ಬೆಂಗಳೂರು: ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ, ಸುವರ್ಣ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೆಮ್ಮೆಯ ಸುವರ್ಣ ಕನ್ನಡಿಗ 2024ರ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಾ ಒಕ್ಕೂಟದ ರಾಜ್ಯಧ್ಯಕ್ಷರಾದ ಶ್ರೀನಿವಾಸ್ ಬಾಬು ನೇತೃತ್ವದಲ್ಲಿ ಸಮಾರಂಭವನ್ನು ಆಯೋಜನೆ ಮಾಡಲಾಯಿತು. ರಾಜ್ಯದಲ್ಲಿ ಎಲೆ ಮರೆ ಕಾಯಿಗಳಂತೆ ಸಮಾಜ ಮುಖಿ ಕಾಯಕ ಮಾಡುತ್ತಿರುವವರನ್ನು ಗುರುತಿಸುವ ಸಲುವಾಗಿ ಹಾಗೂ ಅವರಿಗೆ ಮುಂದಿನ ದಿನಗಳಲ್ಲಿ ಸಮಾಜಸೇವೆ ಮಾಡಲು ಮತ್ತಷ್ಟು ಪ್ರೇರಣೆ ಸಿಗುವ ದೃಷ್ಟಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಯೂರ್ ಆಶ್ರಮದ ಪೀಠಾಧಿಪತಿ ಶ್ರೀ ಡಾ.ಸಂತೋಷ ಭಾರತಿ ಸ್ವಾಮೀಜಿ, ಸಪ್ತರ್ಶಿ ವೈದಿಕ ಗುರುಕುಲದ ಸೇವಾಶ್ರಮ ಮೈಸೂರಿನ ಡಾ.ಅಭಿನವ ಶ್ರೀರಂಗ ರಾಮಾನುಜಚಾರ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ನಂತರ ದಿವ್ಯ ಸಾನಿಧ್ಯವನ್ನು ಆಯೂರ್ ಆಶ್ರಮದ ಪೀಠಾಧಿಪತಿ ಶ್ರೀ ಡಾ.ಸಂತೋಷ ಭಾರತಿ ಸ್ವಾಮೀಜಿ ವಹಿಸಿ ಮಾತನಾಡಿದರು. ಪ್ರಶಸ್ತಿಗಳಿಗೆ ಜನ ಜೋತು ನಿಲ್ಲಬಾರದು, ಹಣಕೊಟ್ಟು ಪ್ರಶಸ್ತಿ ಪಡೆದುಕೊಳ್ಳಬಾರದು. ನಿಜವಾದ, ಸ್ವಾರ್ಥವಿಲ್ಲದೆ ಸೇವೆ ಸಮಾಜಕ್ಕೆ ಸಲ್ಲಿಸಿದಾಗ ಮಾತ್ರ ಆತ್ಮತೃಪ್ತಿಯ ಕೆಲಸವಾಗುತ್ತದೆ ಎಂದರು. ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಸಾಧಕರಾಗಬಾರದು, ಸುಭಾಷ್ ಚಂದ್ರಬೋಸ್ ತರ ಕಾಯಕ ಜೀವಿಯಾಗಿ ಸಾಧನೆ ಮಾಡಬೇಕೆಂದು ಬೋಸ್ ಬಗ್ಗೆ ಗುಣಗಾನ ಮಾಡಿದರು. ಸಾಧಕರು ಸುಭಾಷ್ ಚಂದ್ರಬೋಸ್ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುವವರು ದಕ್ಷ, ಅವರ ತರ ಇರಬೇಕೆಂದು ಹುಮ್ಮಸ್ಸು ನೀಡಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಬಾಬು ಮಾತನಾಡಿ, ಪ್ರತಿ ವರ್ಷ ಹಿಂದುಳಿದ ವರ್ಘಗಳ ಒಕ್ಕೂಟದಿಂದ ಯಾರಿಗೂ ತಿಳಿಯದಂತೆ, ಸದ್ದಿಲ್ಲದೆ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿರುವ ಸಾಧಕರನ್ನು ಹೊರಜಗತ್ತಿಗೆ ತೋರಿಸುವ ಕೆಲಸ ಮಾಡಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ನಾಡು, ದೇಶ, ವಿದೇಶಗಳಲ್ಲೂ ನಾಡಿನ ಗೌರವವನ್ನು ಹಿಮ್ಮಡಿಗೊಳಿಸಿದ್ದಾರೆ. ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಇಂತಹ ಸನ್ಮಾನಗಳು ಸಾಧಕರ ಜೀವನದಲ್ಲಿ ಹೊಸ ಹುಮ್ಮಸ್ಸು ತರಲಿ ಎಂದು ಆಶಿಸಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕರ್ನಾಟಕ ಗ್ಯಾಸ್ ವೆಂಡರ್ಸ್ ವೆಲ್ಫೇರ್ ಸಂಘದ ರಾಜ್ಯ ಕಾರ್ಯಾಧ್ಯಕ್ಷ ರವಿ ದಾಸ್ ಅವರು ಸಹ ಸಹಕಾರವನ್ನು ನೀಡಿದ್ದಾರೆ. ಕಾರ್ಯಕ್ರಮದ ಬಗ್ಗೆ ರವಿ ಅವರು ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ನೋಡಿ ಆಶ್ಚರ್ಯವಾಯಿತು. ಸಾಧನೆ ಸಂದ ಗೆಲುವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನೃತ್ಯ ಶಾಲೆಯ ಮಕ್ಕಳು ಸಂಗೀತಕ್ಕೆ ತಕ್ಕಂತೆ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದರು. ನಾಟಕ, ಏಕಪಾತ್ರ ಅಭಿನಯವನ್ನು ಮಕ್ಕಳು ಮಾಡಿ ತೋರಿಸಿದ ಹಿನ್ನೆಲೆ ನೆರೆದಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿತು. ಇದೇ ವೇಳೆ ರವಿ ದಾಸ್ ಅವರು ವೇದಿಕೆ ಮೇಲೆ ಮಕ್ಕಳ ಜೊತೆ ನೃತ್ಯ ಮಾಡಿ ನಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿದರು.