ಬೆಂಗಳೂರು: ನಗರದ ಬನಪ್ಪ ಉದ್ಯಾನವನದಲ್ಲಿ ಬೆಂಗಳೂರು ಶ್ರೀತಿ ಸಂಘದಿಂದ ಅಖಂಡ ಶ್ರೀಕೃಷ್ಣ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, 4 ದಿನ ನಡೆದ ವಿಶೇಷ ಆರಾಧನೆಯಲ್ಲಿ ಸುಮಾರು 50 ಸಾವಿರ ಭಕ್ತರು ಸೇರಿದ್ದರು ಎಂದು ಸಂಘದ ಅಧ್ಯಕ್ಷ ಅಮಿತ್ ಕುಮಾರ್ ತಿಳಿಸಿದರು.
ನಂತರ ಮಾತನಾಡಿದ ಅವರು, ಶ್ರೀಕೃಷ್ಣ ಕಲಿಯುಗಕ್ಕೆ ಬಂದಾಗಿನಿಂದ ಪ್ರತಿ ವರ್ಷವೂ ಸಹ ಶ್ರೀ ಕೃಷ್ಣನನ್ನು ವಿಶೇಷವಾಗಿ ಆರಾಧನೆ ಮಾಡಲಾಗುತ್ತದೆ, ಅದೇ ರೀತಿ ಈ ವರ್ಷವೂ ಸಹ ಬೆಂಗಳೂರಿನ ಕಾರ್ಪೊರೇಷನ್ ವೃತ್ತದ ಬಣ್ಣಪ್ಪ ಉದ್ಯಾನವನದಲ್ಲಿ ಅಖಂಡ ಶ್ರೀಕೃಷ್ಣ ಭಜನೆಯನ್ನು ನಡೆಸಲಾಯಿತು. ಗೋಪಾಲನಿಗೆ ವಿಶೇಷ ಭಕ್ಷ್ಯ ಬೋಜನ, ಪೂಜೆ ಪುನಸ್ಕಾರ, ಭಜನೆ, ಸಾಂಗವಾಗಿ ನಡೆದವು. 2013ರಿಂದ ಬೆಂಗಳೂರಿನಲ್ಲಿ ಶ್ರೀಕೃಷ್ಣ ಅಖಂಡ ಭಜನೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸಂಘದಿಂದ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಬೆಂಗಳೂರಿನ ಶಿವಾಜಿನಗರ, ಚಿಕ್ಕಪೇಟೆ, ಗಾಂಧಿನಗರ 3 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1 ಲಕ್ಷ ಬೆಂಗಾಲಿ ಸಮುದಾಯದವರು ಇದ್ದಾರೆ. ಇವರೆಲ್ಲ ಸೇರಿಕೊಂಡು ವಿಶೇಷ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ನಾವೆಲ್ಲರೂ ಉದ್ಯೋಗ ಹಾರಿಸಿಕೊಂಡು ಬೆಂಗಳೂರಿಗೆ ಬಂದಿದ್ದು, ವರ್ಷಕ್ಕೆ ಒಂದು ಬಾರಿ ನಾವೆಲ್ಲರೂ ಒಂದು ಕಡೆ ಸೇರಿ ನಮ್ಮ ಸಮುದಾಯದ ಒಗ್ಗಟ್ಟು ತೋರಿಸುವ ಸಲುವಾಗಿ ಒಂದೆಡೆ ಸೇರುವ ಕಾರ್ಯ ಮಾಡಲಾಗುತ್ತಿದೆ. ನಾವೆಲ್ಲರೂ ಹಿಂದುತ್ವವನ್ನು ಬೆಳೆಸಿಕೊಂಡು, ಹೊಸದಾಗಿ ಬರುವುದನ್ನು ಅಳವಡಿಕೊಂಡು ಹೋಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಇದೆ. ಹೀಗಾಗಿ ದೇವಾಲಯದಿಂದ ಮಂತ್ರಾಕ್ಷತೆ ಬಂದಿದ್ದು, ಮನೆಮನೆಗೆ ತಲುಪಿಸುವ ಕಾರ್ಯವನ್ನು ನಮ್ಮ ಸಮುದಾಯದಿಂದ ಮಾಡಲಾಗುತ್ತದೆ ಎಂದರು.
ಅದೇ ರೀತಿ ಭಜನೆ ಕಾರ್ಯಕ್ರಮಕ್ಕೆ ಹಾಗೂ ಕೃಷ್ಣನ ಪೂಜಾ ಕೈಂಕರ್ಯಗಳಿಗೆ ಭಕ್ತರು ಶ್ರೀಕೃಷ್ಣನ ಮೂರ್ತಿ, ವಿಗ್ರಹಗಳನ್ನು ಮನೆಯಿಂದಲೇ ತಂದು ವಿಶೇಷವಾಗಿ ಆರಾಧಿಸಿದರು. ಇನ್ನು 4 ದಿನಗಳ ಕಾಲ ನಡೆದ ಭಜನೆಯಲ್ಲಿ 45 ಸಾವಿರಕ್ಕಿಂತ ಹೆಚ್ಚಿನ ಜನರು ಸೇರಿದ್ದು ವಿಶೇಷವಾಗಿತ್ತು. 4 ದಿನಗಳ ಕಾಲ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾತಿಯು.
4 ದಿನಗಳ ಕಾಲ ಶ್ರೀಕೃಷ್ಣನಿಗೆ ಸಂಬಂಧಿಸಿದ ಭಜನೆ ಪದಗಳ ಗಾಯನ ಮನೋಜ್ಞವಾಗಿ. ಉತ್ತರ ಭಾರತದ ಶೈಲಿಯ ಕಲೆಯನ್ನು ಪ್ರದರ್ಶನ ಮಾಡಿದರು. ಬೆಂಗಳೂರಿನ ಕಡೆಗೆ ಜೀವನ ನಿರ್ವಹಣೆಗೆ ಆಗಮಿಸಿದ ಬಹುತೇಕವಾಗಿ ಮಾರ್ವಾಡಿ, ಸೇಟುಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
4 ದಿಂದ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು, ಪಶ್ಚಿಮ ಬಂಗಾಳದ ಹೆಸರಾಂತ ಹಿಂದಿ ಗಾಯಕಿ ಯಿಂದ ಶ್ರೀಕೃಷ್ಣನ ಹಾಡುಗಳು ಮೊಳಗಿದವು, ಹಾಡಿಗೆ ತಕ್ಕಂತೆ ನೆರೆದಿದ್ದವರಿಂದ ನೃತ್ಯ ಮಾಡುವ ಮೂಲಕ ನಿಂತಲ್ಲಿಯೇ ಕುಣಿದು ಕುಪ್ಪಳಿಸಿದರು. ಇದರಿಂದ ತೋರಿಸುವುದೇನೆಂದರೆ ಕೃಷ್ಣನ ಮೇಲಿನ ಅಗಾಧ ಭಕ್ತಿ ತೋರಿಸುತ್ತದೆ.
ಅಖಂಡ ಶ್ರೀ ಕೃಷ್ಣ ಭಜನಾ ಕಾರ್ಯಕ್ರಮದ ಮತ್ತೊಂದು ವಿಶೇಷವೇನೆಂದರೆ ವೇದಿಕೆಯಲ್ಲಿ ದಿವಂಗತ ಡಾಕ್ಟರ್ ರಾಜಕುಮಾರ್ ಹಾಗೂ ಪುತ್ರ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ರಾರಾಜಿಸುತ್ತಿರುವುದನ್ನು ನೋಡಬಹುದಾಗಿದೆ.
ಶ್ರೀಕೃಷ್ಣನ ಅಖಂಡ ಭಜನೆ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಭಾರತ್ ಹಾರಿ, ಕಾರ್ಯದರ್ಶಿ ಆಶಿಷ್ ಸಮಂತ್, ಖಜಾಂಚಿ ಸಬನ್ ಮಿಶ್ರ,ಜಂಟಿ ಕಾರ್ಯದರ್ಶಿ ಮಿಲಾನ್ ಸೇರಿದಂತೆ ಅನೇಕ ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.