ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸಕ್ಕರೆ ಕಾಯಿಲೆ ಹೇಗೆ ನಿಯಂತ್ರಣ ಮಾಡಬಹುದು, ಮುಂದಾಲೋಚನೆಯ ಕ್ರಮಗಳನ್ನು ಹೇಗೆ ತೆಗೆದುಕೊಳ್ಳಬೇಕು,ಇದರ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ತರಬೇತಿ ಸೇರಿದಂತೆ ಅನೇಕ ವಿಚಾರಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕರ್ನಾಟಕ ಸರ್ಕಾರ ನೊವೊ ನಾರ್ಡಿಸ್ಕ್ ಶಿಕ್ಷಣ ಪ್ರತಿಷ್ಠಾನದೊಂದಿಗೆ ಚೇಂಜಿಂಗ್ ಡಯಾಬಿಟಿಸ್ ಬಾರೋಮೀಟರ್ ಕಾರ್ಯಕ್ರಮ ಪ್ರಾರಂಭಿಸಲು MOU ಗೆ ಸಹಿ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಧುಮೇಹದಂತಹ ಸಾಂಕ್ರಾಮಿಕ ರೋಗಗಳನ್ನು ಶಮನ ಮಾಡಲು ಆರೋಗ್ಯ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರ ಜೊತೆ ಮಧುಮೇಹದ ಬಗ್ಗೆ ಅರಿವು,ಸಮರ್ಥನೆ, ಸಾಮರ್ಥ್ಯ ವೃದ್ಧಿ ಮತ್ತು ಚಿಕಿತ್ಸೆಯನ್ನು ನೀಡುವ ಬಗ್ಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ರೋಗಗಳು ಸಾಮಾನ್ಯವಾಗಿ ವಾತಾವರಣ ವೈಪರಿತ್ಯಗಳಿಂದ ಬರುತ್ತವೆ, ಪ್ರಾಕೃತಿಕ ಅಸಮತೋಲನ ರೋಗಗಳು ಬರುತ್ತವೆ, ಅದನ್ನು ಹೇಗೆ ನಿಯಂತ್ರಣ ಮಾಡಬೇಕು ಎಂಬುದರ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ, ಈ ಬಗ್ಗೆ ವೈದ್ಯರಿಗೆ ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ, ಮೊದಲನೆಯದಾಗಿ ರೋಗಗಳನ್ನು ಪತ್ತೆ ಹಚ್ಚುವ,ಕಾರಣ ಹುಡುಕುವ ಕೆಲಸಗಳನ್ನು ಮಾಡಬೇಕು ಎಂದರು.
ರಾಜ್ಯದಲ್ಲಿ ಶೇ 15ರಷ್ಟು ಜನರಿಗೆ ಮಧುಮೇಹ ಬಂದಿದೆ ಎಂಬುದು ತಿಳಿದು ಬಂದಿದೆ, ಮಧುಮೇಹ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ರಾಷ್ಟ್ರಕ್ಕೆ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಪಿಡುಕಾಗಿದೆ. ಮುಂದಿನ ತಿಂಗಳು ಸಭೆ ಮಾಡಿ ಪ್ರತಿ ಮನೆಯಲ್ಲೂ ಆರೋಗ್ಯ ಸೌಲಭ್ಯ ಒದಗಿಸುವ ಯೋಜನೆ ಹಾಕಿಕೊಳ್ಳಲಾಗುವುದು, ಅದರ ಜೊತೆಗೆ ಮನೆ ಬಾಗಿಲಿಗೆ ಔಷಧಿ ಒದಗಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ನೋವೂ ನಾರ್ಡಿಕ್ಸ್ ಸಂಸ್ಥೆ ಆರೋಗ್ಯದ ಬಗ್ಗೆ ಅದರಲ್ಲೂ ದಯಾಬಿಟ್ಯಾಕ್ಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ, ಇಂತಹ ದೊಡ್ಡ ದೊಡ್ಡ ಫಾರ್ಮ ಕಂಪನಿಗಳು ಮುಂದೆ ಬಂದು ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಕೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.
ರಾಷ್ಟ್ರೀಯ ಆರೋಗ್ಯ ಮಿಶಿನ್ ನಿರ್ದೇಶಕ ಡಾ.ನವೀನ್ ಭಟ್ ವೈ ಮಾತನಾಡಿ, ರಾಜ್ಯದಾದ್ಯಂತ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಮಧುಮೇಹ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು, ಹೊರರೋಗಿ, ಸಮಾಲೋಚನೆ, ಕೇಂದ್ರೀಕೃತ ಮಧುಮೇಹ ಆರೈಕೆಗಾಗಿ ಸಮಗ್ರ ವಿಧಾನ ಪರಿಚಯಿಸಲು ಸಹಾಯ ಮಾಡುತ್ತದೆ. ಕರ್ನಾಟಕ 3 ಜಿಲ್ಲೆಗಳಾದ ಬೆಂಗಳೂರು ನಗರ,ದಕ್ಷಿಣ ಕರ್ನಾಟಕ, ಯಡಗುರುಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ನೋವೂ ನಾರ್ಕೋಡಿಸ್ಕ್ ನ ಮ್ಯಾನೇಜಿಂಗ್ ಟ್ರಸ್ಟಿ ವಿಕ್ರಾಂತ್ ಶ್ರೋತ್ರಿಯ,ಡಿ ರಂದೀಪ್, ನೋವೂ ನಾರ್ಡಿಸ್ಕ್ ನ ಎಂಡಿ ಜಾನ್ ದಾಬರ್ ಸೇರಿದಂತೆ ಉಪಸ್ಥಿತರಿದ್ದರು.