ಬೆಂಗಳೂರು: ಕನ್ನಡ ನಾಡಿನ ಶ್ರೀಮಂತ ಭಾಷೆ, ಕಲೆ, ಪರಂಪರೆ, ಸಂಸ್ಕೃತಿಯನ್ನು ಸಪ್ತ ಸಾಗರದಾಚೆ ಪಸರಿಸುವ, ಬೆಳೆಸುವ ಹಿನ್ನೆಲೆ 12ನೇ ‘ಅಕ್ಕ ವಿಶ್ವ ಸಮ್ಮೇಳನ – 2024’ ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ‘ಅಮೆರಿಕ ಕನ್ನಡ ಕೂಟಗಳ ಒಕ್ಕೂಟ’ದ (ಅಕ್ಕ) ಅಧ್ಯಕ್ಷರಾದ ರವಿ ಬೋರೆಗೌಡ ಅವರು ತಿಳಿಸಿದರು.
ನಂತರ ಮಾತನಾಡಿದ ಅವರು, 12ನೇ ವಿಶ್ವ ಅಕ್ಕ ಸಮ್ಮೇಳನ ಅಮೆರಿಕದ ರಿಚ್ಮಂಡ್, ವರ್ಜೀನಿಯಾದಲ್ಲಿ ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1ರಂದು ನಡೆಯಲಿದೆ.ಕರ್ನಾಟಕ ಹಾಗು ಅಮೆರಿಕದ ಕನ್ನಡ ಜನರನ್ನು ಸೇರಿಸುವ ಕೆಲಸ ವಾಗುತ್ತಿದೆ,ಕರ್ನಾಟದಲ್ಲಿ ಕಲಾವಿದರನ್ನು ಕರ್ನಾಟಕಕ್ಕೆ ತೋರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಅಕ್ಕ ಸಂಘದಿಂದ ಕೇವಲ ಕನ್ನಡ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಲ್ಲದೆ ಚಾರಿಟಿ ಮಾಡಿಕೊಂಡು ಆ ಮೂಲಕ ಆರೋಗ್ಯ, ವ್ಯವಹಾರ, ಸಮಾಜ ಸೇವೆ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ, ಕಿದ್ವಾಯಿ ಸ್ಮಾರಕ ಗ್ರಂಥಿ ಆರೋಗ್ಯ ಸಂಸ್ಥೆಗೆ 1 ಕೋಟಿ ವೆಚ್ಚದ ಬಸ್ ಕೊಡಲಾಗಿದೆ. ಕೋವಿಡ್ ಕಾಲದಲ್ಲಿ ಮೈಸೂರು ಮೃಗಾಲಯಕ್ಕೆ ದೇಣಿಗೆ ಕೊಡಲಾಗಿದೆ ಎಂದರು.
ಇವೆಲ್ಲದರ ಮಧ್ಯೆ ಅತಿವೃಷ್ಟಿಯಾದಾಗ ಕೊಡಗಿನಲ್ಲಿ ಶಾಲೆಗಳನ್ನು ದತ್ತು ತೆಗೆದುಕೊಂಡು ಬರಲಾಗುತ್ತಿದೆ, ಅಮೆರಿಕದಲ್ಲಿರುವ ಕನ್ನಡ ಸಂಘಗಳಿಂದ ನಾಡಿನ ವಿಚಾರಧಾರೆಗಳನ್ನು ಅಮೆರಿಕದಲ್ಲಿ ಇರುವ ಕನ್ನಡಿಗರಿಗೆ ತೋರಿಸುವ ಕೆಲಸವನ್ನು ಮಾಡಲಾಗುತ್ತದೆ. ಕನ್ನಡದ ಕಲಾವಿದರ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲದೆ, ಬಾಷೆ, ಉಳಿಸುವ, ಕಲಿಸುವ ಕೆಲಸ ಮಾಡಲಾಗುತ್ತಿದೆ. ಅಮೆರಿಕದಲ್ಲಿ ಪ್ರತಿ ಯೂನಿವರ್ಸಿಟಿ ಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಮಾಡುವ ಬಗ್ಗೆ ಇಲ್ಲಿನ ಸರ್ಕಾರಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಾಡಿನ ಹೆಸರಾಂತ ಸಾಹಿತಿಗಳನ್ನು ಕರೆಸಿ ವಿಚಾರಧಾರೆಗಳನ್ನು ತಿಳಿಸುವ ಕಾಯಕವನ್ನು ನಿರಂತರವಾಗಿ ಮಾಡಲಾಗುತ್ತದೆ ಎಂದರು. ಕರ್ನಾಟಕ ಹಾಗು ಅಮೆರಿಕ ಸರ್ಕಾರ ನಡೆವೆ ಒಂದು ಸೇತುವೆಯಾಗಿ ಕೆಲಸ ಮಾಡಲಾಗುತ್ತದೆ.
ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು ಅದರಲ್ಲಿ ಕೊನೆ ದಿನ ವಿಶೇಷವಾಗಿ ಪುನೀತ್ ನಮನ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಅದಕ್ಕೆ ಪುನೀತ್ ನೈಟ್ ಹೆಸರಿಡಲಾಗಿದೆ.ಕೊನೆಯ ದಿನ ಪುನೀತ್ ನೆನಪಿಗಾಗಿ ಪುನೀತ್ ನೈಟ್ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ. ಅಕ್ಕ ಸಮ್ಮೇಳನದಲ್ಲಿ ಒಟ್ಟು
25 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಕೊನೆಯದಾಗಿ fashion sho ಮಾಡಲಾಗುತ್ತದೆ ,ಮುಂದಿನ ಪೀಳಿಗೆಗೆ ತೋರಿಸುವ ಹಿನ್ನೆಲೆ ಮಾಡಲಾಗುತ್ತದೆ. ಕೇವಲ ಹಣಕ್ಕಾಗಿ ಅಲ್ಲ, ವ್ಯವಹಾರ ಬೆಳೆಯಲು, ಉತ್ತೇಜಿಸಲು ಸದಾ ಅವಕಾಶವಾಗಿದೆ ಎಂದರು. ಒಟ್ಟು 42 ಅಮೆರಿಕ ಕನ್ನಡ ಸಂಘಗಳು ಸೇರಿ ಈ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ ಎಂದು ಅವರು ತಿಳಿಸಿದರು.
ಸಮ್ಮೇಳನದ ವೈಶಿಷ್ಟ್ಯಗಳು:
ಸಾಂಸ್ಕೃತಿಕ ಕಾರ್ಯಕ್ರಮಗಳು: ಕರ್ನಾಟಕದ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಮೆರಿಕದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸ್ಪರ್ಧೆಗಳು: ಎಲ್ಲಾ ವಯೋಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತರಿಗೆ ಕರ್ನಾಟಕದಿಂದ ಆಗಮಿಸುವ ಗಣ್ಯರಿಂದ ಬಹುಮಾನ ವಿತರಿಸಲಾಗುತ್ತದೆ.
ಫ್ಯಾಶನ್ ಶೋ: ಕನ್ನಡ ನಾಡಿನ ಕಲೆ, ಸಂಸ್ಕೃತಿಯ ವಿವಿಧ ಮಾದರಿಯ ವಸ್ತ್ರ ಮಾದರಿಗಳ ಪ್ರದರ್ಶನ ಆಯೋಜಿಸಲಾಗಿದೆ.
ಸಾಹಿತ್ಯ ಗೋಷ್ಠಿಗಳು: ಅಮೆರಿಕ ಮತ್ತು ಕರ್ನಾಟಕದ ಸಾಹಿತಿಗಳ ನಡುವೆ ಸಮ್ಮಿಲನ ಮತ್ತು ಸಾಹಿತ್ಯ ವಿಚಾರಗೋಷ್ಠಿಗಳು ಜರುಗಲಿವೆ.
ವಿಶೇಷ ಬಿಸಿನೆಸ್ ಫೋರಂ: ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ವಾಣಿಜ್ಯೋದ್ಯಮಿಗಳಿಗೆ ಹಾಗೂ ಅಲ್ಲಿ ಉದ್ಯಮ ಆರಂಭಿಸಲು ಮತ್ತು ಕೆಲಸ ನಿರ್ವಹಿಸಲು ಇರುವ ಅವಕಾಶಗಳ ಕುರಿತು ಆಸಕ್ತ ಕನ್ನಡಿಗರಿಗಾಗಿ ವಿಶೇಷ ಬಿಸಿನೆಸ್ ಫೋರಂ ಮೂಲಕ ಚರ್ಚಿ ನಡೆಸಲಾಗುತ್ತದೆ.
ವಿಶೇಷ ಖಾದ್ಯ: ಮೂರು ದಿನಗಳ ಸಮ್ಮೇಳನದಲ್ಲಿ ಕನ್ನಡ ನಾಡಿನ ವಿಶಿಷ್ಠ ಭಕ್ಷ್ಯ ಬೋಜನ ಸವಿಯುವ ಅವಕಾಶ ಲಭಿಸಲಿದೆ. ಕರ್ನಾಟಕದ ಬಹುತೇಕ ಮಾದರಿಯ ಊಟವನ್ನು ಪ್ರಸಿದ್ಧ ಅಡುಗೆ ತಯಾರಕರು ತಯಾರಿಸಿ ಬಡಿಸಲಿದ್ದಾರೆ
ಪ್ರದರ್ಶನ ಮಳಿಗೆಗಳು: ಅಮೆರಿಕ, ಭಾರತ ಮತ್ತು ಕರ್ನಾಟಕದ ವಿವಿಧ ಇಲಾಖೆ ಮತ್ತು ಮಳಿಗೆಗಳ ಪ್ರದರ್ಶನಗೊಳ್ಳಲಿವೆ.
ಸಂಗೀತ ಕಾರ್ಯಕ್ರಮಗಳು: ಪ್ರತಿದಿನ ಕರ್ನಾಟಕದ ಜಾನಪದ, ಸಾಹಿತ್ಯ, ಸಿನಿಮಾ ಕುರಿತಾದ ಸಂಗೀತ ಕಾರ್ಯಕ್ರಮಗಳು, ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣ, ನವೀನ್ ಸಜ್ಜು, ಅನುರಾಧ ಭಟ್ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಪುನೀತ್ ನಮನ: ಅಕಾಲಿಕವಾಗಿ ನಮ್ಮನ್ನು ಅಗಲಿದ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರಿಗೆ ಸಮರ್ಪಿತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಾರಂಪರಿಕ ನೃತ್ಯಗಳು: ಕರ್ನಾಟಕದ ಪಾರಂಪರಿಕ ನೃತ್ಯ ರೂಪಗಳು, ಯಕ್ಷಗಾನ, ಡೊಳ್ಳು ಕುಣಿತ ಮತ್ತು ವೀರಗಾಸೆ ಪ್ರದರ್ಶನ ಇರಲಿದೆ.
ನಾಟಕ ಮತ್ತು ರಂಗಭೂಮಿ: ಕರ್ನಾಟಕದ ಪ್ರಸಿದ್ಧ ರಂಗಭೂಮಿ ತಂಡಗಳಿಂದ ಕನ್ನಡ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು:
ರಾಜಕೀಯ ಗಣ್ಯರು: ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು.
ಆಧ್ಯಾತ್ಮಿಕ ನಾಯಕರು: ಕರ್ನಾಟಕದ ಗೌರವಾನ್ವಿತ ಆಧ್ಯಾತ್ಮಿಕ ನಾಯಕರು.
ಚಲನಚಿತ್ರ ತಾರೆಗಳು: ಕನ್ನಡ ಚಲನಚಿತ್ರ ರಂಗದ ಪ್ರಮುಖ ತಾರೆಯರು, ಗಣ್ಯರು, ಪ್ರಮುಖರು ಭಾಗವಹಿಸುತ್ತಾರೆ.
ಸಾಹಿತ್ಯ ಕ್ಷೇತ್ರದ ಗಣ್ಯರು: ಪ್ರಸಿದ್ಧ ಸಾಹಿತಿಗಳು ಮತ್ತು ಕವಿಗಳು.
ಉದ್ಯಮಿಗಳು: ನಾಡಿನ ಯಶಸ್ವಿ ಉದ್ಯಮಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.
ವಿಶೇಷ ಆಕರ್ಷಣೆಗಳು:
ಕ್ರೀಡಾ ಚಟುವಟಿಕೆಗಳು: ಯುವಕ, ಯುವತಿಯರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತಂತ್ರಜ್ಞಾನ ವೇದಿಕೆ: ತಂತ್ರಜ್ಞಾನದಲ್ಲಿ ನಾವಿನ್ಯತೆಗಳು, ನವೀನ ತಂತ್ರಜ್ಞಾನ ಉತ್ಪನ್ನಗಳು ಮತ್ತು ಕನ್ನಡಿಗರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಚರ್ಚೆಗಳು ನಡೆಯಲಿವೆ.
ವರ್ಕ್ಶಾಪ್ಗಳು ಮತ್ತು ಪರಿಷತ್ತುಗಳು: ಆರೋಗ್ಯ ಮತ್ತು ಆಯುಷ್, ಶಿಕ್ಷಣ ಮತ್ತು ಕನ್ನಡಿಗರಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳ ಕುರಿತ ಸಂವಾದಗಳು.
ಕಲಾ ಪ್ರದರ್ಶನ: ಕನ್ನಡ ಕಲಾವಿದರ ಚಿತ್ರಗಳು, ಶಿಲ್ಪಿಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ.
ನೆಟ್ವರ್ಕಿಂಗ್ ಕಾರ್ಯಕ್ರಮಗಳು: ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಸಂಪರ್ಕಿಸಲು ನೆಟ್ ವರ್ಕಿಂಗ್ ಕಾರ್ಯಕ್ರಮಗಳ ಆಯೋಜನೆ.
ವಿಶೇಷ ಕಾರ್ಯಕ್ರಮ: ಕನ್ನಡ ಕಲಿಯೋಣ ಬನ್ನಿ”ಕನ್ನಡ ಕಲಿಯೋಣ ಬನ್ನಿ” (ಬನ್ನಿ, ಕನ್ನಡ ಕಲಿಯೋಣ) ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಯೋಜನೆಯು ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಮತ್ತು ಕನ್ನಡ ಭಾಷೆಯ ಕಲಿಕೆಯಲ್ಲಿ ಆಸಕ್ತಿ ತೋರಿಸುವ ಎಲ್ಲರಿಗೂ ಕಲಿಸುವ ಉದ್ದೇಶವನ್ನು ಹೊಂದಿದೆ.
ಈ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಸಂಘಟನೆಗಳು ಸೇರಿ ಅಮೆರಿಕದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಪರಿಗಣಿಸುವಂತೆ ಕೋರಲು ಪ್ರಯತ್ನ ನಡೆಸುವುದಾಗಿ ತಿಳಿಸಿವೆ. ಈ ಕಾರ್ಯಕ್ರಮವು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಅನುಕೂಲವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಕ್ಕ ಅಧ್ಯಕ್ಷರಾದ ರವಿ ಬೋರೇಗೌಡ, ಕಾರ್ಯದರ್ಶಿ ಮಾದೇಶ ಬಸವರಾಜು, ಸಂಚಾಲಕರಾದ ಡಾ. ನವೀನ್ ಕೃಷ್ಣ, ಅಕ್ಕ ಭಾರತದ ಸಂಚಾಲಕರಾದ ತಿಮ್ಮಪ್ಪಗೌಡ ಮತ್ತು ಇತರ ಪದಾಧಿಕಾರಿಗಳು.