ಬೆಂಗಳೂರು: ಬೆಂಗಳೂರು ನಗರದ ಉತ್ತರ ಹಾಗೂ ಕೇಂದ್ರ ಜಿಲ್ಲಾ ಅಧ್ಯಕ್ಷರುಗಳ ಘೋಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಇದೇ ವೇಳೆ ಅಧಿಕಾರವನ್ನು ಸಹ ಸ್ವೀಕಾರ ಮಾಡಿದರು.
ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷರುಗಳ ಘೋಷಣಾ ಕಾರ್ಯಕ್ರಮವನ್ನು ನಗರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾಗಿ ಎಸ್.ಹರೀಶ್ ರವರನ್ನು ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾಗಿ ಸಪ್ತಗಿರಿಗೌಡ ರವರುಗಳ ಹೆಸರನ್ನು ಘೋಷಿಸಲಾಯಿತು.
ಬೆಂಗಳೂರು ಉತ್ತರ ಜಿಲ್ಲೆ ಚುನಾವಣಾಧಿಕಾರಿಗಳಾದ ರವಿಸುಬ್ರಹ್ಮಣ್ಯ ರವರು, ಬೆಂಗಳೂರು ಕೇಂದ್ರ ಜಿಲ್ಲಾ ಚುನಾವಣಾಧಿಕಾರಿಗಳಾದ ಹೆಚ್.ಎಸ್.ಗೋಪಿನಾಥ್ ರವರು, ವಿಧಾನಪರಿಷತ್ ಸದಸ್ಯರು ಹಾಗೂ ಮುಖ್ಯ ಸಚೇತಕರಾದ ಎನ್.ರವಿಕುಮಾರ್ ರವರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್ ರವರು, ರಾಜ್ಯ ಕೋಶಾಧ್ಯಕ್ಷರಾದ ಸುಬ್ಬನರಸಿಂಹ(ಸುಬ್ಬಣ್ಣ) ರವರು, ಮಾಜಿ ಜಿಲ್ಲಾಧ್ಯಕ್ಷರಾದ ಬಿ.ನಾರಾಯಣ್ ರವರು, ಬೆಂಗಳೂರು ಮಹಾನಗರದ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.