ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ 7ನೇ ಮಳಿಗೆ ಮಲ್ಲೇಶ್ವರಂನ 11 ನೇ ಅಡ್ಡರಸ್ತೆಯಲ್ಲಿ ಶುಭಾರಂಭ ಮಾಡಿತು. ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಅವರು ಮಲ್ಲೇಶ್ವರಂ ಸ್ಟೋರ್ ಅನ್ನು ಉದ್ಘಾಟಿಸಿದರು.
ವಿಧಾನಪರಿಷತ್ ಶಾಸಕರಾದ ಡಾ.ಟಿ.ಎ.ಶರವಣ ಮಾತನಾಡಿ, ಚಿನ್ನ ಮನೆಯಲ್ಲಿ ಇದ್ದರೆ ಚನ್ನಾ, ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ಬಂಗಾರ ಖರೀದಿ ಮಾಡಿದರೆ ಆಪತ್ ಕಾಲದಲ್ಲಿ ಸಾಯಕ್ಕೆ ಬರುವುದು ಅದೇ ಚಿನ್ನ, ಚಿನ್ನದ ದರ ಎಂದು ಕಡಿಮೆಯಾಗುವುದಿಲ್ಲ ದಿನದಿಂದ, ದಿನಕ್ಕೆ ಹೆಚ್ಚಳವಾಗುತ್ತಿದೆ.
ಚಿನ್ನ ಮನೆಯಲ್ಲಿ ಇಟ್ಟರೆ ಸಂಕಷ್ಟದ ಕಾಲದಲ್ಲಿ ಕೈಹಿಡಿಯುವ ಅಮೂಲ್ಯ ವಸ್ತು. ಮದುವೆ, ಶುಭ ಸಮಾರಂಭಗಳಿಗೆ ಮತ್ತು ಹಬ್ಬದಿನಗಳಲ್ಲಿ ಚಿನ್ನಭರಣ ಧರಿಸಲು ವಿಶಿಷ್ಟ, ವಿನ್ಯಾಸದ ಅಭರಣ, ಡೈಮೆಂಡ್ ಗಳು ಲಭ್ಯವಿದೆ. ದುಬೈ ಬೆಲೆಯಲ್ಲಿ ಚಿನ್ನ ಮಾರಾಟ ಸೇರಿ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದರು.
ನಟ ಸುದೀಪ್ ಮಾತನಾಡಿ, ಮಹಿಳೆಯರು ಸೌಂದರ್ಯಕ್ಕೆ ಚಿನ್ನ, ಆಭರಣಗಳು ಮೆರಗು ನೀಡುತ್ತವೆ. ಮಹಿಳೆಯರು ತಮಗೆ ಒಪ್ಪುವ ಆಭರಣ ಖರೀದಿಗೆ ಈ ಮಳಿಗೆ ಉತ್ತಮ ವೇದಿಕೆಯಾಗಿದೆ. ಒಂದೇ ಸೂರಿನಡಿ ಎಲ್ಲಾ ವಿನ್ಯಾಸದ ವಿಶೇಷ ಆಭರಣಗಳು ಇಲ್ಲಿ ಲಭ್ಯವಿದೆ ಎಂದರು.
ನೂತನ ಆವರರಣ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ್ , ಅಶ್ವಿನಿ ಪುನೀತ್ ರಾಜಕುಮಾರ್ , ಎಡಿಜಿಪಿ ವಿ.ರಾಜ್ ಕುಮಾರ್, ಆರ್. ಪಿ ರವಿಶಂಕರ್ , ಸತ್ಯನಾರಾಯಣ, ನಟಿ ಪ್ರೇಮ, ಗಾಯಕ ಚಂದನ್ ಶೆಟ್ಟಿ , ಬಿಗ್ ಬಾಸ್ ಖ್ಯಾತಿಯ ನಟಿ ಅನುಷಾ ರೈ, ನಟಿ ಐಶ್ವರ್ಯ ಸಿಂಧೋಗಿ, ನಟ ಶಿಶಿರ್ ಶಾಸ್ತ್ರಿ ಅವರು ನೂನತ ಮಳಿಗೆ ಆರಂಭಕ್ಕೆ ಸಾಕ್ಷಿಯಾದರು.