ಬೆಂಗಳೂರು: “ಕರ್ನಾಟಕ ಲಿಫ್ಟ್ಗಳ, ಎಸ್ಕಲೇಟರ್ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್ಗಳ (ತಿದ್ದುಪಡಿ) ವಿಧೇಯಕ 2025” ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಯಿತು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಲಿಫ್ಟ್ಗಳ, ಎಸ್ಕಲೇಟರ್ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್ಗಳ (ತಿದ್ದುಪಡಿ) ವಿಧೇಯಕ 2025” ನ್ನು ಮಾನ್ಯ ಇಂಧನ ಇಲಾಖೆಯ ಸಚಿವರಾದ ಕೆ.ಜೆ. ಜಾರ್ಜ್ ಅವರು ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ಬದುಕು ನಡೆಸುತ್ತಿರುವ ಮತ್ತು ವ್ಯಾಪಾರ ಮಾಡುತ್ತಿರುವ ಪ್ರತಿಯೊಬ್ಬರಿಗೂ ನಂಬಿಕೆ-ಆಧಾರಿತ ಆಡಳಿತವನ್ನು ಸುವ್ಯಯಸ್ಥಿತಗೊಳಿಸಲು ಹಾಗೂ ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕ್ರಮಗಳು) ವಿನಿಯಮನಗಳು, 2023ರಲ್ಲಿ ನಿರ್ದಿಷ್ಟಪಡಿಸಲಾದ ಮಾರ್ಪಾಡುಗಳನ್ನು ಪಾಲಿಸುವುದಕ್ಕಾಗಿ, ಕರ್ನಾಟಕ ಲಿಫ್ಟ್ಗಳ, ಎಸ್ಕಲೇಟರ್ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್ಗಳ ಅಧಿನಿಯಮ 2012 (2013 ಕರ್ನಾಟಕ ಅಧಿನಿಯಮ 09)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಸದನದಲ್ಲಿ ಕೋರಿದರು.
ಸದನದಲ್ಲಿ ವಿಧೇಯಕವನ್ನು ಪರ್ಯಾಲೋಚಿಸಿದ ನಂತರ ಸದರಿ ವಿಧೇಯಕಕ್ಕೆ ಅಂಗೀಕಾರ ನೀಡಿದರು.