆ, ತ್ರೋಬಾಲ್ ಸೇರಿದಂತೆ ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸಿ ಮಕ್ಕಳ ಕುಶಿ ಪಟ್ಟರು. ಇಡೀ ಕ್ರೀಡಾಂಗಣ ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿ ಎತ್ತಿ ತೋರಿಸುವ ವಂತೆ ಬಿಂಬಿತವಾಗಿತು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಬಿ ಮೋಹನ್ ಸೇರಿದಂತೆ ಸ್ಥಳೀಯರು, ಪಿಟಿ ಟೀಚರ್,ಪೋಷಕರು ಉಪಸ್ಥಿತರಿದ್ದರು.