ಬೆಂಗಳೂರು: ಕೇಂದ್ರದಲ್ಲಿ ಮತ್ತೊಮ್ಮೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಆಗಬೇಕೆಂದರೆ ಬಿಜೆಪಿಗೆ ಮತವನ್ನು ಹಾಕುವ ಮೂಲಕ ಮೋದಿ ಕೈ ಬಲಪಡಿಸಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಿಳಿಸಿದರು.
ಜಯನಗರದ ಜೆಎಸ್ಎಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಹಾಲುಮತ ಕುರುಬ ಸಮಾಜದವರು ಬೆಂಗಳೂರು ದಕ್ಷಿಣ ವಿಭಾಗದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಮೋದಿರವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಪ್ರತಿಯೊಂದು ಸಮಾಜವು ಒಗ್ಗಟ್ಟಾಗಿ ಬೆಂಬಲಿಸುವಂತೆ ಬೆಂಗಳೂರು ದಕ್ಷಿಣ ವಿಧಾನಸಭಾ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ತೇಜಸ್ವಿ ಸೂರ್ಯ ಅವರು ಮನವಿ ಮಾಡಿದರು.
ಕೆಲಸಕ್ಕೆ ಬಾರದ ಕೈ ಗ್ಯಾರಂಟಿ ಯೋಜನೆಗಳು!
ಕಾಂಗ್ರೆಸ್ ಅವರ ಸುಳ್ಳು ಗ್ಯಾರಂಟಿಗಳು ಜನರ ಮುಂದೆ ಇವೆ, 5 ಗ್ಯಾರಂಟಿ ಯೋಜನೆಗಳು ಯಾರಿಗೂ ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಜನರಿಗೆ ಮಂಕು ಬೂದಿ ಹಚ್ಚುತ್ತಿದ್ದಾರೆ, ಕರ್ನಾಟಕದಲ್ಲಿ ಸರ್ಕಾರವನ್ನು ಸಾಲದ ಸುಳಿಯಲ್ಲಿ ಸಿಲುಕಿಸಲು ಮುಂದಾಗಿದ್ದಾರೆ, ಹೀಗಾಗಿ ಮೋದಿಯವರು ಮತ್ತೊಮ್ಮೆ ಪ್ರದಾನ ಮಂತ್ರಿ ಮಾಡಲು ರಾಜ್ಯದ ಜನತೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಮೋದಿ ಕೈ ಬಲಪಡಿಸಲು ಕುರುಬ ಸಮಾಜ ಮುಂದು! ಸೋಮಶೇಖರ್
ಇನ್ನು ಇದೇ ವೇಳೆ ಸಾರಕ್ಕಿ ವಾರ್ಡ್ನ ಬಿಜೆಪಿ ಮಾಜಿ ಕಾರ್ಪೊರೇಟರ್ ಹಾಗು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರದಾನ ಕಾರ್ಯದರ್ಶಿಗಳಾದ ಸೋಮಶೇಖರ್ ಮಾತನಾಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲುಮತ ಕುರುಬ ಸಮಾಜದವರು ಸುಮಾರ 2ವರೆ ಲಕ್ಷ ಜನರಿದ್ದಾರೆ, ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೈ ಬಳಪಡಿಸಬೇಕಾದರೆ ಕಮಲಕ್ಕೆ ಜನ ಮತ ಹಾಕುವ ಕೈ ಬದ್ರಪಡಿಸಬೇಕು ಎಂದರು.
ಕುರುಬ ಸಮಾಜದವರು ಎಲ್ಲಾ ಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚಿನ ಒತ್ತನ್ನು ನೀಡಿ ಗೆಲ್ಲಿಸಿದ್ದಾರೆ. ಹಾಲುಮತ ಸಮಾಜದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಸಮಾವೇಶ ಕೈಗೊಳ್ಳಲಾಗಿತ್ತು. ಸಮಾಜದ ಕುಲಬಾಂದವರು ನೂರಾರು ಸಂಖ್ಯೆಯಲ್ಲಿ ಸಮಾವೇಶಕ್ಕೆ ಹಾಜರಾಗಿ ಮೋದಿ ಪರವಾಗಿ ಕೈ ಜೋಡಿಸಲು ಪಣ ತೊಟ್ಟಿದ್ದಾರೆ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನೆಚ್ಚಿನ ನಾಯಕ ಹಾಗು ಅಭ್ಯರ್ಥಿ ನಮ್ಮ ತೇಜಸ್ವಿ ಸೂರ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು, ಮುಂಬರುವ ಲೋಕಸಭಾ ಚುನಾವಣೆ ರಾಜ್ಯದ ಚುನಾವಣೆಯಲ್ಲ ದೇಶದ ಎಲೆಕ್ಷನ್, ದೇಶದ ಪ್ರತಿಯೊಬ್ಬರಿಗೂ ಕನಸು, ದೇಶದ ಭದ್ರತೆ, ಮಕ್ಕಳ ಭವಿಷ್ಯ ಅಡಗಿದೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವ ಮೂಲಕ ವಿಶ್ವದಲ್ಲಿ ಭಾರತ ಪ್ರಧಾನಿ ನಾಯಕರಾಗಿ ಹೊರಹುಮ್ಮಲು ಜನರ ಆಶೀರ್ವಾದ ಬೇಕು ಎಂದರು.
ಕುರುಬ ಸಮಾಜ ಯಾರಿಗೂ ಕೇಡನ್ನು ಬಯಸುವುದಿಲ್ಲ, ಎಲ್ಲರಿಗೂ ಒಳ್ಳೇದನ್ನು ಬಸುತ್ತದೆ, ಸಮಾಜದಲ್ಲಿ ಯಾರು ನೀರು ಕೇಳುತ್ತಾರೋ ಅವರಿಗೆ ಹಾಲುಮತ ಕುರುಬ ಸಮಾಜ ಹಾಲನ್ನು ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿದೆ. ನಮ್ಮ ನಿಷ್ಟೆ, ನಂಬಿಕೆ, ಪ್ರೀತಿ ವಿಶ್ವಾಸ ನರೇಂದ್ರ ಮೋದಿ ಮೇಲಿದೆ. ಕುರುಬ ಸಮಾಜದಿಂದ ರಾಜ್ಯದಲ್ಲಿ ತೇಜಸ್ವಿ ಸೂರ್ಯ ,ಕೇಂದ್ರದಲ್ಲಿ ನರೇಂದ್ರ ಮೋದಿಯನ್ನು ಗೆಲ್ಲಿಸಲು ಸಮಾವೇಶದ ಮೂಲಕ ಅಳಿಲು ಸೇವೆ ಮಾಡುತ್ತಿದೆ ಎಂದು ಹೆಮ್ಮೆಪಟ್ಟರು.
ಸಮಾವೇಶದಲ್ಲಿ ಶಾಸಕರುಗಳಾದ ಸತೀಶ್ ರೆಡ್ಡಿ, ರವಿಸುಬ್ರಮಣ್ಯರವರು, ಸಿಕೆ ರಾಮಮೂರ್ತಿ, ಹಾಗೂ ರಾಜ್ಯ ಒಬಿಸಿ ಮೋರ್ಚಾದ ಅಧ್ಯಕ್ಷರಾದ ರಘು ಕೌಟಿಲ್ಯಾ, ಪ್ರಧಾನಕಾರ್ಯದರ್ಶಿ ಬಿ. ಸೋಮಶೇಖರ್, ಖಜಾಂಚಿ ಬಸವರಾಜ್, ಹಾಗೂ ಬಿಬಿಎಂಪಿ ಮಾಜಿ ಸದಸ್ಯರುಗಳಾದ ಮಾಲತಿ ಸೋಮಶೇಖರ್, ಯಶೋಧ ಲಕ್ಷ್ಮೀಕಾಂತ್, ಭಾರತಿ ರಾಮಚಂದ್ರ, ಹಾಗೂ ಮುಖಂಡರುಗಳಾದ ದೊಡ್ಡಯ್ಯ, ಲಕ್ಷೀಕಾಂತ್ ಹಾಗೂ ಹಾಲು ಮತದ ಸಮಾಜದ ಮುಖಂಡರುಗಳುಉಪಸ್ಥಿತರಿದ್ದರು.